ರಾಣಿಬೆನ್ನೂರು : 29/4/2026
ತಾಲ್ಲೂಕಿನ ತುಮ್ಮಿನಕಟ್ಟೆ ಸಮೀಪದ ಭೈರನ ಪಾದ ತುಂಗಭದ್ರ ನದಿ ತೀರದಲ್ಲಿ ಕುಟುಂಬದವರೊಡನೆ ವಿಹಾರಕ್ಕೆ ತೆರಳಿದ್ದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಬಿದ್ದು ನಾಪತ್ತೆಯಾದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.
ಹಿರೇಕೆರೂರ ತಾಲ್ಲೂಕು ಕೊಡ ಗ್ರಾಮದ ಅಬ್ಬಾಸ್ ನಾಸೂರ್ (52) ಎಂಬುವರು ತಮ್ಮ ಕುಟುಂಬದೊಂದಿಗೆ ವಿಹಾರಕ್ಕೆ ಭೈರನ ಪಾದ ತುಂಗಭದ್ರ ನದಿ ತೀರಕ್ಕೆ ಹೋಗಿದ್ದು ಬಂಡೆ ಮೇಲೆ ಕುಳಿತು ಸ್ನಾನ ಮಾಡುವ ಸಂಧರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ನೋಡ ನೋಡುತ್ತಿದ್ದಂಗೆ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆಂದು ಮಾಹಿತಿ ಲಭ್ಯ ವಾಗಿದೆ.
ಪ್ರಸ್ತುತ ಸ್ಥಿತಿ:- ನಾಪತ್ತೆಯಾದ ವ್ಯಕ್ತಿಗಾಗಿ ಸ್ಥಳೀಯರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವದರಿಂದ ಶೋಧ ಕಾರ್ಯಕ್ಕೆ ಸಾವಾಲಾಗಿದೆ. ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು ಸಾರ್ವಜನಿಕರು ನದಿ ತೀರಕ್ಕೆ ತೇರಳುವಾಗ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ.
ವರದಿ: ನವೀದ್ ಶಿರಾಳಕೊಪ್ಪ 9538633929

