ಶಿರಾಳಕೊಪ್ಪ:15/2/2026.
ಪಟ್ಟಣ ಸಮೀಪದ ಜಾವಗಟ್ಟಿಯ ಬಳಿ ಬೈಕ್ ಮತ್ತು ಟ್ಯಾಕ್ಟರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತ ಬೈಕ್ ಸವಾರ ಬಸವನಂದಿಹಳ್ಳಿ ಗ್ರಾಮದ ಕೃಷಿಕ ಮಲ್ಲಿಕಾರ್ಜುನಪ್ಪ ಕಂಡೇರ (56) ಎಂದು ಗುರುತಿಸಲಾಗಿದೆ.
ಪತ್ನಿ ಪಾರ್ವತಮ್ಮ ಅವರ ಜತೆ ಸೊರಬ ತಾಲೂಕಿನ ಗಂಗವಳ್ಳಿ ಗ್ರಾಮಕ್ಕೆ ವಿವಾಹಿತ ಮಗಳನ್ನು ನೋಡುವ ಸಲುವಾಗಿ ಶಿರಾಳಕೊಪ್ಪದ ಕಡೆಯಿಂದ ಹೊರಟಿದ್ದರು, ಎದುರಿಗೆ ಬಂದ ಟ್ಯಾಕ್ಟರ್ ಮುಖ್ಯ ರಸ್ತೆಯಲ್ಲಿ ಜಾವಗಟ್ಟಿಯ ಬಳಿ ಮಳೂರಿಗೆ ತೆರಳುವ ರಸ್ತೆಗೆ ಬಲಕ್ಕೆ ಸಂಚರಿಸಿದಾಗಿ ಬೈಕ್ ಡಿಕ್ಕಿಯಾಗಿ ಬೈಕ್ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಹಿಂಬದಿ ಕುಳಿತ ಪತ್ನಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ, ಮೃತರು ಬಸವನಂದಿಹಳ್ಳಿ ದೇವಸ್ಥಾನ ಕಮೀಟಿ ಮಾಜಿ ಸದಸ್ಯರಾಗಿದ್ದರು. ಪಟ್ಟಣದ ಫೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

