ಹ್ಯಾಮರ್ ಹಿಡಿಯೋ ಕೈಯಲ್ಲಿ ಹಂತಕ ಬಂದೋಕು! ಶಿಕಾರಿಪುರದ ಕಾರ್ಪೆಂಟರ್ ಮನೆಯಲ್ಲೇ ಇತ್ತು ಸೀಕ್ರೆಟ್ ಗನ್ ಫ್ಯಾಕ್ಟರಿ….

The Siasat News - Images

ಶಿಕಾರಿಪುರ:5/1/2026

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಈಗ ಗಡಗಡ ಎನ್ನುತ್ತಿದೆ ಒಬ್ಬ 67 ವರ್ಷದ ವೃದ್ಧ ಕಾರ್ಪೆಂಟರ್ ತನ್ನ ಮರದ ಕೆಲಸದ ಮರೆಯಲ್ಲಿ ಮಾಡುತ್ತಿದ್ದ ಆ ಭೀಕರ ಕೃತ್ಯ ಈಗ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.

ವೃದ್ಧನ ಸೀಕ್ರೆಟ್ ಆಪರೇಷನ್: ತಾಲೂಕಿನ ಭದ್ರಾಪುರ ಗ್ರಾಮದ ಲಕ್ಷ್ಮಣಪ್ಪ 67 ಎಂಬವ ಹಗಲಿನಲ್ಲಿ ಸುತ್ತಿಗೆ ಹಿಡಿದು ಬಡಗಿ ಕೆಲಸ ಮಾಡುತ್ತಿದ್ದರೆ ಕತ್ತಲಾಗುತ್ತಿದ್ದಂತೆ ಅದೇ ಮನೆಯಲ್ಲಿ ನಾಡಬಂದೊಕು ಗಳನ್ನು ತಯಾರಿಸುತ್ತಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರಿಗೆ ಲಕ್ಷ್ಮಣಪ್ಪನ ಹಳೆಯ ಮನೆಯಲ್ಲಿ ಅಕ್ರಮ ಬಂದೂಕುಗಳ ಬೃಹತ್ ಕಾರ್ಖಾನೆಯೇ ಪತ್ತೆಯಾಗಿದೆ.

ಬಯಲಾದ ಭೀಕರ ಸತ್ಯ: ಪೊಲೀಸರು ದಾಳಿ ನಡೆಸಿದಾಗ ಅಲ್ಲಿ ಕದ್ದಿಟ್ಟ ಬರೋಬ್ಬರಿ 7 ಸಿಂಗಲ್ ಬ್ಯಾರಲ್ ನಾಡಬಂದೂಕುಗಳು ಪತ್ತೆಯಾಗಿವೆ.

The Siasat News - Images

ಗುಜರಿ ವಸ್ತುಗಳೇ ಆಯುಧಗಳು: ಶಿವಮೊಗ್ಗದ ವಿವಿಧ ಗುಜರಿ ಅಂಗಡಿಗಳಿಂದ ಹಳೆಯ ಸ್ಟೀರಿಂಗ್‌ಗಳು, ಟ್ರಿಗರ್ ಹಾಗೂ ಬಿಡಿ ಭಾಗಗಳನ್ನು ತಂದು, ತನ್ನ ಕಾರ್ಪೆಂಟರ್ ಕೌಶಲ್ಯ ಬಳಸಿ ಘಾತಕ ಬಂದೂಕುಗಳನ್ನು ತಯಾರಿಸುತ್ತಿದ್ದ ಲಕ್ಷ್ಮಣಪ್ಪ ನನ್ನು ಪೋಲೀಸರು ಬಂಧಿಸಿ ಪಟ್ಟಣ ಠಾಣಾ ಗುನ್ನೆ ನಂ. 22/2026 ಕಲಂ.25(1)(ಎ) ಶಸ್ತ್ರಾತ್ಸ ತಿದ್ದುಪಡಿ ಅಧಿನಿಮಯ 2019ರ ರೀತ್ಯಾ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಾಜ್ಯಾದ್ಯಂತ ತಲ್ಲಣ: ಬೆಂಗಳೂರು, ಮೈಸೂರಿನಲ್ಲಿ ಡ್ರಗ್ಸ್ ಕಾರ್ಖಾನೆಗಳು ಪತ್ತೆಯಾಗುತ್ತಿರುವ ಬೆನ್ನಲ್ಲೇ ಶಿಕಾರಿಪುರದಲ್ಲಿ ಈ ಅಕ್ರಮ ಶಸ್ತ್ರಾಸ್ತ್ರ ಫ್ಯಾಕ್ಟರಿ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮತ್ತು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಶಿವಮೊಗ್ಗದ ಎಸ್‌ಪಿ ಬಿ. ನಿಖಿಲ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈ ಎಸ್‌ಪಿ ಕೇಶವ ಹಾಗೂ ಸಿಪಿಐ ಸಂತೋಷ್ ಪಾಟೀಲ್ ನೇತೃತ್ವದ ತಂಡ ಮಿಂಚಿನ ದಾಳಿ ನಡೆಸಿ ಈ ಜಾಲವನ್ನು ಭೇದಿಸಿದೆ.

ವರದಿ:ನವೀದ್ ಶಿರಾಳಕೊಪ್ಪ.

Share the news!

Leave a Reply

Your email address will not be published. Required fields are marked *