ಪೌತಿ ಖಾತೆ ಬದಲಾವಣೆಗೆ 4ಲಕ್ಷ ಲಂಚ ಬೇಡಿಕೆ ಇಟ್ಟ ಶಿಕಾರಿಪುರದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ…

The Siasat News - Images

ಶಿಕಾರಿಪುರ:30/1/2026.

ಜಮೀನಿನ ಪೌತಿ ಖಾತೆ ಬದಲಾವಣೆ ಪ್ರಕ್ರಿಯೆಗೆ 4ಲಕ್ಷ ಹಣದ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ಸಂಧರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಲೋಕಾಯುಕ್ತ ಪೋಲೀಸರು ಶುಕ್ರವಾರ ಬಲೆಗೆ ಬೀಳಿಸಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಚಿಕ್ಕಜಂಬೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ವಿಠಲ್ ಕೋಲ್ಹರ ಅವರು ಪಟ್ಟಣದ ನೌಕರರ ಕ್ಯಾಂಟೀನ್ ನಲ್ಲಿ 1ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಂಧಿತರಾಗಿದ್ದಾರೆ.

ಚಿಕ್ಕಜಂಬೂರು ಗ್ರಾಮದ ಜಿಕ್ರಿಯಾ ಬೇಗ್ ಅವರು ತಮ್ಮ ತಂದೆಯ ವಿಲ್ ಪತ್ರದಂತೆ ಜಮೀನಿನ ಖಾತೆ ಬದಲಾವಣೆ ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣ ಗೊಳಿಸಲು ಗ್ರಾಮ ಲೆಕ್ಕಾಧಿಕಾರಿ ಒಟ್ಟು 4ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಲಂಚದ ಮೊದಲ ಕಂತಾಗಿ ಒಂದು ಲಕ್ಷ ರೂಪಾಯಿಗಳನ್ನು ಪಟ್ಟಣದ ಸರ್ಕಾರಿ ನೌಕರರ ಕ್ಯಾಂಟೀನ್ನಲ್ಲಿ ನೀಡುವಂತೆ ಸೂಚಿಸಿದ್ದು ಹಣ ಪಡೆಯುವಾಗ ಲೋಕಾಯುಕ್ತ ಎಸ್ ಪಿ ಕೌಲಾಪುರೆ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿಪಿ ಚಂದ್ರಶೇಖರ್ ಹಾಗೂ ಇನ್ಸ್ಪೆಕ್ಟರ್ ಗಳಾದ ಗುರುರಾಜ್ ಎನ್ ಮೈಲಾರ,ರುದ್ರೇಶ್,ಮತ್ತು ವೀರಬಸಪ್ಪ ದಾಳಿ ನಡೆಸಿ ಭಂದಿಸಿದ್ದಾರೆ.

Share the news!

Leave a Reply

Your email address will not be published. Required fields are marked *