ಶಿಕಾರಿಪುರ/ಶಿರಾಳಕೊಪ್ಪ: 28/1/2026
ಶಿಕಾರಿಪುರದ ಲೇಖಕ ಹಾಗೂ ಪತ್ರಕರ್ತ ನವೀನ್ ಕುಮಾರ್ ಎಂ ಅವರು ಬರೆದಿರುವ “ಬುದ್ಧಿವಂತರು ಬಡವರಾಗುವುದು ಏಕೆ?” ಎಂಬ ಕನ್ನಡದ ಪ್ರಯೋಗಾತ್ಮಕ ಕೃತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಡಿಯಲ್ಲಿ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ (2025–26)ಕ್ಕೆ ಆಯ್ಕೆಯಾಗಿದೆ.

ಈ ಕೃತಿ ಲೇಖಕರ ಮೊದಲ ಪುಸ್ತಕವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ವಿರಳವಾದ ನ್ಯೂರೋ ಎಕನಾಮಿಕ್ಸ್ (Neuro Economics) ವಿಷಯವನ್ನು ಸರಳ ಭಾಷೆಯಲ್ಲಿ ಓದುಗರಿಗೆ ತಲುಪಿಸುವ ಉದ್ದೇಶ ಹೊಂದಿದೆ. ಹಣ ಮತ್ತು ಮಾನವ ಮನಸ್ಸಿನ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಮೂಲಕ, ಆರ್ಥಿಕ ಅರಿವು ಮತ್ತು ಚಿಂತನೆಗೆ ಹೊಸ ಆಯಾಮ ನೀಡುವ ಪ್ರಯತ್ನ ಈ ಕೃತಿಯಾಗಿದೆ.ಪುಸ್ತಕ ಇನ್ನೂ ಬಿಡುಗಡೆಯಾಗುವ ಮುನ್ನವೇ ದೊರೆತ ಈ ಮಾನ್ಯತೆ, ಕನ್ನಡದಲ್ಲಿ ಆಧುನಿಕ ವಿಷಯಗಳು ಹಾಗೂ ಹೊಸ ಚಿಂತನೆಗಳಿಗೆ ಸಿಗುತ್ತಿರುವ ಸ್ವೀಕಾರವನ್ನು ತೋರಿಸುತ್ತದೆ. ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಕನ್ನಡ ಪುಸ್ತಕ ಪ್ರಾಧಿಕಾರದ ಈ ಯೋಜನೆ, ರಾಜ್ಯದ ಸಾಹಿತ್ಯ ವಲಯದಲ್ಲಿ ಮಹತ್ವ ಪಡೆದಿದೆ.
ದಿ ಸಿಯಾಸತ್ ನ್ಯೂಸ್ ಕರ್ನಾಟಕ. (ನವೀದ್ ಶಿರಾಳಕೊಪ್ಪ 9538633929)

