ಶಿರಾಳಕೊಪ್ಪ,ಶಿಕಾರಿಪುರ ಮಾರ್ಗವಾಗಿ ಮಂಗಳೂರಿಗೆ ಬಸ್‌ ಆರಂಭ…

The Siasat News - Images

ಶಿರಾಳಕೊಪ್ಪ/ಶಿಕಾರಿಪುರ : 20/12/2025

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಾಳಕೊಪ್ಪ,ಶಿಕಾರಿಪುರ ಮಾರ್ಗವಾಗಿ ಹಾವೇರಿ–ಮಂಗಳೂರು ನಡುವೆ ಹೊಸ ರಾತ್ರಿ ಬಸ್ ಸೇವೆಯನ್ನು ಪ್ರಾರಂಭಿಸಿದೆ.

ಈ ಬಸ್ ಪ್ರತಿದಿನ ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿದೆ.ವೇಳಾಪಟ್ಟಿಯಂತೆ ಬಸ್ ಸವಣೂರದಿಂದ ರಾತ್ರಿ ಹೊರಟು ಹಾವೇರಿಯನ್ನು ರಾತ್ರಿ 9.40ಕ್ಕೆ ಬಿಡಲಿದೆ. ಬಳಿಕ ಚಿಕ್ಕೇರೂರು (10.50), ಅಗ್ರಹಾರಮುಚಡಿ, ನರಸಾಪುರ, ಬಿಳಿಕಿ, ಶಿರಾಳಕೊಪ್ಪ (11.30), ಶಿಕಾರಿಪುರ, ಆನಂದಪುರ, ಹೊಸನಗರ, ಮಣಿಪಾಲ, ಉಡುಪಿ ಮಾರ್ಗವಾಗಿ ಸಂಚರಿಸಿ ಮಂಗಳೂರನ್ನು ಬೆಳಗ್ಗೆ 6.00ಕ್ಕೆ ತಲುಪಲಿದೆ.

The Siasat News - Images

. ಮರುಪ್ರಯಾಣದಲ್ಲಿ ಬಸ್ ಮಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟು ಅದೇ ಮಾರ್ಗದಲ್ಲಿ ಸಂಚರಿಸಿ ಶಿರಾಳಕೊಪ್ಪವನ್ನು ಬೆಳಗಿನ ಜಾವ 3.00ಕ್ಕೆ, ಚಿಕ್ಕೇರೂರನ್ನು 4.00ಕ್ಕೆ ತಲುಪಿ ಹಾವೇರಿಯನ್ನು ಬೆಳಗ್ಗೆ 5.00ಕ್ಕೆ ಸೇರುತ್ತದೆ.

ಈ ಹೊಸ ಸೇವೆಯಿಂದ ಮಂಗಳೂರು ಹಾಗೂ ಮಣಿಪಾಲದ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗಿ ಬರುವವರಿಗೆ, ಹಾಗೆಯೇ ಹಾವೇರಿ–ಹುಬ್ಬಳ್ಳಿ ಭಾಗಕ್ಕೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಸ್ಥಳೀಯ ಸಾರ್ವಜನಿಕರು ಈ ಸರ್ಕಾರಿ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಲಾಗಿದೆ.

ಹೊಸ ಸೇವೆ ಆರಂಭಿಸಿದ ಹಿನ್ನೆಲೆಯಲ್ಲಿ ವಾಯುವ್ಯ ಸಾರಿಗೆ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ್ ಹಾಗೂ ಹಾವೇರಿ ವಿಭಾಗದ DTO ಅಶೋಕ್ ಪಾಟೀಲ್ ಅವರನ್ನು ಸಾಮಾಜಿಕ ಕಾರ್ಯಕರ್ತ ನಾಗಭೂಷಣ್ ಸ್ವಾಮಿ (ಬಿಳಿಕಿ), ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ನಾಗರಾಜ್ ಕೆ. (ಅಗ್ರಹಾರಮುಚಡಿ) ಸೇರಿದಂತೆ ಶಶಿಧರ್, ಶಶಿಕುಮಾರ್, ಪ್ರಶಾಂತ್ ಅವರುಗಳು ಹಾವೇರಿ ವಿಭಾಗೀಯ ಕಚೇರಿಯಲ್ಲಿ ಸನ್ಮಾನಿಸಿದರು.

Share the news!

Leave a Reply

Your email address will not be published. Required fields are marked *