ಶಿರಾಳಕೊಪ್ಪ ಸವಿತಾ ಸಮಾಜದ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ….

The Siasat News - Images

ಶಿರಾಳಕೊಪ್ಪ :17/12/2025.

ಪಟ್ಟಣದ ಸವಿತಾ ಸಮಾಜ ವತಿಯಿಂದ ಸಮಾಜದ ಬೆಳ್ಳಿ ಹಬ್ಬದ ಸವಿ ನೆನಪಿನ ಅಂಗವಾಗಿ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಯಿತು.

ರಿಪ್ಪನ್ ಪೇಟೆಯ ಸವಿತಾ ಸಮಾಜ ಪ್ರಥಮ, ಮಾವಲಿ ಯ ಓಲಂಪಿಕ್ ಬಾಯ್ಸ್ ದ್ವಿತೀಯ ಹಾಗೂ ಜೀರಿಗೆ ಮನೆ ಸವಿತಾ ಸಮಾಜದ ಹುಡುಗರು ತೃತೀಯ ಬಹುಮಾನ ಗಳಿಸಿದರು..

The Siasat News - Images

ಪಂದ್ಯಾವಳಿ ಪೂರ್ವದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶಿರಾಳಕೊಪ್ಪ ಸವಿತಾ ಸಮಾಜದ ಅಧ್ಯಕ್ಷರಾದ ನಾಗರಾಜ್ ಭಂಡಾರಿ, ಆರಕ್ಷಕ ಠಾಣಾಧಿಕಾರಿ ಪ್ರಶಾಂತ್ ಕುಮಾರ್, ಪ್ರಗತಿಪರ ರೈತ ಮತ್ತು ಉದ್ಯಮಿ ಮನೋಹರ (ಸಾಯಿಬಾಬಾ), ಪುರಸಭಾ ಮಾಜಿ ನಾಮನಿರ್ದೇಷಿತ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಗಣೇಶ್ ಭಂಡಾರಿ, ಉದ್ಯಮಿ ಮಂಜುನಾಥ, ರಂಜನ್ ಭಂಡಾರಿ, ಕಲಾವಿದ ರತ್ನಾಕರ ಭಂಡಾರಿ, ಬಸವರಾಜು, ಕಟಿಂಗ್ ಶಾಪ್ ಸೀನಾ, ಹಾಗೂ ಊರಿನ ಕ್ರೀಡಾಭಿಮಾನಿಗಳು, ಸವಿತಾ ಸಮಾಜ ಭಾಂದವರು, ಹಾಜರಿದ್ದರು.

ವರದಿ: ನವೀದ್ ಶಿರಾಳಕೊಪ್ಪ. .

Share the news!

Leave a Reply

Your email address will not be published. Required fields are marked *