ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಂದ ಮಧುಮೇಹ ಜಾಗೃತಿ…

The Siasat News - Images

ಶಿರಾಳಕೊಪ್ಪ:14/11/2025

ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಸ್ವಾಮಿ ವಿವೇಕಾನಂದ ಶಾಲೆ, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತುವಿಶ್ವ ಮಧುಮೇಹ ದಿನಾಚರಣೆಯನ್ನು ವಿಶೇಷ ವಾಗಿ ಆಚರಿಸಲಾಯಿತು.

The Siasat News - Images

ಮಕ್ಕಳೇ ಜಾಗೃತಿ ರಾಯಭಾರಿಗಳಾಗಿ ವಾಕಥಾನ್ ಮೂಲಕ ಮಧುಮೇಹ ಅರಿವು ಮೂಡಿಸುವ ಘೋಷಣೆಯೊಂದಿಗೆ ಬಿತ್ತಿ ಪತ್ರ ವಿತರಿಸಿ ವಿಶಿಷ್ಟ ವಾಗಿ ಎರಡೂ ದಿನಾಚರಣೆಗಳನ್ನು ವಿನೂತನ ವಾಗಿ ಆಚರಿಸಿದರು.

ವಾಕಥಾನ್ ನಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಲಯನ್ಸ್ ಕ್ಲಬ್ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದು ಪಟ್ಟಣದ ಆನವಟ್ಟಿ ರಸ್ತೆಯಿಂದ ಬಸವೇಶ್ವರ ಬ್ಯಾಂಕ್ ವರೆಗೆ ಜಾಥಾ ನಡೆಸಿ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಊರಿನ ಪ್ರಸಿದ್ಧ ಮಕ್ಕಳ ವೈದ್ಯ ಡಾ. ಶ್ರೀನಾಥ್ ರವರು ಮಧುಮೇಹದ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ಲಯನ್ಸ್ ಅಧ್ಯಕ್ಷ ಯೋಗಿರಾಜ್, ಕಾರ್ಯದರ್ಶಿ ರೇಣುಕಯ್ಯ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆಯ ಅವಿನಾಶ್, ಅರುಣ್, ರವಿಕುಮಾರ್, ಬಸವೇಶ್ವರ ಬ್ಯಾಂಕ್ ನ ಅಧ್ಯಕ್ಷ ನಟರಾಜ್, ನಿರ್ದೇಶಕರು ಸಿಬ್ಬಂದಿ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *