ಶಿರಾಳಕೊಪ್ಪ:14/10/2025
ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ ಮತ್ತು ಅಡಿಕೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಸರಕಾರ ಆದಷ್ಟು ಬೇಗ ರೈತರಿಗೆ ಬೆಳೆ ವಿಮೆ ಕೊಡಬೇಕೆಂದು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಶಿರಾಳಕೊಪ್ಪದ ಉಪ ತಹಸೀಲ್ದಾರ್ ರವರ ಮೂಲಕ ಬೆಳೆವಿಮೆ ವಿಚಾರವಾಗಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಆದರೆ ಇನ್ನೂವರೆಗೂ ಕೂಡ ಬೆಳೆ ವಿಮೆ ಮಾತ್ರ ಬಂದಿಲ್ಲ ಆದಷ್ಟು ಬೇಗ ಸರಕಾರ ಅಡಿಕೆ ಮತ್ತು ಮೆಕ್ಕೆಜೋಳಕ್ಕೆ ಬೆಳೆ ವಿಮೆ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನ ಗೌಡ್ರು ಮಾತನಾಡಿ ಕೊಳೆ ರೋಗ ದಿಂದಾಗಿ ಸುಮಾರು 90%ನಷ್ಟು ಅಡಿಕೆ ಉದುರಿ ಹೋಗಿದೆ ಸಂಭಂದ ಪಟ್ಟ ಅಧಿಕಾರಿ ಗಳು ಇದನ್ನು ಸರಿಯಾಗಿ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ನೀಡಿ ರೈತರಿಗೆ ಅನುಕೊಲ ಮಾಡಿಕೊಡ ಬೇಕು. ಕಳೆದ ವರ್ಷ 2024ರಲ್ಲಿ ಅಡಿಕೆ ಗೆ ಕಟ್ಟಿದಂತಹ ಬೆಳೆವಿಮೆ ಇನ್ನೂ ಬಂದಿಲ್ಲ ವಿಮಾ ಕಂಪನಿ ಗಳು ವಿಮೆ ಬಿಡುಗಡೆ ಮಾಡಬೇಕೆಂದು ಹೇಳಿದರು.
ಈ ಸಂಧರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಾಜಣ್ಣ ಮುಗಳಿಕೊಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಜಣ್ಣ, ಹಾಗೂ ಸಂಘದ ಸದಸ್ಯರಾದ ಹನುಮಂತಪ್ಪ, ಚನ್ನವೀರಪ್ಪ, ಚನ್ನಬಸಪ್ಪ ಮತ್ತಿತರರು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ

