ವಿಜಯ ದಶಮಿ ಹಬ್ಬ ಎಲ್ಲರನ್ನೂ ಒಟ್ಟು ಗೊಳಿಸುವ ಸೇತುವೆ- ದಸರಾ ಸಮಿತಿ ಅಧ್ಯಕ್ಷ ಯುವರಾಜ್ ಬಳ್ಳಾರಿ ಅಭಿಮತ….

The Siasat News - Images

ಶಿರಾಳಕೊಪ್ಪ:01-09-2025

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ವಿಜಯ ದಶಮಿ ಉತ್ಸವ ಸಮಿತಿ ಸಭೆ ಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತವೆ ನಾಡಿನ ಸಂಸ್ಕೃತಿಯ ಪ್ರತೀಕವಾದ ವಿಜಯ ದಶಮಿ ಹಬ್ಬವು ಎಲ್ಲರನ್ನು ಒಟ್ಟುಗೋಡಿಸುವ ಸೇತುವೆಯಾಗಿದೆ.ಕೆಟ್ಟ ಶಕ್ತಿಗಳ ಮೇಲೆ ಒಳ್ಳೆಯ ಶಕ್ತಿಯ ವಿಜಯವನ್ನು ದಸರಾ ಪ್ರತಿನಿಧಿಸುತ್ತದೆ. ಪಟ್ಟಣದಲ್ಲಿ ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ದಸರಾ ಉತ್ಸವ ಅದ್ದೂರಿಯಾಗಿ ನಡೆಯುತ್ತಿರುವುದು ಸಂತಸದ ವಿಷಯ ಅದೇ ರೀತಿಯಾಗಿ ಪ್ರಸಕ್ತ ವರ್ಷದಲ್ಲಿಯೂ ಸಹ ಅದ್ದೂರಿಯಾಗಿ ಮತ್ತು ವಿಜೃಂಭಣೆ ಯಿಂದ ನಾಡ ಹಬ್ಬ ವಿಜಯ ದಶಮಿ ಯನ್ನು ಆಚರಣೆ ಮಾಡಲಾಗುವುದು.ಗುರುವಾರ ನಡೆಯುವ ದಸರಾ ಉತ್ಸವ ದಲ್ಲಿ ಎಲ್ಲಾ ದೇವರ ಪಲ್ಲಕ್ಕಿ ಮೆರವಣಿಗೆ, ನಾಸಿಕ್ ಡೋಲ್, ಮಹಿಳಾ ಕೋಲಾಟ, ಮಹಿಳಾ ಡೊಳ್ಳು, ಗೊರಿಲ್ಲ ಪ್ರದರ್ಶನ, ಗೊಂಬೆ ಕುಣಿತ, ವೀರಗಾಸೆ, ತಮಟೆ ಮೇಳ ಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಯಲಿದೆ. ನಂತರ ಎಲ್ಲರೂ ಸೇರಿ ಶಮಿ ಪೂಜೆ , ಪರಸ್ಪರ ಬನ್ನಿ ವಿನಿಮಯ ಮಾಡಿಕೊಳ್ಳೋಣ ಎಂದು ಕರೆ ನೀಡಿದರು.

ಸಮಾಜದ ಮುಖಂಡ ಶಿವಾನಂದ ಸ್ವಾಮಿ ಮಾತನಾಡಿ ಹಿಂದೂ ಸಮಾಜ ಒಂದೆಡೆ ಸೇರಲು ಹಿಂದಿನ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿ ಇಂದಿನವರೊಗೂ ಮುಂದುವರೆದಿದೆ. ಯುವಕರು ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ಉತ್ಸವ ನಡೆಸುತ್ತಿದ್ದಾರೆ ಅವರ ಹಿಂದೆ ಸದಾ ಹಿರಿಯರಾದ ನಾವುಗಳು ಇರುತ್ತೇವೆಂದು ಹುರಿದುಂಬಿಸಿದರು.

ಮೆರವಣಿಗೆ ಸಮಿತಿಯ ರಟ್ಟಿಹಳ್ಳಿ ಲೋಕೇಶ್ ಮಾತನಾಡಿ ಭೇದ ಭಾವ ಇಲ್ಲದೆ ಹಬ್ಬ ಮಾಡುತ್ತೇವೆ. ಇಲ್ಲಿ ರಾಜಕೀಯ ಇಲ್ಲ, ಯುವಕರಲ್ಲಿ ನಾಡ ಹಬ್ಬ ದಸರಾ ಉತ್ಸುಕತೆ ಹೆಚ್ಚಾಗಲಿ ಎಂದರು.

ಸಮಾಜದ ಮುಖಂಡ ಹೆಚ್ ಎಂ ಚಂದ್ರಶೇಖರ್ ಮಾತನಾಡಿ ದಾನಿಗಳ ಸಹಕಾರ, ಯುವಕರ ಕ್ರಿಯಾಶೀಲತೆಯಿಂದ ದಸರ ಮೆರಗು ತರಲಿ ಎಂದರು.

ಸಭೆಯಲ್ಲಿ ಕಾರ್ಯದರ್ಶಿ ಸತೀಶ್ ಕುಂಕುಮಗಾರ, ಖಜಾಂಚಿ ಸಂತೋಷ್, ತಿರುಕಪ್ಪ, ಸುಬ್ರಮಣ್ಯ ಪೂಜಾರ್, ರಾಘವೇಂದ್ರ , ಎ ಸಿ ಅರುಣ್ ಕುಮಾರ್, ಸಿದ್ದು , ಪವನ್ ಕಲಾಲ್, ಆಟೋ ಮೈಲಾರಿ, ಮಂಜುನಾಥ್ ಜಿಲೇಬಿ ಇನ್ನಿತರರು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *