ಇತ್ತೇಹಾದ್ ಫೌಂಡೇಶನ್ ನ ಮತ್ತೊಂದು ಅಂಗ ಸಂಸ್ಥೆ ಇತ್ತೇಹಾದ್ ಮೋವ್ಮೆಂಟ್ ಆರಂಭ..

The Siasat News - Images

ಶಿರಾಳಕೊಪ್ಪ:22-9-2025

ಪಟ್ಟಣದಲ್ಲಿ ಸಮಾಜ ಸೇವೆ ಮತ್ತು ನಿರ್ಗತಿಕರ ಧ್ವನಿ ಯಾಗಿ ಕಳೆದ 9 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿರುವ ಇತ್ತೇ ಹಾದ್ ಫೌಂಡೇಶನ್ ವತಿಯಿಂದ ಅದರ ಮತ್ತೊಂದು ಅಂಗ ಸಂಸ್ಥೆ ಯನ್ನು ಪ್ರಾರಂಭ ಮಾಡಲಾಗಿದ್ದು ವಿಶೇಷ ವಾಗಿ 25 ವರ್ಷ ಒಳಗಿನ ಯುವಕರನ್ನು ಸದರಿ ಸಂಸ್ಥೆ ಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್ ನ ಅಧ್ಯಕ್ಷ ಸಂಜೀದ್ ತಿಳಿಸಿದರು.

The Siasat News - Images

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹೊಸ ತಂಡದ ಮುಖ್ಯಸ್ಥರನ್ನು ಆಯ್ಕೆ ಮಾಡಿ ಮಾತನಾಡಿದ ಅವರು ಪಟ್ಟಣವು ದಿನೇದಿನ ಬೆಳೆಯುತ್ತಿರುವ ಮತ್ತು ಹೊಸ ಉತ್ಸಾಹಿ ಯುವಕರ ಸಮಾಜ ಮುಖಿ ಕಾರ್ಯ ಗಳಲ್ಲಿ ಆಸಕ್ತಿಯನ್ನು ಪರಿಗಣಿಸಿ ಮತ್ತೊಂದು “ಇತ್ತೆಹಾದ್ ಮೋವ್ಮೆಂಟ್” ಎಂಬುವ ಹೆಸರಿನಲ್ಲಿ ಹೊಸ ತಂಡವನ್ನು ರಚನೆ ಮಾಡಲಾಗಿದೆ. ಈ ಸಂಸ್ಥೆಯು ಇತ್ತೇಹಾದ್ ಫೌಂಡೇಶನ್ ನ ಅಂಗ ಸಂಸ್ಥೆ ಯಾಗಿ ಫೌಂಡೇಶನ್ ನ ಮಾರ್ಗದರ್ಶನ ದಲ್ಲಿ ಕೆಲಸ ಮಾಡಲಿದೆ ಎಂದರು.

ಇತ್ತೇಹಾದ್ ಮೋವ್ಮೆಂಟ್ ಗೆ ಅಧ್ಯಕ್ಷರಾಗಿ ಸಯ್ಯದ್ ಆಜಮ್ ಹಾಗೂ ಕಾರ್ಯದರ್ಶಿ ಯಾಗಿ ಎಜಾಜ್ ಐಮನ್ ಆಯ್ಕೆ ಗೊಂಡರು.

ಈ ಸಂಧರ್ಭ ದಲ್ಲಿ ಫೌಂಡೇಶನ್ ನ ಸದಸ್ಯರಾದ ಡಾll ಸಫೀರ್,ಮುಸ್ತಾಕ್ ಖಾನ್, ಜಾಕೀರ್ ಹುಸೇನ್, ಸುಹೈಲ್, ರಬ್ಬಾನಿ, ಕಲೀಂ ಬಿಳಿಕಿ, ಮುಹಸಿನ್ ಖಾನ್ ಮತ್ತಿತರರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *