ಈದ್ ಮೀಲಾದ್ ಪ್ರಯುಕ್ತ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿದ ಸುನ್ನಿ ದಾವತೆ ಇಸ್ಲಾಮಿ ಶಿರಾಳಕೊಪ್ಪ ಘಟಕ…

The Siasat News - Images

ಶಿರಾಳಕೊಪ್ಪ:5-9-2025

ಈದ್ ಮಿಲಾದ್ ಉನ್ ನಬಿ ಹಬ್ಬವು ಪ್ರವಾದಿ ಮುಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಮತ್ತು ರಬಿ ಅಲ್-ಅವ್ವಲ್ ತಿಂಗಳ 12 ನೇ ದಿನದಂದು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು, ಮುಸ್ಲಿಮರು ಪ್ರಾರ್ಥನೆಗಳು, ಕುರಾನ್ ಪಠಣಗಳು, ಧರ್ಮೋಪದೇಶಗಳು ಮತ್ತು ಪ್ರವಾದಿಯವರ ಶಾಂತಿ ಮತ್ತು ಕರುಣೆಯ ಬೋಧನೆಗಳನ್ನು ಪ್ರತಿಬಿಂಬಿಸುವ ದಾನ ಕಾರ್ಯಗಳಿಗಾಗಿ ಒಟ್ಟುಗೂಡುತ್ತಾರೆ.

ಪಟ್ಟಣದ ಸುನ್ನಿ ದಾವತೆ ಇಸ್ಲಾಮಿ ಸಂಘಟನೆ ವತಿಯಿಂದ ಪ್ರವಾದಿಯವರ 1500 ನೇ ಹುಟ್ಟುಹಬ್ಬದ ಅಂಗವಾಗಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಕಿಟ್ ಗಳನ್ನು ನೀಡುವ ಮೂಲಕ ಮೀಲಾದ್ ಹಬ್ಬವನ್ನು ಆಚರಣೆ ಮಾಡಿದರು.

ಮೀಲಾದ್ ಹಬ್ಬದ ದಿನವನ್ನು ಉಳ್ಳವರಂತೆ ಇಲ್ಲದವರೋ ಸಹ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಲಿ ಎಂಬ ಸದುದ್ದೇಶದಿಂದ ಪಟ್ಟಣದ ಎಸ್ ಡಿ ಐ ಸಂಘಟನೆ ಕಳೆದ 17ವರ್ಷದಿಂದ ಸತತವಾಗಿ ಆಹಾರ ಕಿಟ್ ಗಳನ್ನು ಹಂಚಿಕೊಂಡು ಬಂದಿದ್ದಾರೆ.

ಎಸ್ ಡಿ ಐ ಸದಸ್ಯರು ತಮ್ಮ ಸ್ವಂತ ಹಣ ಮತ್ತು ಇತರೆ ದಾನಿಗಳ ನೆರವಿನಿಂದ ಹಂಚುವ ಸದರಿ ಆಹಾರ ಕಿಟ್ ನಲ್ಲಿ ಹಬ್ಬದ ದಿನಕ್ಕೆ ಬೇಕಾಗುವ ಎಲ್ಲಾ ಆಹಾರ ಸಾಮಗ್ರಿ ಗಳನ್ನು ತಪ್ಪದೆ ಸೇರಿಸಲಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಇರ್ಫಾನ್ ಅಹ್ಮದ್ ಮೀಲಾದ್ ಹಬ್ಬವನ್ನು ಪ್ರವಾದಿಯವರು ನೀಡಿದ ಶಿಕ್ಷಣದಂತೆ ದಾನ, ಧರ್ಮ ಮಾಡುವ ಮೂಲಕ ಆಚರಣೆ ಮಾಡುವ ಗುರಿ ನಮ್ಮ ಸಂಘಟನೆ ಹೊಂದಿದ್ದು ಈ ದಿನ ನಾವು ಆದಷ್ಟು ಕಡು ಬಡವರನ್ನು ಹುಡುಕಿ ಅವರಿಗೆ ಹಬ್ಬ ಆಚರಣೆ ಮಾಡಲು ಪೋರಕ ವಾಗಿ ಬೇಕಾಗುವ ಎಲ್ಲಾ ತರಹದ ವಸ್ತು ಗಳನ್ನು ನೀಡಿ ಯಾವುದೇ ಕೊರತೆ ಇಲ್ಲದೆ ಎಲ್ಲರಂತೆ ಹಬ್ಬ ಮಾಡಲು ಅನುವು ಮಾಡಿಕೊಡುತ್ತೇವೆ.ಹಾಗೂ ಈ ಕಾರ್ಯಕ್ಕೆ ಪಟ್ಟಣದ ಅನೇಕ ಮಂದಿ ನಮ್ಮ ಗಳಿಗೆ ತಮ್ಮ ದೇಣಿಗೆ ಗಳು ನೀಡುವುದರ ಮೂಲಕ ಸಹಕಾರ ನೀಡುತ್ತಾರೆ ಅವ್ರೆಲ್ಲರಿಗೂ ಸಂಘಟನೆ ವತಿಯಿಂದ ಧನ್ಯವಾದಗಳು ಎಂದರು.

ಸಂಘಟನೆಯ ಸದಸ್ಯರಾದ ಸಮಿ ಉಲ್ಲಾ ಕೆ ಜಿ ಎನ್, ಸಿರಾಜ್ ಅಹ್ಮದ್, ಕಲೀಂ, ತನವೀರ್ ಕಾರ್ಪೆಂಟರ್, ರಫೀಕ್, ಹಜರತ್ ಬಿಲಾಲ್, ಅಫ್ನಾ ನ್ ಮುಂತಾದವರು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *