ಶಿರಾಳಕೊಪ್ಪ:4-8-2025
ಟೌನ್ ಕಾಂಗ್ರೆಸ್ ಸಮಿತಿ ಯ ನೂತನ ಅಧ್ಯಕ್ಷರಾಗಿ ನಯಾಜ್ ಅಹ್ಮದ್ ಖುರೇಶಿಯವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ನಯಾಜ್ ರವರ ತಂದೆಯೂ ಕೊಡ ಸುದೀರ್ಘ ಅವಧಿಗೆ ಟೌನ್ ಅಧ್ಯಕ್ಷರಾಗಿ ಪಕ್ಷದ ಸೇವೆ ಸಲ್ಲಿಸಿದ್ದು ಈಗ ಅವರ ಮಗ ಶಿಕಾರಿಪುರ ತಾಲ್ಲೂಕು ಯೂಥ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾಗಿ

ಹಾಗೂ ಪಕ್ಷದ ವಿವಿಧ ಹಂತದ ಜವಾಬ್ದಾರಿಗಳನ್ನು ನಿರ್ವಹಿಸಿದ ನಯಾಜ್ ಅವರಿಗೆ ಪಟ್ಟಣದ ಕಾಂಗ್ರೆಸ್ ಪಕ್ಷದ ಸಾರಥ್ಯ ವನ್ನು ನೀಡಲಾಗಿದೆ. ನಯಾಜ ರವರ ಆಯ್ಕೆಯಿಂದಾಗಿ ಸ್ಥಳೀಯ ಕಾರ್ಯಕರ್ತರಲ್ಲಿ ಹೊಸ ಹುರುಪು ಕಂಡು ಬಂದಿದ್ದು ನೂತನ ಅಧ್ಯಕ್ಷ ರೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಕಾಂಗ್ರೆಸ್ ಯೂಥ್ ಉಪಾಧ್ಯಕ್ಷ ಸಾಜೀದ್ ಶೇರ್ ಅಲಿ ಸಾಬ್ ಮಾತನಾಡಿ ನೂತನವಾಗಿ ನೇಮಕಗೊಂಡ ನಯಾಜ್ ಅವರಿಗೆ ಪಕ್ಷದಲ್ಲಿ ಅತೀ ಚಿಕ್ಕ ವಯಸ್ಸಿನಿಂದ ಕೆಲಸ ಮಾಡಿದ ಅನುಭವವಿದೆ, ಪಕ್ಷದ ಹಲವಾರು ಹುದ್ದೆ ಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡ ಇವರು ಪಟ್ಟಣದಲ್ಲಿ ಪಕ್ಷ ಸಂಘಟನೆ ಮತ್ತು ಇತರೇ ಪಕ್ಷ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಂಗ್ರೆಸ್ ಪಕ್ಷ ವನ್ನು ಮತ್ತಷ್ಟು ಗಟ್ಟಿ ಗೊಳಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ನಯಾಜ್ ಖುರೇಶಿ ಮಾತನಾಡಿ ಮುಂಬರುವ ಪುರಸಭೆ ಚುನಾವಣೆಯಲ್ಲಿ ಎಲ್ಲಾ 23 ವಾರ್ಡ್ ಗಳಲ್ಲಿಯೂ ಸಹ ಕಾಂಗ್ರೆಸ್

ಅಭ್ಯರ್ಧಿ ಗಳನ್ನು ಗೆಲ್ಲಿಸಿ ತರುವ ಗುರಿ ನನ್ನ ಪ್ರಮುಖ ಆಧ್ಯತೆ ಯಾಗಿದೆ ಅದಕ್ಕಾಗಿ ಎಲ್ಲಾ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆಂದರು.
ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಶಿವಕುಮಾರ್, ಮುಖಂಡರಾದ ಗೋಣಿ ಮಾಲತೇಶ್, ದರ್ಶನ್ ಉಳ್ಳಿ, ರಾಘವೇಂದ್ರ ನಾಯಕ್, ಪತ್ತಿ ಜಾಫರ್, ಸದ್ದು ಬೆಳ್ಳಿಗಾವಿ, ವಸೀಮ್, ರಫೀಕ್, ಮತ್ತಿತರರು ಇದ್ದರು.
ವರದಿ: ನವೀದ್ ಶಿರಾಳಕೊಪ್ಪ

