ಶಿರಾಳಕೊಪ್ಪದ ಎಂ. ಆರ್ ಲೇಔಟ್ ನಲ್ಲಿ ಪ್ರಥಮ ಬಾರಿಯ ಗಣೇಶನ ಮೂರ್ತಿ ಪ್ರತಿಷ್ಠಾಪನೆ….

The Siasat News - Images

ಶಿರಾಳಕೊಪ್ಪ:29-8-2025

ಪಟ್ಟಣದ ಎಂ.ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ಪ್ರಥಮ ಬಾರಿಗೆ ಶೀ ಮಹಾಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು.

ಕಲಾವಿದ ರತ್ನಾಕರ ಭಂಡಾರಿಯವರು ನಿರ್ಮಿಸಿದ ಕೇದಾರನಾಥ ದೇವಸ್ಥಾನ ಹಿನ್ನೆಲೆಯುಳ್ಳ ಮನಮೋಹಕ ಸ್ತಬ್ದ ಚಿತ್ರ ಜನರ ಆಕರ್ಷಣೆಗೆ ಕಾರಣವಾಗಿದೆ.

ಸುಮಾರು 150 ಮನೆಗಳು ಇರುವ ಎಂ ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ರಸ್ತೆ ಸೇರಿದಂತೆ, ಚಿರಂಡಿ, ನೀರು, ಬೆಳಕಿನ ಸೌಕರ್ಯವಿಲ್ಲದ ಕಾರಣ ಸ್ಥಳೀಯರು, ವೃದ್ಧರು, ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಸಂಭಂದ ಪಟ್ಟವರು ಗಮನ ಹರಿಸಬೇಕಾಗಿ ಸ್ಥಳೀಯರ ಅಪೇಕ್ಷೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಡಾವಣೆಯ ನಿವಾಸಿ ಧರ್ಮಣ್ಣ ಇಲ್ಲಿ ವಾಸಿಸುವ ಹಿಂದೂ, ಮುಸ್ಲಿಂ, ಕ್ರೈಸ್ತ ಭಾಂದವರು ನಾವೆಲ್ಲರೂ ಸೇರಿ ಈ ವರ್ಷ ಪ್ರಥಮ ಬಾರಿಗೆ ನಮ್ಮ ಬಡಾವಣೆಯಲ್ಲಿ ಗಣಪತಿಯ ಪ್ರತಿಷ್ಠಾಪನೆ ಮಾಡಿದ್ದು ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿಯಾಗಿ ಈ ಪದ್ಧತಿಯೂ ಮುಂದುವರೆಯಲಿ ಎಂದು ಶುಭ ಹರಿಸಿದರು.

ಸಿದ್ದಿ ವಿನಾಯಕ ಉತ್ಸವ ಸಮಿತಿ ಎಂ ಆರ್ ಲೇಔಟ್ ನ ಅಧ್ಯಕ್ಷ ಶ್ರೀ ನಿವಾಸ, ಸದಸ್ಯರಾದ ರಂಗನಾಥ, ಪ್ರದೀಪ್, ಬಿಳಿಕಿ ಪುಟ್ಟು, ಡಾll ಹೊನ್ನವಳ್ಳಿ, ಹಿರೇಮಠ್ ಸ್ವಾಮಿ ಮತ್ತಿತರರು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *