ಮತ್ತೊಂದು ಹಂತದ ಟೋಲ್ ಹೋರಾಟಕ್ಕೆ ಮುಹೂರ್ತ ಫಿಕ್ಸ್….. ಸೆಪ್ಟೆಂಬರ್ 18ಕ್ಕೆ ಬ್ರಹತ್ ಪ್ರತಿಭಟನೆ ಘೋಷಿಸಿದ ಹೋರಾಟ ಸಮಿತಿ.

The Siasat News - Images

ಶಿರಾಳಕೊಪ್ಪ: 23-8-2025

ರಾಜ್ಯ ಹೆದ್ದಾರಿ 57 ರಲ್ಲಿ ಶಿವಮೊಗ್ಗ ಜಿಲ್ಲೆ ಕಲ್ಲಾಪುರ ಮತ್ತು ಕುಟ್ರ ಹಳ್ಳಿಯಲ್ಲಿ ನಿರ್ಮಿಸಲಾದ ಟೂಲ್ ಗಳ ವಿರುದ್ದ ನಡೆಯುತ್ತಿರುವ ಹೋರಾಟವು ವಿಧಾನ ಸಭೆ ಅಧಿವೇಶನದಲ್ಲಿ ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ವಿಷಯ ಪ್ರಸ್ತಾಪ ಮಾಡಿದ ನಂತರ ಮತ್ತೊಂದು ತಿರುವು ಪಡೆದು ಕೊಂಡಿದೆ.

ಶನಿವಾರ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ದಲ್ಲಿ ನಡೆದ ಸಮಿತಿಯ ಸಭೆಯ ನಂತರ ಮತ್ತೊಂದು ಬ್ರಹತ್ ಹೋರಾಟ ಮಾಡುವ ವಿಚಾರವಾಗಿ ಸಮಿತಿ ವತಿಯಿಂದ ನಿರ್ಮಾಣ ಕೈ ಗೊಳ್ಳಲಾಗಿದೆ.

The Siasat News - Images

ಸಭೆಯ ನಂತರ ಸುದ್ದಿ ಗಾರರೊಂದಿಗೆ ಹೋರಾಟ ಸಮಿತಿ ಅಧ್ಯಕ್ಷ ಲಾಯರ್ ಶಿವರಾಜ್ ಮಾತನಾಡಿ ಜಿಲ್ಲೆಯಲ್ಲಿ ಹೆದ್ದಾರಿಗಳಲ್ಲಿ ಟೂಲ್ ಗಳ ಅಳವಡಿಕೆಗೆ ಇರುವ ಮಾರ್ಗಸೂಚಿಗಳನ್ನು ಅನುಸರಿಸದೆ 40 ಕಿಲೋ ಮೀಟರ್ ವ್ಯಾಪ್ತಿಯೊಳಗೆ 2 ಟೋಲ್ ಪ್ಲಾಜಾ ಗಳನ್ನು ನಿರ್ಮಾಣ ಮಾಡಿದ್ದಾರೆ ಆದರೆ ಟೋಲ್ ಗಳ ಅಂತರ 60 ಕಿಲೋ ಮೀಟರ್ ಇರಬೇಕೆಂದು ನಿಯಮ ಗಳಿದೆ ಇದರಿಂದಾಗಿ ಸ್ಥಳೀಯರಿಗೆ ಅನಾನುಕೋಲ ಆಗುತ್ತಿದೆ. ಶಿಕಾರಿಪುರದ ಶಾಸಕರು ಮಳೆಗಾಲದ ವಿಧಾನ ಸಭೆಯ ಕಲಾಪದಲ್ಲಿ ಈ ವಿಚಾರವನ್ನು ಪ್ರಸ್ತಾಪನೆ ಮಾಡಿದ್ದು ಸ್ವಾಗತ. ಇದೇ ತರ ಮಾನ್ಯ ಜಿಲ್ಲಾ ಸಚಿವರು ಕೊಡ ಈ ಟೂಲ್ ಗಳ ಬಗ್ಗೆ ತಮ್ಮ ನಿಲುವೇನು ಎಂಬುದು ಸ್ಪಷ್ಟ ಪಡಿಸಬೇಕು ಹಾಗೂ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಕುಟ್ರಹಳ್ಳಿ ಯಲ್ಲಿರುವ ಟೂಲನ್ನು ತೆರವು ಗೊಳಿಸಿ ಬಡ ಜನರಿಗೆ ಅನುಕೊಲ ಮಾಡಿಕೊಡ ಬೇಕೆಂದು ಆಗ್ರಹಿಸಿದರು.

ಸೆಪ್ಟೆಂಬರ್ 18ಕ್ಕೆ ಬ್ರಹತ್ ಹೋರಾಟ ಘೋಷಣೆ ಮಾಡಿದ ಇವರು ದಿನ ನಿತ್ಯ ಸದರಿ ಟೂಲ್ ಗಳಿಂದಾಗಿ ಪರದಾಡುತ್ತಿರುವ ಶಿಕಾರಿಪುರ,

ಆನವಟ್ಟಿ ಮತ್ತು ಸೊರಬ ಭಾಗದ ಸಾರ್ವಜನಿಕರು ಸ್ಥಳೀಯ ರಾಜಕಾರಣಿಗಳ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ವಿರೋಧ ಮತ್ತು ಆಡಳಿತ ಪಕ್ಷದ ನಾಯಕರುಗಳು ಮುಂದಾಳತ್ವ ತೆಗೆದುಕೊಂಡು ಟೂಲ್ ನ್ನು ತೆರವು ಗೊಳಿಸುವ ಕೆಲಸ ಮಾಡಬೇಕು ಇಲ್ಲದಿದ್ದರೆ ಸೆಪ್ಟೆಂಬರ್ 18, 2025 ರಂದು ಶಿಕಾರಿಪುರ ಪಟ್ಟಣವನ್ನು ಬಂದ್ ಮಾಡುವ ಮೂಲಕ ಬ್ರಹತ್ ಪ್ರಭಟನೆ ನಡೆಸಲಾಗುವುದೆಂದು ಗುಡುಗಿದರು.

ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷ ಪುಟ್ಟನ ಗೌಡ್ರು ಮಾತನಾಡಿ ತಾಲ್ಲೂಕಿನ ಶಾಸಕರು ಪ್ರಸ್ತಾಪ ಮಾಡಿದ ವಿಷಯದಲ್ಲಿ ಸ್ಪಷ್ಟತೆ ಇಲ್ಲ ಶಾಸಕರು ಸ್ಥಳೀಯರಿಗೆ ಓಡಾಡಲು ವಿನಾಯತಿ ಕೇಳಿದ್ದಾರೆ ಆದರೆ ಪ್ರತಿದಿನ ಸೊರಬ, ಆನವಟ್ಟಿ ಮತ್ತು ಶಿರಾಳಕೊಪ್ಪ ಭಾಗದಿಂದ ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಕೆಲಸ ಮಾಡುವ ಸಾವಿರಾರು ಹೆಣ್ಣುಮಕ್ಕಳು, ರೈತರು ಸೊರಬ, ಮತ್ತು ಆನವಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಶಿಕಾರಿಪುರಕ್ಕೆ ಅಡ್ಡಾಡುತ್ತಾರೆ ಹಾಗಾಗಿ ಸ್ಥಳೀಯರಿಗೆ ವಿನಾಯತಿ ಕೊಡುವುದಕ್ಕಿಂತ ಕುಟ್ರಹಳ್ಳಿಯಲ್ಲಿರುವ ಟೂಲನ್ನು ತೆರವು ಗೊಳಿಸಲೇಬೇಕು ಎಂದು ಆಗ್ರಹ ಮಾಡಿದರು.

ಸಮಿತಿಯ ಸಂಚಾಲಕ ವಿನಯ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ನವೀದ್ ಶಿರಾಳಕೊಪ್ಪ, ರೈತ ಸಂಘದ ಜಿಲ್ಲಾ ಗೌರವಾ ಧ್ಯಕ್ಷ ಈರಣ್ಣ ಪ್ಯಾಟಿ ಪದಾಧಿಕಾರಿಗಳಾದ ಗಂಗಾಧರ ಶೆಟ್ರು, ಸಿದ್ದಲಿಂಗ ಸ್ವಾಮಿ, ನಾಗರಾಜ್ ಬೆಳ್ಳಿಗಾವಿ, ಕುಬೇರಪ್ಪ ಕೊರಟಿಗೆರೆ, ಬಿಳಿಕಿ ಖಲೀಲ್, ಸಂತೋಷ್, ಸುರೇಶ್, ಜಬಿ ಚಿಕ್ಕಜಂಬೂರು, ಮತ್ತಿತರು ಇದ್ದರು

Share the news!

Leave a Reply

Your email address will not be published. Required fields are marked *