ಶಿರಾಳಕೊಪ್ಪ:15-8-2025
ದೇಶದ 79 ನೇ ಸ್ವಾತಂತ್ರೋತ್ಸವವನ್ನು ಪಟ್ಟಣದ ವಿವಿಧ ಕಡೆ ಸಾರ್ವಜನಿಕರಿಂದ ಆಚರಣೆ ಮಾಡಲಾಯಿತು.

ಪಟ್ಟಣದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಮಮತಾ ನಿಂಗಪ್ಪ ಧ್ವಜಾರೋಹಣೆ ನೆರವೇರಿಸಿದರು. ಪುರಸಭೆ ಮುಖ್ಯಾಧಿಕಾರಿ ಪರಶುರಾಮ್, ಇಂಜಿನಿಯರ್ ಶೇಖರ್ ನಾಯಕ್ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿಗಳು ಹಾಗೂ ಊರಿನ ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಇದ್ದರು. ಟೂಲ್ ಪ್ಲಾಜಾದಲ್ಲಿ ಸ್ವಾತಂತ್ರೋತ್ಸವ ಆಚರಣೆ: ಕುಟ್ರ ಹಳ್ಳಿ ಟೂಲ್ ಪ್ಲಾಜಾ ದಲ್ಲಿ ಪ್ಲಾಜಾದ ವ್ಯವಸ್ಥಾಪಕ

ನಿತಿನ್ ರವರ ನೇತೃತ್ವ ದಲ್ಲಿ ಸ್ವಾತಂತ್ರೋತ್ಸವ ದಿನ ಆಚರಣೆ ಮಾಡಲಾಯಿತು. ಪೊಲೀಸ್ ಪೇದೆ ಚಾಮರಾಜ ರವರು ಧ್ವಜರೂಣೆ ನೀವೇರಿಸಿದರು. ಮೇಲ್ವಿಚಾರಕ ಮಹಾಂತೇಶ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮೆಕ್ಯಾನಿಕ್ ಸಂಘದ ವತಿಯಿಂದ ಆಚರಣೆ: ಪಟ್ಟಣದ ಟೂ ವೀಲರ್ ಮೆಕ್ಯಾನಿಕ್ ಸಂಘದ ವತಿಯಿಂದ ಹಿರೇಕೆರೂರು

ರಸ್ತೆಯ ಮಾಲಸ ಮೋಟರ್ಸ್ ನಲ್ಲಿ ಸ್ವಾತಂತ್ರ್ಯ ದಿನೊತ್ಸವ ಆಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷ ಸುಹೈಲ್ ಸೇರಿದಂತೆ ಸದಸ್ಯರಾದ ಚರಣ್, ಜಾಕೀರ್ ಮತ್ತಿತರರು ಭಾಗವಹಿಸಿದ್ದರು.
ವರದಿ: ನವೀದ್ ಶಿರಾಳಕೊಪ್ಪ


Good coverage