ರಾಜ್ಯ ವಖ್ಫ್ ಮತ್ತು ಅಲ್ಪ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ಖಾನ್ ರವರ ಹುಟ್ಟುಹಬ್ಬದ ಅಂಗವಾಗಿ ಉಡುಗಣಿಯ ಮುರಾರ್ಜಿದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳು, ಲೇಖನಿಗಳು ಮತ್ತು ಪುಟಾಣಿಗಳಿಗೆ ಸಿಹಿಯನ್ನು ಹಂಚುವ ಮೂಲಕ ಸಂಭ್ರಮದ ಜನುಮ ದಿನವನ್ನು ಅವರ ಅಭಿಮಾನಿಗಳು ಆಚರಣೆ ಮಾಡಿದರು.
ಶಿರಾಳಕೊಪ್ಪ:4/8/2025

ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಿರಿಯ ಮುಖಂಡ ಆನವಟ್ಟಿ ಬಾಷ ಸಾಬ್ ಜಮೀರ್ ಅಹ್ಮದ್ ರವರದ್ದು ಸದಾ ಬಡವರ ಪರವಾಗಿ ಮಿಡಿಯುವ ಮನಸ್ಸು ಬಡವರ ಬಂಧು ದೀನದಲಿತರ ಆಶಾಕಿರಣ ಕೊಡಗೈ ದಾನಿಯಾದ ಸನ್ಮಾನ್ಯ ಜಮೀರ್ ಅಹ್ಮದ್ ಖಾನ್ ರವರನ್ನು ಭಗವಂತ ಆಯೂ ಆರೋಗ್ಯ, ಮತ್ತು ದೀರ್ಘವಾದ ಜೀವನವನ್ನು ನೀಡಲಿ ಎಂದು ಹರಸಿದರು.

ಜಮೀರ್ ಅಹ್ಮದ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಅಹ್ಮದ್ ಖಾನ್, ತಾಲ್ಲೂಕು ಅಧ್ಯಕ್ಷ ಹಾರೂನ್, ಮುಖಂಡರಾದ ಪತ್ತಿ ಜಾಫರ್ , ನಯಾಜ್ ಖುರೇಶಿ , ಕರಿಬಸಪ್ಪ, ಮಂಜ ನಾಯಕ್, ಸದ್ದಾಂ ಬೆಳ್ಳಿಗಾವಿ, ಹನುಮಂತ ನಾಯಕ್, ತಾಹ, ಹುಸೇನ್ ಇದ್ದರು.
ವರದಿ: ನವೀದ್ ಶಿರಾಳಕೊಪ್ಪ

