ಶಿರಾಳಕೊಪ್ಪ:19-01-2025
ಪಟ್ಟಣದ ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಭಾನುವಾರ ಭಾರೀ ಜಿದ್ದಾಜಿದ್ದಿ ನಿಂದ ನಡೆಯಿತು.
ಶತಮಾನ ಕಂಡ 111ವರ್ಷ ಪೂರೈಸಿರುವ ಜಿಲ್ಲೆಯ ಪ್ರತಿಷ್ಟಿತ ಶ್ರೀ ಬಸವೇಶ್ವರ ಬ್ಯಾಂಕಿನ 13ನಿರ್ದೇಶಕರ ಸ್ಥಾನಗಳಿಗೆ 26ಜನ ಅಭ್ಯರ್ಥಿ ಗಳು ಸ್ಪರ್ಧೆ ಮಾಡಿದ್ದು ಮತದಾನ ಬಿರುಸಿನಿಂದ ನಡೆಯಿತು.

5 ಸಾವಿರಕ್ಕೂ ಹೆಚ್ಚು ಷೇರು ದಾರರನ್ನು ಹೊಂದಿರುವ ಬ್ಯಾಂಕಿನ ಚುನಾವಣೆಗೆ ಈ ಬಾರಿ 2329ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಉಳಿದಂತೆ 683ಜನ ಷೇರು ದಾರರು ಹೈ ಕೋರ್ಟ್ ನಿಂದ ಮತ ಚಲಾಯಿಸುವ ಹಕ್ಕು ಪಡೆದಿದ್ದರು.
ಚುನಾವಣೆಯಲ್ಲಿ ಒಟ್ಟು 2447ಮತಗಳು ಚಲಾವಣೆ ಯಾಗಿದ್ದು ಈ ಮತಗಳ ಎಣಿಕೆ ಕಾರ್ಯ ತಡ ರಾತ್ರಿಯು ನಡೆಯುವ ಸಂಭವ ಇದೆ.
ಹೈ ಕೋರ್ಟ್ ನಿಂದ ಅನುಮತಿ ಪಡೆದು ಮತ ಚಲಾಯಿಸಿದ 352ಮತ ಗಳ ಏಣಿಕೆಯನ್ನು ಮಾಡದಂತೆ ಹೈ ಕೋರ್ಟ್ ನಿರ್ದೇಶನ ನೀಡಿದ್ದು

ಹೈ ಕೋರ್ಟ್ ಮುಂದಿನ ಆದೇಶದ ವರೆಗೂ ಫಲಿತಾಂಶ ಪ್ರಕಟಿಸಿದಂತೆ ತಡೆ ಹಿಡಿಯಲು ಸೋಚಿಸಿದೆ.
ಸರಿಸುಮಾರು ವಾರ್ಷಿಕ 100 ಕೋಟಿ ವಹಿವಾಟು ಹೊಂದಿರುವ ಸದರಿ ಬ್ಯಾಂಕಿನ 2025-2030ಅವಧಿಗೆ ನಡೆದ ನಿರ್ದೇಶಕ ಮಂಡಳಿಯ ಚುನಾವಣೆಯೂ ಸಾರ್ವತ್ರಿಕ ಚುನಾವಣೆಗಳನ್ನು ಮೀರುವಂತೆ ಜಿದ್ದಾ ಜಿದ್ದಿ ಚುನಾವಣೆ ನಡೆದಿದ್ದು ಚುನಾವಣೆ ಗೆ ಸ್ಪರ್ಧೆ ಮಾಡಿದ ಎರಡೂ ಬಣಗಳ ನಡುವೆ ಸಣ್ಣ ಪುಟ್ಟ ಮಾತಿನ ಚಕಮಕಿಗಳು ನಡೆದರೆ ಕೆಲ ಅಭ್ಯರ್ಥಿಗಳ ಪರವಾಗಿ ಅವರ ಸಣ್ಣ ಮಕ್ಕಳೂ ಸಹ

ಮತಗಟ್ಟೆ ಹತ್ತಿರ ನಿಂತು ಪ್ರಚಾರ ಮಾಡಿದರು.
ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ಟಿ ಬಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು.
ವರದಿ: ನವೀದ್ ಶಿರಾಳಕೊಪ್ಪ.

