ಸ್ಯಾಂಡಲ್ವುಡ್ಡಿಂಪಲ್ ಪಲ್ ಕ್ವೀನ್ ರಚಿತಾರಾಮ್ ಅವರು ಸದ್ಯಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು.ಅಲ್ಲದೆ ಅತಿ ಹೆಚ್ಚುಸಂಭಾವನೆಪಡೆಯುವನಟಿ ಕೂಡ.

ಸದ್ಯ ರಚಿತಾರಾಮ್ ಅವರ ಸಂಭಾವನೆಯು ಕೋಟಿಕ್ಲಬ್ನಲ್ಲಿದೆ. ಆದರೆ ಅವರ ಮೊದಲಸಂಭಾವನೆ ಎಷ್ಟು ಎನ್ನುವ ಅಚ್ಚರಿ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿರಚಿತಾ ರಾಮ್ ಅವರು ತಮ್ಮ ಸಿನಿಜರ್ನಿಯ ಬಗ್ಗೆ ಮಾತನಾಡಿದ್ದಾರೆ.
ಎಲ್ಲರಿಗೂಗೊತ್ತಿರುವಂತೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಟದರ್ಶನ್ ಸಾರ್ ಎಂದು ನೆನೆದಿದ್ದಾರೆ. ಪ್ರತಿದಿನ ಮೇಕಪ್ ಹಚ್ಚಿದಾಗಲೆಲ್ಲ ನಾನು ದರ್ಶನ್ ಸಾರ್ ಅವರನ್ನು ನೆನೆಯುತ್ತೇನೆ. ದರ್ಶನ್ ಸಾರ್ಧ ಅವರಿಗೆ ಧನ್ಯವಾದ ಹೇಳ್ತೀನಿಎಂದಿದ್ದಾರೆ ರಚಿತಾ ರಾಮ್.
ರಚಿತಾ ರಾಮ್ ಮೊದಲು ಕಿರುತೆರೆಮೂಲಕ ನಟನೆಗೆಬಣ್ಣ ಹಚ್ಚಿದವರು.
ಸುಮಾರು ದಶಕಗಳ ಹಿಂದೆ ನಾನುಸೀರಿಯಲ್ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಂಭಾವನೆ ೭೫೦ರೂಪಾಯಿ ಎಂದು ರಚಿತಾ ರಿವೀಲ್ ಮಾಡಿದ್ದಾರೆ. ಅಂದಿನಿಂದ ಇಂದಿ ನವರೆಗೂ ನಾನು ಯಾವುದೇ ಸಂಭಾವನೆ ಇಲ್ಲದೆ ಕೆಲಸಮಾಡಲಿಲ್ಲ. ನಾನು ನನ್ನಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ನನಗೆ ಜನ ಕೊಟ್ಟಿರುವ ಪ್ರೀತಿ ಕಾಪಾಡಿಕೊಳ್ಳಬೇಕು ಎಂದುರಚಿತಾಹೇಳಿದ್ದಾರೆ.
ಜೀವನದಲ್ಲಿ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ ಒಂದು ವೇಳೆಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಸಂದರ್ಭಎದುರಾದರೆ ಯಾವುದಾದರೂ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತೇನೆ.
ಅಲ್ಲಿ ಕೊಡೋ ಪ್ರಸಾದ ತಿನ್ಕೊಂಡು ಹೊಟ್ಟೆ ತುಂಬಿಸಿಕೊಳ್ತೀನಿ ಎಂದು ರಚಿತಾ ರಾಮ್ ಹೇಳಿದ್ದಾರೆ.

ನಾನು ಸುಮ್ಮನೆ ದರ್ಶನ್ ಅವರ ಹೆಸರಲ್ಲಿ ಪಬ್ಲಿಸಿಟಿತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಏಕೆಂದರೆ ನಾನು ಅವರಬ್ಯಾನರ್ನಿಂದಲೇ ಬಂದ ಹುಡುಗಿ ಹಾಗಾಗಿ ಅವರ ಬಗ್ಗೆ ಹಾಗೂ ಅವರ ಬ್ಯಾನರ್ ಬಗ್ಗೆ ಮಾತನಾಡಲು ನನಗೆ ಅಧಿಕಾರ ಖಂಡಿತಾ ಇದೆ.ನನ್ನ ತಂದೆ ತಾಯಿ ಬಗ್ಗೆ ಮಾತನಾಡೋಕೆ ನಾನೇಕೆ ಅನುಮತಿಪಡೆಯಬೇಕು? ದರ್ಶನ್ ಸರ್ ಆಗಿರಬಹುದು, ತೂಗುದೀಪಬ್ಯಾನರ್ ಬಗ್ಗೆ ಆಗಿರಬಹುದು ನನ್ನ ಉಸಿರಿರುವ ತನಕ ನನಗೆಮಾತನಾಡಲು ಅಧಿಕಾರವಿದೆ ಎಂದು ರಚಿತಾ ಹೇಳಿಕೊಂಡಿದ್ದಾರೆ.ಅವರು ಕೊಟ್ಟಿರುವ ಒಂದು ಗಿಫ್ಟ್ ನನ್ನ ಕೆರಿಯರ್ನಲ್ಲಿಇಂದಿನವರೆಗೂ ಸಾಗುತ್ತಿದೆ. ಅದರಿಂದಲೇ ನನ್ನ ಜರ್ನಿತುಂಬಾಖುಷಿಯಾಗಿ ಸಾಗುತ್ತಿದೆ. ಇದಕ್ಕಾಗಿ ದರ್ಶನ್ ಸರ್ ಅವರಿಗೆಧನ್ಯವಾದಗಳು ಎಂದು ರಚಿತಾ ರಾಮ್ ಹೇಳಿದ್ದಾರೆ. ರಾಜನ್ನಯಾವತ್ತೂ ರಾಜನ ರೀತಿ ನೋಡಲು ನನಗೆ ಇಷ್ಟ. ದರ್ಶನ್ಅವರನ್ನ ನೋಡಿದ ಕೂಡಲೇ ರಾಜ ಎಂದೇ ನೆನಪಾಗುತ್ತದೆ.ನನ್ನನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ದರ್ಶನ್ ಸರ್. ದರ್ಶನ್ಸರ್ ಹಾಗೂ ಅವರ ಕುಟುಂಬದ ಮೇಲೆ ನಾನು ಸದಾ ಆಭಾರಿಎಂದಿದ್ದಾರೆ. ನಾನು ದರ್ಶನ್ ಅವರನ್ನು ಯಾಕೆ ಭೇಟಿಯಾಗಲಿಲ್ಲಅಂದ್ರೆ, ಈಗ ಅವರ ವೈಯಕ್ತಿಕ ಸಮಯ. ಹಾಗಾಗಿ ಅವರಿಗೆವೈಯಕ್ತಿಕವಾಗಿ ಸಮಯದ ಅಗತ್ಯವಿದೆ. ಅವರು ತಮ್ಮಕುಟುಂಬದೊಂದಿಗೆ ಸ್ವಲ್ಪ ಕಾಲ ಕಳೆಯಲಿ. ನೋಡೋಣ ನಮಗೂಒಂದು ಟೈಮ್ ಬರುತ್ತೆ. ಅವರು ಸದ್ಯ ತಮ್ಮ ಸಮಯವನ್ನುಸ್ಪೆಂಡ್ ಮಾಡಲಿ ಎಂದು ರಚಿತಾ ರಾಮ್ ಹೇಳಿದ್ದಾರೆ.

