ಅಂಬೇಡ್ಕರ್ ಮಾನವರೋಪದ ಪ್ರತ್ಯಕ್ಷ ದೇವರು-ಕಾಗಿನೆಲೆ ರಂಗಪ್ಪ….

The Siasat News - Images

ಶಿಕಾರಿಪುರ: 20-12-2024

ರಾಮ-ಕೃಷ್ಣ ನಿಮಗೆ ಕಾರಣದ ದೇವರಾದರೆ ಅಂಬೇಡ್ಕರ್ ನಮಗೆ ಪ್ರತ್ಯಕ್ಷ ಮಾನವ ರೂಪದ ದೇವರು ಅವರ ದೂರದೃಷ್ಠಿ ಪ್ರತಿಫಲ ನಾವಿಂದು ಎಲ್ಲ ಸೌಲಭ್ಯ ಅನುಭವಿಸುತ್ತಿದ್ದೇವೆ ಎಂದು ತಾಲೂಕು ಅಹಿಂದ ಒಕ್ಕೂಟದ ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು ಅವರು ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೇ ಅಂಬೇಡ್ಕರ್ ಕುರಿತು ಅವಹೇಳನ ಮಾತನ್ನಾಡುವ ಮೂಲಕ ಅವರ ಮನಸ್ಸಿನ ಕನ್ನಡಿ ಜನರೆದುರು ತೆರೆದಿಟ್ಟಿದ್ದಾರೆ ಅಂತಹವರ ಕುರಿತು ಜನತೆ ಎಚ್ಚರಿಕೆಯಿಂದ ಇರಬೇಕು ಎಂದರು.

ಡಿಎಸ್‌ಎಸ್ ನ ಅಧ್ಯಕ್ಷ ಚುರ್ಚಿಗುಂಡಿ ಜಗದೀಶ್ ಮಾತನಾಡಿ, ಸಮಾಜಕ್ಕೆ ಬೇಡವಾಗಿ ಮೂಲೆಗುಂಪಾಗಿದ್ದ ನಮಗೆ ಅಂಬೇಡ್ಕರ್ ಪ್ರತ್ಯೇಕ್ಷ ದೇವರಾಗಿ ಹಲವು ಸೌಲಭ್ಯಗಳ ಮೂಲಕ ವರ ಕರುಣಿಸಿದ್ದಾರೆ ಅದರ ಪ್ರತಿಫಲ ನಾವಿಂದು ಅನುಭವಿಸುತ್ತಿದ್ದೇವೆ ಮನು ಸಂಸ್ಕೃತಿ ಹೊಂದಿರುವ ಜನರಿಂದಾಗಿ ಜೀತದಾಳು ಆಗಿದ್ದ ನಾವಿಂದು ಸಂವಿಧಾನದ ಕಾರಣಕ್ಕೆ ಜೀತಮುಕ್ತಿ ಹೊಂದಿದ್ದೇವೆ. ಭೂಮಿ ಉತ್ತಿಬಿತ್ತಿ ಶ್ರಮಜೀವಿಗಳಾಗಿದ್ದ ನಾವಿಂದು ಹೊಲದೊಡೆಯರಾಗಿದ್ದೇವೆ ಅಂಬೇಡ್ಕರ್ ದೂಷಿಸುವವರು ಮನಷ್ಯರೇ ಅಲ್ಲ ಎಂದು ಹೇಳಿದರು.

ಮುಖಂಡ ರಾಘವೇಂದ್ರನಾಯ್ಕ ಮಾತನಾಡಿ, ಅಂಬೇಡ್ಕರ್ ಹೆಸರು ಹಲವು ಬಾರಿ ಕೇಳಿದ್ದಕ್ಕೆ ಸ್ಥಿಮಿತ ಕಳೆದುಕೊಳ್ಳುವ ಕೇಂದ್ರ ಗೃಹಸಚಿವ ಅಮಿತ್‌ಷಾ ಮನಸ್ಥಿತಿ ಕ್ರೂರವಾದದ್ದು. ಬಡವರಿಗೆ ಉತ್ತಮ ಜೀವನ ನೀಡಿದ, ಎಲ್ಲರಿಗೂ ಶಿಕ್ಷಣ ನೀಡಿದ, ಸಮ ಸಮಾಜಕ್ಕೆ ನಾಂದಿ ಹಾಡಿದ ಅಂಬೇಡ್ಕರ್ ಸ್ಮರಣೆ ಎಷ್ಟು ಮಾಡಿದರೂ ಸಾಲದು ಅಂತಹ ಮಹಾನ್ ವ್ಯಕ್ತಿತ್ವ ಅವರದ್ದು ರಾಮ-ಕೃಷ್ಣರ ಹೆಸರು ಹೇಳುತ್ತಾ ಜನರಲ್ಲಿ ಮೌಡ್ಯ ಬಿತ್ತುವ ಬಿಜೆಪಿ ಪರೋಕ್ಷವಾಗಿ ಎಂತಹ ಆಡಳಿತದ ಹುನ್ನಾರ ನಡೆಸುತ್ತಿದೆ ಎನ್ನುವುದಕ್ಕೆ ಅಮಿತ್‌ಷಾ ಹೇಳಿಕೆ ಸಾಕ್ಷಿಯಾಗಿದೆ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಮುಖಂಡರುಗಳಾದ ಗೋಣಿ ಮಾಲತೇಶ್, ಎನ್.ಅರುಣ್, ಮಾದಿಗ ಸಮಾಜದ ಅಧ್ಯಕ್ಷ ಎನ್.ನಿಂಗಪ್ಪ, ಭಂಡಾರಿ ಮಾತನಾಡಿ, ಚಂದ್ರಪ್ಪ, ಬನ್ನೂರು ಚರಣ್, ಪುನಿತ್‌ನಾಯ್ಕ, ಬನ್ನೂರು ಮಂಜಪ್ಪ ಇತರರಿದ್ದರು.

Share the news!

Leave a Reply

Your email address will not be published. Required fields are marked *