ಶಿರಾಳಕೊಪ್ಪ:20-12-2024
ಇಲ್ಲಿನ ಕೆನರಾ ಬ್ಯಾಂಕ್ ನಲ್ಲಿ ದಿನ ನಿತ್ಯ ಹಣ ಬಿಡುಗಡೆ ಮಾಡಿಕೊಳ್ಳಲು ಉಪಯೋಗಿಸುವ ಚೆಕ್ ಹಾಳೆ ಗಳು ಆಂಗ್ಲ ಮತ್ತು ಮಲಿಯಾಳಿ ಭಾಷೆಗಳಲ್ಲಿ ವಿತರಣೆ ಮಾಡಲಾಗುತ್ತಿದ್ದು ಗ್ರಾಹಕರಿಗೆ ತೊಂದರೆ ಉಂಟು ಮಾಡಿದೆ.
ಕನ್ನಡದ ಮೊದಲ ದೊರೆ, ಕನ್ನಡದ ಮೂಲ ನೆಲೆಯಲ್ಲಿ ಕನ್ನಡವನ್ನು ಮಾಯೆ ಮಾಡಿ ಇತರೆ ಭಾಷೆಗಳಿಗೆ ಬೆಂಬಲ ನೀಡುತ್ತಿರುವ ಬ್ಯಾಂಕ್ ಸಿಬ್ಬಂಧಿಗಳ ವರ್ತನೆ ಕನ್ನಡ ಪರ ಮನಸ್ಸುಗಳಿಗೆ ಘಾಸಿ ಉಂಟು ಮಾಡಿದೆ.

ಕನ್ನಡ ನೆಲೆಯಲ್ಲೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅಕ್ಷಮ್ಮ್ಯ ಅಪರಾಧವಾಗಿದ್ದು ಈ ಬಗ್ಗೆ ಬೇಜಾವಾಬ್ದಾರಿ ಧೋರಣೆ ತಳಿದಿರುವ ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಸರಕಾರ ಹಾಗೂ ಹಿರಿಯ ಬ್ಯಾಂಕ್ ನ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕೆಂದು ಕನ್ನಡ ಪರ ಹೋರಾಟಗಾರ ಅಬ್ದುಲ್ ನವೀದ್ ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬ್ಯಾಂಕ್ ನ ಪ್ರಾದೇಶಿಕ ವ್ಯವಸ್ಥಾಪಕ ಸಂಜೀವ್ ಕುಲಕರ್ಣಿ ಕನ್ನಡದ ಬದಲಾಗಿ ಮಲಯಾಳಿ ಚೆಕ್ ಲೀಫ್ ಗಳು ಸರಬರಾಜಾಗಿದ್ದು ಸ್ಥಳೀಯ ಶಾಖಾ ಪ್ರಭಂದಕರು ಕನ್ನಡ ಭಾಷೆಯುಳ್ಳ ಲೀಫ್ ಗಳನ್ನು ಪಡೆದು ಗ್ರಾಹಕರಿಗೆ ಅನುಕೊಲವಾಗುವಂತೆ ವ್ಯವಸ್ಥೆ ಮಾಡಬೇಕು ಮತ್ತು ತಕ್ಷಣ ಈ ಬಗ್ಗೆ ಪರಿಶೀಲಿ ಸಲಾಗುವುದು ಎಂದು ಹೇಳಿದರು.
ಗ್ರಾಹಕ ಆನಂದ್ ಶಿರೂರ್ ಮಾತನಾಡಿ ಹಳ್ಳಿಗಳಿಂದ ಬರುವ ಗ್ರಾಹಕರಿಗೆ ಚೆಕ್ ಗಳಲ್ಲಿ ಧಿಡೀರನೆ ಕನ್ನಡ ಭಾಷೆ ಮಾಯವಾಗಿದ್ದು ಅದನ್ನು ಹಿಡಿದುಕೊಂಡು ಪರದಾಡಿದ ಸನ್ನಿವೇಶ ನಡೆದಿದೆ. ಕಟ್ಟಡದ ಎರಡನೇ ಅಂತಸ್ತಿನಲ್ಲಿರುವ ಬ್ಯಾಂಕ್ ಗೆ ಹತ್ತಿ ಇಳಿದು ಗ್ರಾಹಕರು ಹೈರಾಣಾಗಿ ಹೋಗಿದ್ದು ಈ ಬಗ್ಗೆ ಕೆನರಾ ಬ್ಯಾಂಕ್ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು ಹಾಗೂ ತಪ್ಪಿ ತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದರು.

