The Siasat News - Images

ಬೆಳೆ ವಿಮೆ ವಿಳಂಬ ರೈತ ಸಂಘ ಆಕ್ರೋಶ…

ಶಿರಾಳಕೊಪ್ಪ:14/10/2025 ಅತಿಯಾದ ಮಳೆಯಿಂದಾಗಿ ಮೆಕ್ಕೆಜೋಳ ಮತ್ತು ಅಡಿಕೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಸರಕಾರ ಆದಷ್ಟು ಬೇಗ ರೈತರಿಗೆ ಬೆಳೆ ವಿಮೆ ಕೊಡಬೇಕೆಂದು ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ ಆಗ್ರಹಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಶಿರಾಳಕೊಪ್ಪದ ಉಪ ತಹಸೀಲ್ದಾರ್ ರವರ ಮೂಲಕ ಬೆಳೆವಿಮೆ ವಿಚಾರವಾಗಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿದೆ ಆದರೆ ಇನ್ನೂವರೆಗೂ ಕೂಡ ಬೆಳೆ ವಿಮೆ ಮಾತ್ರ ಬಂದಿಲ್ಲ ಆದಷ್ಟು ಬೇಗ ಸರಕಾರ ಅಡಿಕೆ ಮತ್ತು ಮೆಕ್ಕೆಜೋಳಕ್ಕೆ ಬೆಳೆ…

Read More
The Siasat News - Images

ಟೂಲ್ ಗೇಟ್ ವಿರೋಧಿ ಹೋರಾಟಕ್ಕೆ ಜನತೆ ಬೆಂಬಲ…. ಶಿಕಾರಿಪುರ ಬಂದ್ ಯಶಸ್ವಿ.

ಶಿಕಾರಿಪುರ: 09/10/2025 ತಾಲೂಕಿನ ಕುಟ್ರಳ್ಳಿ ಸಮೀಪದಲ್ಲಿ ನಿರ್ಮಿಸಿದ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಗುರುವಾರ ಕರೆ ನೀಡಿದ ಶಿಕಾರಿಪುರ ಬಂದ್‍ ಸಂಪೂರ್ಣ ಯಶಸ್ವಿಯಾಯಿತು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನವೀದ್ ಶಿರಾಳಕೊಪ್ಪ‌ ಮಾತನಾಡಿ, ತಾಲೂಕಿನ ಜನತೆ ಸರ್ಕಾರಿ ಕಚೇರಿಗಳಿಗೆ, ರೋಗಿಗಳು ಆಸ್ಪತ್ರೆಗೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪಲು ಎರಡು ಬಾರಿ ಹಾಗೂ ತಾಲೂಕು ಕೇಂದ್ರ ತಲುಪಲು ಒಮ್ಮೆ ಟೋಲ್ ಶುಲ್ಕವನ್ನು ಪಾವತಿಸಬೇಕಿದೆ. ಅಲ್ಲದೇ, ಕಣಿವೆಮನೆ…

Read More
The Siasat News - Images

ಹೋರಾಟದ ರೋಪರೇಷೆ ಗಳು ಪ್ರಸ್ತಾಪಿಸಿದ ಟೋಲ್ ಹೋರಾಟ ಸಮಿತಿ…..ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ…

ಶಿಕಾರಿಪುರ:07/10/2025 ತಾಲ್ಲೂಕಿನ ಕುಟ್ರಹಳ್ಳಿಯಲ್ಲಿ ಅಳವಡಿಸಲಾದ ಟೋಲ್ಗೇಟ್ ವಿರುದ್ಧ ದಿನಾಂಕ 09/10/2025 ರಂದು ನಡೆಯಲಿರುವ “ಶಿಕಾರಿಪುರ ಬಂದ್ ” ಪ್ರತಿಭಟನಾ ಮೆರವಣಿಗೆ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನ ದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕ ಕಚೇರಿ ಎದುರಿರುವ ಪಾರ್ಕ್ ಹತ್ತಿರ ಬರಲಿದೆ ಎಂದು ಟೂಲ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಜ್ ಸುಣ್ಣದಕೊಪ್ಪ ಹೇಳಿದರು. ಶಿರಾಳಕೊಪ್ಪದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇವರು ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಹೊರಡಲಿರುವ…

Read More
The Siasat News - Images

ಇತ್ತೇಹಾದ್ ಫೌಂಡೇಶನ್ ನ ಮತ್ತೊಂದು ಅಂಗ ಸಂಸ್ಥೆ ಇತ್ತೇಹಾದ್ ಮೋವ್ಮೆಂಟ್ ಆರಂಭ..

ಶಿರಾಳಕೊಪ್ಪ:22-9-2025 ಪಟ್ಟಣದಲ್ಲಿ ಸಮಾಜ ಸೇವೆ ಮತ್ತು ನಿರ್ಗತಿಕರ ಧ್ವನಿ ಯಾಗಿ ಕಳೆದ 9 ವರ್ಷ ಗಳಿಂದ ಸೇವೆ ಸಲ್ಲಿಸುತ್ತಿರುವ ಇತ್ತೇ ಹಾದ್ ಫೌಂಡೇಶನ್ ವತಿಯಿಂದ ಅದರ ಮತ್ತೊಂದು ಅಂಗ ಸಂಸ್ಥೆ ಯನ್ನು ಪ್ರಾರಂಭ ಮಾಡಲಾಗಿದ್ದು ವಿಶೇಷ ವಾಗಿ 25 ವರ್ಷ ಒಳಗಿನ ಯುವಕರನ್ನು ಸದರಿ ಸಂಸ್ಥೆ ಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್ ನ ಅಧ್ಯಕ್ಷ ಸಂಜೀದ್ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹೊಸ ತಂಡದ ಮುಖ್ಯಸ್ಥರನ್ನು ಆಯ್ಕೆ ಮಾಡಿ ಮಾತನಾಡಿದ ಅವರು ಪಟ್ಟಣವು…

Read More
The Siasat News - Images

ಮಕ್ಕಳ ಶಿಕ್ಷಣದೊಂದಿಗೆ ಸಮಾಜ ಒಂದುಗೋಡಿಸುವ ಕೆಲಸ ನಮ್ಮೆಲ್ಲರ ಹೊಣೆ-ಮಾಚಿದೇವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್ ನಾಗಪ್ಪ….

ಶಿಕಾರಿಪುರ:14-09-2025 ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸುವುದು ನಮ್ಮೇಲ್ಲರ ಕರ್ತವ್ಯ ನಾವು ಶಿಕ್ಷಣ ಪಡೆದು ಸಂಘಟಿತರಾಗೋಣ ಎಂದು ಮಡಿವಾಳ ಮಾಚಿದೇವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ನಾಗಪ್ಪ ಹೇಳಿದರು. ಪಟ್ಟಣದ ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀ ಮಡಿವಾಳ ಮಾಚಿದೇವ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಸಮುದಾಯದವರು ಹೆಚ್ಚಿನ ಠೇವಣಿಯನ್ನು ಸಂಘದಲ್ಲಿ ಇಡುವುದರ ಮೂಲಕ ಸಹಕಾರ ಸಂಘವನ್ನು ಮುನ್ನಡಿಸಲು ಸದಾ ನಮ್ಮೊಂದಿಗೆ ಕೈ…

Read More
The Siasat News - Images

ಕಡೆನಂದಿಹಳ್ಳಿ ಶಾಲೆಯಲ್ಲಿ ಶಿಕ್ಷಕರ ಕೊರತೆ; ಪೋಷಕರೊಂದಿಗೆ ಮಕ್ಕಳ ಪ್ರತಿಭಟನೆ…

ಶಿರಾಳಕೊಪ್ಪ :12-09-2025 ಹತ್ತಿರದ ಕಡೆನಂದಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಧಿಡೀರ್ ವರ್ಗಾವಣೆಯನ್ನು ಖಂಡಿಸಿ ಮಕ್ಕಳು ಹಾಗೂ ಪೋಷಕರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ಶಾಲೆಗೆ ಒಟ್ಟು ಏಳು ಶಿಕ್ಷಕರ ಹುದ್ದೆ ಇದ್ದು, ಇಬ್ಬರು ಈಗಾಗಲೇ ಬೇರೆಡೆ ನಿಯೋಜನೆಯಲ್ಲಿದ್ದಾರೆ. ಇನ್ನು ಮೂವರು ಶಿಕ್ಷಕರನ್ನು ದಿಡೀರ್ ವರ್ಗಾವಣೆ ಮಾಡಲಾಗಿದ್ದು, ಕೇವಲ ಇಬ್ಬರು ಶಿಕ್ಷಕರು ಶಾಲೆ ನಡೆಸುವಂತಾಗಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಗಂಭೀರವಾಗಿ ಹಾನಿಗೊಳಗಾಗಿದೆ. ಪೋಷಕರು ಪ್ರಾಥಮಿಕ ಹಂತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಕೂಡಲೇ…

Read More
The Siasat News - Images

ಈದ್ ಮೀಲಾದ್ ಪ್ರಯುಕ್ತ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡಿದ ಸುನ್ನಿ ದಾವತೆ ಇಸ್ಲಾಮಿ ಶಿರಾಳಕೊಪ್ಪ ಘಟಕ…

ಶಿರಾಳಕೊಪ್ಪ:5-9-2025 ಈದ್ ಮಿಲಾದ್ ಉನ್ ನಬಿ ಹಬ್ಬವು ಪ್ರವಾದಿ ಮುಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಮತ್ತು ರಬಿ ಅಲ್-ಅವ್ವಲ್ ತಿಂಗಳ 12 ನೇ ದಿನದಂದು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು, ಮುಸ್ಲಿಮರು ಪ್ರಾರ್ಥನೆಗಳು, ಕುರಾನ್ ಪಠಣಗಳು, ಧರ್ಮೋಪದೇಶಗಳು ಮತ್ತು ಪ್ರವಾದಿಯವರ ಶಾಂತಿ ಮತ್ತು ಕರುಣೆಯ ಬೋಧನೆಗಳನ್ನು ಪ್ರತಿಬಿಂಬಿಸುವ ದಾನ ಕಾರ್ಯಗಳಿಗಾಗಿ ಒಟ್ಟುಗೂಡುತ್ತಾರೆ. ಪಟ್ಟಣದ ಸುನ್ನಿ ದಾವತೆ ಇಸ್ಲಾಮಿ ಸಂಘಟನೆ ವತಿಯಿಂದ ಪ್ರವಾದಿಯವರ 1500 ನೇ ಹುಟ್ಟುಹಬ್ಬದ ಅಂಗವಾಗಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಕಿಟ್ ಗಳನ್ನು…

Read More
The Siasat News - Images

ಶಿರಾಳಕೊಪ್ಪ ಟೌನ್ ಕಾಂಗ್ರೆಸ್ ಗೆ ನೂತನ ಸಾರಥಿಯಾಗಿ ನಯಾಜ್ ಅಹ್ಮದ್ ಖುರೇಶಿ ನೇಮಕ…

ಶಿರಾಳಕೊಪ್ಪ:4-8-2025 ಟೌನ್ ಕಾಂಗ್ರೆಸ್ ಸಮಿತಿ ಯ ನೂತನ ಅಧ್ಯಕ್ಷರಾಗಿ ನಯಾಜ್ ಅಹ್ಮದ್ ಖುರೇಶಿಯವರನ್ನು ನೇಮಕ ಮಾಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನಯಾಜ್ ರವರ ತಂದೆಯೂ ಕೊಡ ಸುದೀರ್ಘ ಅವಧಿಗೆ ಟೌನ್ ಅಧ್ಯಕ್ಷರಾಗಿ ಪಕ್ಷದ ಸೇವೆ ಸಲ್ಲಿಸಿದ್ದು ಈಗ ಅವರ ಮಗ ಶಿಕಾರಿಪುರ ತಾಲ್ಲೂಕು ಯೂಥ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾಗಿ ಹಾಗೂ ಪಕ್ಷದ ವಿವಿಧ ಹಂತದ ಜವಾಬ್ದಾರಿಗಳನ್ನು ನಿರ್ವಹಿಸಿದ ನಯಾಜ್ ಅವರಿಗೆ ಪಟ್ಟಣದ ಕಾಂಗ್ರೆಸ್ ಪಕ್ಷದ ಸಾರಥ್ಯ…

Read More
The Siasat News - Images

ಶಿರಾಳಕೊಪ್ಪದ ಎಂ. ಆರ್ ಲೇಔಟ್ ನಲ್ಲಿ ಪ್ರಥಮ ಬಾರಿಯ ಗಣೇಶನ ಮೂರ್ತಿ ಪ್ರತಿಷ್ಠಾಪನೆ….

ಶಿರಾಳಕೊಪ್ಪ:29-8-2025 ಪಟ್ಟಣದ ಎಂ.ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ಪ್ರಥಮ ಬಾರಿಗೆ ಶೀ ಮಹಾಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಯಿತು. ಕಲಾವಿದ ರತ್ನಾಕರ ಭಂಡಾರಿಯವರು ನಿರ್ಮಿಸಿದ ಕೇದಾರನಾಥ ದೇವಸ್ಥಾನ ಹಿನ್ನೆಲೆಯುಳ್ಳ ಮನಮೋಹಕ ಸ್ತಬ್ದ ಚಿತ್ರ ಜನರ ಆಕರ್ಷಣೆಗೆ ಕಾರಣವಾಗಿದೆ. ಸುಮಾರು 150 ಮನೆಗಳು ಇರುವ ಎಂ ಆರ್ ಲೇಔಟ್, ಅರುಣೋದಯ ಲೇಔಟ್ ನಲ್ಲಿ ರಸ್ತೆ ಸೇರಿದಂತೆ, ಚಿರಂಡಿ, ನೀರು, ಬೆಳಕಿನ ಸೌಕರ್ಯವಿಲ್ಲದ ಕಾರಣ ಸ್ಥಳೀಯರು, ವೃದ್ಧರು, ಮಕ್ಕಳು ಪರದಾಡುವ ಪರಿಸ್ಥಿತಿ ಎದುರಾಗಿದ್ದು ಸಂಭಂದ ಪಟ್ಟವರು ಗಮನ ಹರಿಸಬೇಕಾಗಿ ಸ್ಥಳೀಯರ…

Read More
The Siasat News - Images

ಶಿರಾಳಕೊಪ್ಪದ ಶ್ರೀ ಬಸವೇಶ್ವರ ದೇವಸ್ಥಾನ ವತಿಯಿಂದ 62ನೇ ವರ್ಷದ ಮಹಾಗಣಪತಿ ಪ್ರತಿಷ್ಠಾಪನೆ…..

ಶಿರಾಳಕೊಪ್ಪ:29-8-2025 ಪಟ್ಟಣದ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ 62ನೇ ವರ್ಷದ ಶ್ರೀ ಗೌರಿ ಹಾಗೂ ಶ್ರೀ ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ಮಹಾ ಗಣಪತಿ ಉತ್ಸವ ಸಮಿತಿ ಶಿರಾಳಕೊಪ್ಪ ದ ಅಧ್ಯಕ್ಷರಾದ ಎಂ. ಜೆ ವಿಜಯ ಕುಮಾರ ರವರ ಸಾರತ್ಯ ದಲ್ಲಿ ನಿತ್ಯವೂ ವಿಭಿನ್ನ ಕಾರ್ಯಕ್ರಮ ಗಳು ಜರುಗಲಿದ್ದು ದಿನಾಂಕ 3-9-2025 ರಂದು ಬುಧವಾರ ಕಡೇನಂದಿಹಳ್ಳಿಯ ದುಗ್ಲಿ ಮಠದ ಶ್ರೀ ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ…

Read More