ಶಿರಾಳಕೊಪ್ಪ:18-11-2025
ಪಟ್ಟಣದ ಐತಿಹಾಸಿಕ ಶ್ರೀ ಕೋರಿ ಟೋಪಿ ವಿರಕ್ತ ಮಠಕ್ಕೆ ನೂತನ ಉತ್ತರಾಧಿಕಾರಿಗಳಾಗಿ ಶ್ರೀ ವೀರ ಬಸವ ದೇವರು ಹುಕ್ಕೇರಿ ಮಠ ಇವರು ಶಿರಾಳಕೊಪ್ಪಕ್ಕೆ ಪುರ ಪ್ರವೇಶ ಗೊಳ್ಳಲಿದ್ದಾರೆಂದು ಮಠಾಧ್ಯಕ್ಷರಾದ ಶ್ರೀ ಮ. ನಿ. ಪ್ರ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಶ್ರೀ ಕೋರಿಟೋಪಿ ವಿರಕ್ತ ಮಠ ಶಿರಾಳಕೊಪ್ಪ ದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಶ್ರೀಗಳು ಕಳೆದ ಸುಮಾರು 40ವರ್ಷ ಗಳಿಂದ ಮಠದ ಗುರುಗಳಾಗಿ, ಪೀಠಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು ಪೂಜಾನುಷ್ಠಾನ ಕಾರ್ಯ ಕೈ ಗೊಳ್ಳಲು ಒಲವು ಮಾಡಿದ ಕಾರಣ ಮಠದ ಹಿರಿಯರು ಮತ್ತು ಸಮಾಜದ ಗಣ್ಯರೊಂದಿಗೆ ಚರ್ಚೆ ನಡೆಸಿ ಶ್ರೀ ವೀರ ಬಸವ ದೇವರು ಹುಕ್ಕೇರಿ ಮಠ ಹಾವೇರಿ ಇವರನ್ನು ಮಠದ ಉತ್ತರಾ ಧಿಕಾರಿಯಾಗಿ ನೇಮಕ ಮಾಡಲು ಒಮ್ಮತದ ತೀರ್ಮಾನ ಕೈ ಗೊಳ್ಳಲಾಗಿದೆ.
ದಿನಾಂಕ 21-11-2025 ರಂದು ನಡೆಯಲಿರುವ ಶ್ರೀ ಲಿಂll ಶಿವಕುಮಾರ ಮಹಾಸ್ವಾಮಿಗಳವರ ಪುಣ್ಯ ಸ್ಮರಣೋತ್ಸವದಂದು ಸಕಲ ವಾದ್ಯಗಳೊಂದಿಗೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಾಜ ಬೀದಿಯ ಮೂಲಕ ಶ್ರೀ ವಿರಕ್ತ ಮಠಕ್ಕೆ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಗುವುದೆಂದು ತಿಳಿಸಿದರು.
ವೀರಶೈವ ಸಮಾಜದ ಮುಖಂಡ ಚೆನ್ನವೀರ ಶೆಟ್ಟರ್ ಮಾತನಾಡಿ ನೂತನ ಉತ್ತರಾಧಿಕಾರಿಗಳ ನೇಮಕ ಕಾರ್ಯಕ್ರಮದ ಅಂಗವಾಗಿ ದಿನಾಂಕ 21.11.2025 ರಿಂದ 28.11.2025 ರವರೆಗೆ ಮಠದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನಗಳು ಜರುಗಲಿದ್ದು ಸರ್ವ ಭಕ್ತಾದಿಗಳು, ಪಟ್ಟಣದ ಎಲ್ಲಾ ಸಮಾಜ ಭಾಂದವರು ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಟೌನ್ ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ ಆನೆಮಠ ಸೇರಿದಂತೆ ಸಮಾಜದ ಮುಖಂಡರಾದ ಕುಬುಸದ ರಾಜಣ್ಣ,ಚಂದ್ರಣ್ಣ ಸೂರಣಗಿ, ಚಂದ್ರಶೇಖರ್ ಮಂಚಾಲಿ, ಚಂದ್ರಶೇಖರ್ ಹೆಚ್ ಎಂ, ಲೋಕಪ್ಪ ರಟ್ಟಿಹಳ್ಳಿ, ಸಂಗಮೇಶ ದುರ್ಗದ, ಉಮೇಶ್ ಇಸ್ಲೂರು, ರಂಜನ್ ಭಂಡಾರಿ, ಅಣ್ಣಪ್ಪ ಮತ್ತಿತರರು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ 9538633929

