ಶಿಕಾರಿಪುರ:13-01-2024
ಪಟ್ಟಣದ ತಾಲ್ಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ ಎಲ್ ಡಿ) ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿದ 10 ಜನರಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ 6 ಮಂದಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆಂದು ಕೆ ಪಿ ಸಿ ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಿಕಾರಿಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಪ್ರಾಧಿಕಾರದ ಅಧ್ಯಕ್ಷ ಎಸ್ ಪಿ ನಾಗರಾಜ ಗೌಡ ತಿಳಿಸಿದರು.

ಚುನಾವಣೆ ಯಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಉಮೇಶ್, ಶ್ರೀಮತಿ ಶಾಂತಮ್ಮ, ಕಾಂತರಾಜು ಗೊಗ್ಗ, ಈಶ್ವರಪ್ಪ, ಲೋಹಿತ್ ಕಪ್ಪನಹಳ್ಳಿ, ಶ್ರೀ ಮತಿ ಸುವರ್ಣಮ್ಮ, ಹಾಗೂ ದಿನೇಶ್ ಕೊರಟಿಕೆರೆ ಜಯಭೇರಿಯಾಗಿದ್ದು. ಗೆಲುವು ಸಾಧಿಸಿದ ನೂತನ ನಿರ್ದೇಶಕರಿಗೆ ಎಸ್ ಪಿ ನಾಗರಾಜ ಗೌಡರ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಪಕ್ಷದ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಧನ್ಯವಾದ ಸಲ್ಲಿಸಿದರು.

