ಡಿ19ಕ್ಕೆ ನಡೆಯಲಿದೆ ಬಜ್ಮೆ ಉಮ್ಮೀದ್ ಅದೀಬಿ ಶಿರಾಳಕೊಪ್ಪ ವತಿಯಿಂದ ಮೂರನೇ ಬಾರಿ ರಾಷ್ಟ್ರೀಯ ಕವಿ ಸಮ್ಮೇಳನ….

The Siasat News - Images

ಶಿರಾಳಕೊಪ್ಪ:13/12/2025

ಪಟ್ಟಣದ ಸಾಂಸ್ಕೃತಿಕ ವೇದಿಕೆ ಬಜ್ಮೆ ಉಮ್ಮೀದ್ ಅದೀಬಿ ವತಿಯಿಂದ ಪ್ರತಿ ವರ್ಷ ನಡೆಯುವ ಕವಿ ಸಮ್ಮೇಳನ ಇದೇ ಡಿಸೆಂಬರ್ 19 ರ ಶುಕ್ರವಾರ ರಾತ್ರಿ ನಡೆಯಲಿದೆ ಎಂದು ವೇದಿಕೆ ಅಧ್ಯಕ್ಷ ಮುಹಮ್ಮದ್ ಅಯೂಬ್ ಕೆ ಜಿ ಎನ್ ತಿಳಿಸಿದರು.

The Siasat News - Images

ಊರಿನ ಮಧ್ಯ ಭಾಗದಲ್ಲಿರುವ ಹಜರತ್ ಟಿಪ್ಪು ಸುಲ್ತಾನ್ ಮ್ಯಾರೇಜ್ ಹಾಲ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕವಿ ಸಮ್ಮೇಳನದಲ್ಲಿ ದೇಶ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಪ್ರಖ್ಯಾತ ಕವಿ ಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ಥಳೀಯ ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಪ್ರೋತ್ಸಾಹಿಸಲು ವಿವಿಧ ರೀತಿಯ ಪ್ರತಿಭಾ ಪುರಸ್ಕಾರಗಳು ಮತ್ತು ಸಮಾಜ ಮುಖಿ ಕೆಲಸ ಮಾಡುವವರಿಗೆ ಗುರುತಿಸುವ ಕೆಲಸ ವೇದಿಕೆ ವತಿಯಿಂದ ಮಾಡಲಾಗುವುದಾಗಿ ಅವರು ತಿಳಿಸಿದರು.

ವೇದಿಕೆಯ ಕಾರ್ಯದರ್ಶಿ ಜುಲ್ಫಿಕ್ಕಾರ್ ಅಲಿ ಮಾತನಾಡಿ ಬಜ್ಮೆ ಉಮ್ಮೀದ್ ಅದೀಬಿ ಸಾಂಸ್ಕೃತಿಕ ವೇದಿಕೆ ಶಿರಾಳಕೊಪ್ಪ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಲ್ಪ ಸಂಖ್ಯಾತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಮಾತೃ ಭಾಷೆ ಉರ್ದು ಸೇರಿದಂತೆ ಕನ್ನಡ ಭಾಷೆಯ ಬಗ್ಗೆ ಅರಿವು ಮೋಡಿಸುವ ಕೆಲಸ ಮಾಡುತ್ತಿದೆ. ವೇದಿಕೆಯಲ್ಲಿ ಶಿಕ್ಷಕರು, ಪತ್ರಕರ್ತರು, ವ್ಯಾಪಾರಸ್ಥರು ಸೇರಿದಂತೆ ಸಮಾಜದಲ್ಲಿ ವಿವಿಧ ರೀತಿಯಲ್ಲಿ ಸಮಾಜ ಮುಖಿ ಕೆಲಸ ಮಾಡುವ ಮಂದಿ ಸದಸ್ಯರಿದ್ದು ಎಲ್ಲರ ಸದುದ್ದೇಶ ಮುಸ್ಲಿಂ ಸಮಾಜದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೋಡಿಸುವುದು ಮತ್ತು ವಿದ್ಯಾರ್ಥಿಗಳಿಗೆ ತಕ್ಕ ಮಟ್ಟದಲ್ಲಿ ವಿವಿಧ ರೀತಿಯಲ್ಲಿ ಸಹಾಯ ಮಾಡುವುದು ಆಗಿದೆ ಎಂದರು.

ಸಮ್ಮೇಳನದ ಸಂಚಾಲಕ ಶಿಕ್ಷಕ ಶಫಿ ಅಹ್ಮದ್ ಮಾತನಾಡಿ ಪ್ರವಾದಿ ಮಹಮ್ಮದ್ ರವರ ಜನ್ಮದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ಕವಿ ಸಮ್ಮೇಳನ (ನಾತೀಯ ಮುಷಾಯೆರಾ)ದಲ್ಲಿ ದೇಶದ ದ ಸುಪ್ರಸಿದ್ದ ಹಾಗೂ ಪ್ರಖ್ಯಾತ ಕವಿಗಳ ತಂಡ ಪಟ್ಟಣಕ್ಕೆ ಆಗಮಿಸಲಿದೆ ಸ್ಥಳೀಯರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ಕರೆ ನೀಡಿದರು ..

ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರಾದ ಇರ್ಫಾನ್, ಸೊಹೈಲ್ ಶುಂಠಿ, ಜಿಯಾವುಲ್ಲ ಬುಧ್ವಂತ್, ಸೈಯದ್ ಆಬಿದ್, ಮುದಸ್ಸಿರ್, ಎಜಾಜ್ ಅಹ್ಮದ್, ಜಫರ್ ಯಾಬ್, ನೂರುಲ್ಲಾ ತವಕ್ಕಲ್, ಫಾರೂಕ್ ಶೇಕ್ ಇಮ್ರಾನ್. ಇದ್ದರು.

ವರದಿ: ನವೀದ್ ಶಿರಾಳಕೊಪ್ಪ.

Share the news!

Leave a Reply

Your email address will not be published. Required fields are marked *