ಸೊರಬ : 17/10/2024
ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡು
ಐವತ್ತು ವರ್ಷ ಪೂರ್ಣಗೊಂಡ
ಹಿನ್ನೆಲೆ ಕರ್ನಾಟಕ ಸುವರ್ಣ
ಸಂಭ್ರಮ ರಥವನ್ನು ಪಟ್ಟಣದ
ಪುರಸಭೆ ಮುಂಭಾಗದ ವೃತ್ತದಲ್ಲಿ
ತಾಲೂಕು ಆಡಳಿತ, ಪುರಸಭೆ,
ಕನ್ನಡ ಸಾಹಿತ್ಯ ಪರಿಷತ್, ಕನ್ನಡ
ಸಾಹಿತ್ಯ ಸಾಂಸ್ಕೃತಿಕ ವೇದಿಕೆ,
ಕನ್ನಡ ಜಾನಪದ ಪರಿಷತ್ ಸೇರಿ
ದಂತೆ ವಿವಿಧ ಕನ್ನಡಪರ ಸಂಘಟನೆಗಳಿಂದ ಅದ್ಧೂರಿಯಾಗಿ
ಸ್ವಾಗತಿಸಲಾಯಿತು.
ತಾಲೂಕಿನ ಗಡಿಭಾಗ
ಛತ್ರದಹಳ್ಳಿಗೆ ರಥವು ಆಗಮಿಸು
ತ್ತಿದ್ದಂತೆ ಮಾಲಾರ್ಪಣೆ
ಮಾಡುವ ಮೂಲಕ ತಹಶೀ
ಲ್ದಾರ್ ಮಂಜುಳಾ ಹೆಗಡಾಳ್
ಸ್ವಾಗತಿಸಿದರು. ಪುರಸಭೆ
ಮುಂಭಾಗದಲ್ಲಿ ಪುರಸಭೆ ಮಾಜಿ
ಅಧ್ಯಕ್ಷ ಹಾಗೂ ಹಾಲಿ ಸದಸ್ಯ
ಎಂ.ಡಿ. ಉಮೇಶ್ ನಾಡದೇವಿ
ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು. ಪುರಸಭೆ
ಮುಂಭಾಗದ ವೃತ್ತದಿಂದ ಮುಖ್ಯ
ರಸ್ತೆಯಲ್ಲಿ ರಥವು ಗುಡ್ಡೆಕೊಪ್ಪದ
ಶ್ರೀ ಸಿದ್ಧರಾಮೇಶ್ವರ ಯುವಕ
ಸಂಘದ ಡೊಳ್ಳು ಕುಣಿತ
ದೊಂದಿಗೆ ಸಂಚರಿಸಿತು.
ಕನ್ನಡ ಸಾಹಿತ್ಯ ಪರಿಷತ್
ಗೌರವಾಧ್ಯಕ್ಷ ರಾಜಪ್ಪ ಮಾಸ್ತರ್
ಮಾತನಾಡಿ, ಕನ್ನಡ ನಾಡು, ನುಡಿಗೆ
ಇರುವ ಇತಿಹಾಸವನ್ನು ಅರಿಯಲು
ಇದೊಂದು ಉತ್ತಮ ಕಾರ್ಯ
ವಾಗಿದೆ. ರಾಜ್ಯಕ್ಕೆ ಕರ್ನಾಟಕವೆಂದು
ನಾಮಕರಣ ಗೊಂಡು ಸುವರ್ಣ
ವರ್ಷಾಚರ ಣೆಯ ಸಂದರ್ಭದಲ್ಲಿ
ಕರು ನಾಡಿನ ಹಿರಿಯನ್ನು ಮುಂದಿನ
ಪೀಳಿಗೆಗೆ ಪರಿಚಯಿಸುವ ಕಾರ್ಯ
ವಾಗಬೇಕಿದೆ. ರಥವು ತಾಲೂಕಿಗೆ
ಆಗಮಿಸಿರುವುದು ಅತ್ಯಂತ ಸಂತ
ಸದ ವಿಷಯವಾಗಿದೆ ಎಂದರು.
ಕರ್ನಾಟಕದಲ್ಲಿ ವಿವಿಧತೆ
ಯಲ್ಲಿ ಏಕತೆಯನ್ನು ಕನ್ನಡಿಗರು
ಸಾಧಿಸಿದ್ದಾರೆ. ಬಹುಸಂಸ್ಕೃತಿಯ
ನಾಡಿನಲ್ಲಿ ಹಿಂದಿ ಹೇರಿಕೆ
ಸಲ್ಲದು. ಕನ್ನಡಕ್ಕೆ ಸುಮಾರು
ಎರಡು ಸಾವಿರ ವರ್ಷಗಳ
ಇತಿಹಾಸವಿದ್ದು, ಶಾಸ್ತ್ರಿಯ ಭಾಷಾ
ಸ್ಥಾನಮಾನವು ಲಭಿಸಿದೆ. ಕನ್ನಡ
ನಾಡು, ನುಡಿ ಮತ್ತು ಸಂಸ್ಕೃತಿ
ತಿಯ ಬೆಳವಣಿಗೆಗೆ ಪ್ರತಿಯೊ
ಬ್ಬರು ಶ್ರಮಿಸಬೇಕು. ಸರ್ಕಾರಗಳು
ಕನ್ನಡಿಗರಿಗೆ ಉದ್ಯೋಗದಲ್ಲಿ
ಮೊದಲ ಪ್ರಾಶಸ್ತ್ಯ ನೀಡಬೇಕು
ಎಂದರು.
ತಾ.ಪಂ,ಇ ಒ ಡಾ. ಎನ್.
ಆರ್. ಪ್ರದೀಪ್ ಕುಮಾರ್,
ತಾಲೂಕು ಆರೋಗ್ಯಾಧಿಕಾರಿ
ಡಾ. ವಿನಯ್ ಪಾಟೀಲ್,
ಬಿಇಒ ಆರ್. ಪುಷ್ಪಾ, ಸಹಾಯಕ
ಕೃಷಿ ನಿರ್ದೇಶಕ ಕೆ.ಜಿ. ಕುಮಾರ್.
ವಲಯ ಅರಣ್ಯಾದಿಕಾರಿ
ಜಾವಿದ್ ಅಂಗಡಿ,
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗೃಹ
ರಕ್ಷಕದಳದ ನಿವೃತ್ತ ಘಟಕಾಧಿಕಾರಿ
ಬಿ. ರೇವಣಪ್ಪ, ಘಟಕಾಧಿ
ಕಾರಿ ಎಚ್.ಎಂ. ಪ್ರಶಾಂತ್,
ಕಸಾಪ ಅಧ್ಯಕ್ಷ ಶಿವಾನಂದ,
ಮಾಜಿ ಅಧ್ಯಕ್ಷ ಕುಮಾರಸ್ವಾಮಿ,
ಕನ್ನಡ ಸಾಹಿತ್ಯ ಸಾಂಸ್ಕೃತಿಕ
ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್
ಶೇಟ್, ಕನ್ನಡ ಜಾನಪದ ಪರಿ
ಷತ್ ಅಧ್ಯಕ್ಷ ಡಾ.ಎಸ್.ಎಂ.
ನೀಲೇಶ್, ಶಿರಸ್ತೆದಾರ್ ನಿರ್ಮಲಾ,
ಕಂದಾಯ ಇಲಾಖೆಯ ಲೋಹಿತ್,
ಜಿ.ಪಂ. ಅಭಿಯಂತರ ನಾಗ
ರಾಜ ಅನ್ವೇಕರ್, ಅಕ್ಷರ ದಾಸೋ
ಹದ ಸಹಾಯಕ ನಿರ್ದೇಶಕ
ಶ್ರೀಕಾಂತ್, ಸಿಡಿಪಿಒ ಕಚೇರಿಯ
ನೇತ್ರಾವತಿ, ಅಗ್ನಿ ಶಾಮಕ ದಳದ
ಠಾಣಾಧಿಕಾರಿ ಮಹಾಭಲೇಶ್ವರ
ನಾಯ್ಕ್, ಪುರಸಭೆ ಸದಸ್ಯರಾದ
ಎಂ.ಡಿ. ಉಮೇಶ್
, ವಾಲ್ಮೀಕಿ ಸಮಾಜದ
ಮುಖಂಡ ಸಂಜೀವ ನೇರಲಿಗಿ,
ಉಪನ್ಯಾಸಕ ಡಾ. ಉಮೇಶ್ ಭದ್ರಾ
ಸೇರಿದಂತೆ
ಮತ್ತಿತರರಿದ್ದರು.

