45000ಸಾವಿರಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ಉದ್ಯೋಗಿಗಳಾಗಿ ಮಾಡಿದ ಕೀರ್ತಿ ಆಳ್ವಾಸ್ ವಿದ್ಯಾ ಸಂಸ್ಥೆಗಿದೆ- ವಿವೇಕ್ ಆಳ್ವಾ…

The Siasat News - Images

ಶಿರಾಳಕೊಪ್ಪ:18/1/2026

ಆಳ್ವಾಸ್ ವಿದ್ಯಾ ಸಂಸ್ಥೆ ಕಳೆದ 18 ವರ್ಷದಿಂದ ಉದ್ಯೋಗ ಮೇಳಗಳನ್ನು ರಾಜ್ಯ ಹಾಗೂ ಅಂತರಾಜ್ಯ ಮಟ್ಟದಲ್ಲಿ ಆಯೋಜಿಸಿ 45,000ಕ್ಕೂ ಹೆಚ್ಚು ನಿರುದ್ಯೋಗಿ ಗಳನ್ನು ಉದ್ಯೋಗಗಳು ಲಭಿಸುವಂತೆ ಮಾಡಿದೆ ಎಂದು ಆಳ್ವಾಸ್ ವಿದ್ಯಾ ಸಂಸ್ಥೆ ಮೊಡಬಿದರೆಯ ವಿವೇಕ್ ಆಳ್ವಾ ಹೇಳಿದರು.

ಪಟ್ಟಣದ ನೇರಲಗಿ ಸಮುದಾಯ ಭವನದಲ್ಲಿ ಶನಿವಾರ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಶಿಕಾರಿಪುರ ಹಾಗೂ ಆಳ್ವಾಸ್ ಚಿಕ್ಕನ ಪ್ರತಿಷ್ಠಾನ ಮೂಡಬಿದರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉದ್ಯೋಗ ಮೇಳದ ಪೂರ್ವಭಾವಿ ತರಬೇತಿ ಶಿಬಿರದಲ್ಲಿ ಮಾತನಾಡಿದ ಅವರು

The Siasat News - Images

ಶಿಕಾರಿಪುರ ತಾಲ್ಲೂಕಿನ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಗಳು ಕೊಡಿಸುವಲ್ಲಿ ಬಿ ವೈ ರಾಘವೇಂದ್ರ ಮತ್ತು ವಿಜಯೇಂದ್ರ ರವರು ಪ್ರಾಮಾಣಿಕ ಪ್ರಯತ್ನ ಗಳು ಮಾಡುತ್ತಿದ್ದು ಆಳ್ವಾಸ್ ಸಂಸ್ಥೆ ಗುಣ ಮಟ್ಟದ ಫಲಿತಾಂಶ ನೀಡಲು ಶ್ರಮಿಸುತ್ತಿದೆ.

ತಮ್ಮ ಸ್ವಯಂ ಕೃತ ತಪ್ಪುಗಳಿದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಉದ್ಯೋಗ ಗಳನ್ನು ಕಳೆದು ಕೊಳ್ಳುತ್ತಾರೆ. ಯಾವುದೇ ಸಂಸ್ಥೆಯಾಗಲಿ ತನ್ನ ಉದ್ಯೋಗಿಗೆ ಸರಿಯಾದ ಸಂಬಳ ನೀಡಬೇಕೆಂದರೆ ಅದಕ್ಕೆ ತಕ್ಕಂತೆ ಕೆಲಸ ಕೊಡ ಬಯಸುತ್ತದೆ.
ಆಳ್ವಾಸ್ ಸಂಸ್ಥೆ ಶಿಫಾರಸ್ಸು ಗಳು ಮತ್ತು ಪ್ರಾಮುಖ್ಯತೆ ಗೆ ಮಣೆ ಹಾಕುವುದಿಲ್ಲ ಹಾಗಾಗಿ ಉದ್ಯೋಗ ಮೇಳಕ್ಕೆ ಹಾಜರಾಗುವ ಅಭ್ಯರ್ಧಿಗಳು ಪೂರ್ವವಾಗಿ ನಡೆಯುವ ತರಬೇತಿಕಾರ್ಯಗಾರ ಗಳಲ್ಲಿ ಭಾಗವಹಿಸಿ ಆತ್ಮಸ್ಥೈರ್ಯದಿಂದ ಭಾಗವಹಿಸಿ ಉದ್ಯೋಗ ಮೇಳಕ್ಕೆ ಬರವಂತಹ 75 ಕ್ಕೂ ಹೆಚ್ಚು ಕಂಪನಿಗಳ ಲಾಭ ಪಡೆದು ಕೊಳ್ಳ ಬೇಕೆಂದು ಸಲಹೆ ನೀಡಿದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಯ ಮಾಜಿ ಅಧ್ಯಕ್ಷ ಕೆ ಎಸ್ ಗುರುಮೂರ್ತಿ ಮಾತನಾಡಿ ತಾಲ್ಲೂಕಿನಾದ್ಯಂತ ಈಗಾಗಲೇ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು, ಮುರಾರ್ಜಿ ಶಾಲೆಗಳು, ಉತ್ತಮ ರಸ್ತೆಗಳು ಹಾಗೂ ರೈತರಿಗೆ ನೀರಾವರಿ ಸೌಲಭ್ಯ ವನ್ನು ಕಲ್ಪಿಸಲಾಗಿದ್ದು ಇಲ್ಲಿನ ವಿದ್ಯಾವಂತ ಯುವಕ ಮತ್ತುಯುವತಿಯರಿಗೆ ಸ್ವಾಲಂಬಿಯಾಗಿ ಬದುಕಲು ಉದ್ಯೋಗ ದೊರಕಿಸಿ ಕೊಡುವ ವಿಶೇಷ ಪ್ರಯತ್ನ ಬಿ ಎಸ್ ಯಡಿಯೂರಪ್ಪ ರವರ ಕುಟುಂಬ ಮಾಡುತ್ತಿದೆ. ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

The Siasat News - Images

ಕಾರ್ಯಕ್ರಮದಲ್ಲಿ ನೂರಾರು ನೋಂದಾಯಿತ ವಿದ್ಯಾರ್ಥಿಗಳು ಭಾಗವಹಿಸಿ ಆಳ್ವಾಸ್ ಸಂಸ್ಥೆ ವತಿಯಿಂದ ತರಬೇತಿ ಪಡೆದರು

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂಬಿ ಶಿವಕುಮಾರ್, ರಾಜ್ಯ ಅರಣ್ಯ ನಿಗಮದ ಮಾಜಿ ಉಪಾಧ್ಯಕ್ಷ ಕೆ ರೇವಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಿಂಬೆಗೊಂದಿ ಸಿದ್ಲಿಂಗಪ್ಪ, ಟೌನ್ ಬಿಜೆಪಿ ಅಧ್ಯಕ್ಷ ಎಸಿ ಚನ್ನವೀರಪ್ಪ, ಮ್ಯಾಮ್ ಕೋಸ್ ನಿರ್ದೇಶಕ ಹಿರೇಜಂಬೂರು ವೀರೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೌಲಿ ಸುಬ್ರಮಣ್ಯ, ಆರ್ ಕೆ ಶಂಭು, ಉದ್ಯಮಿ ಮಳವಳ್ಳಿ ಚಂದ್ರು, ತಾಳಗುಂದ ಸತೀಶ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ವರದಿ:ನವೀದ್ ಶಿರಾಳಕೊಪ್ಪ 9538633929

Share the news!

Leave a Reply

Your email address will not be published. Required fields are marked *