3%ಲಂಚಕ್ಕೆ ಬೇಡಿಕೆ ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಲೋಕಾಯುಕ್ತ ಬಲೆಗೆ….

The Siasat News - Images

ಶಿರಾಳಕೊಪ್ಪ:16-06-2025

ಪಿ ಡಬ್ಲ್ಯೂ ಡಿ ಗುತ್ತಿಗೆದಾರನಿಗೆ 3%ಲಂಚಕ್ಕೆ ಬೇಡಿಕೆ ಇಟ್ಟ ಸೊರಬ ತಾಲ್ಲೂಕು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಆಫೀಸರ್ ಪರಶುರಾಮ ಎಚ್ ನಾರಾಳ ಎಂಬುವ ಅಧಿಕಾರಿಯನ್ನು ಲೋಕಾ ಯುಕ್ತ ಪೂಲೀಸರು ಇಂದು ಸಂಜೆ ಬಲೆಗೆ ಬೀಳಿಸಿದ್ದಾರೆ.

The Siasat News - Images

ದೋರುದಾರರಾದ ಗುತ್ತಿಗೆ ದಾರ ಲಿಂಗರಾಜ ಉಳ್ಳಾಗಡ್ಡಿರವರು
ಸೊರಬ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ದಾಂಬರೀಕರಣ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಭಂಧಿಸಿದಂತೆ ಒಟ್ಟು 77,59,437ರೊ ಗಳ ಕಾಮಗಾರಿಗಳನ್ನು ಮುಗಿಸಿ ಸದರಿ ಕಾಮಗಾರಿಗಳ ಹಣವನ್ನು ಮಂಜೂರು ಮಾಡಿ ಕೊಡಲು ಸೊರಬ ತಾಲ್ಲೂಕು ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಪರಶುರಾಮ ಎಚ್ ನಾರಾಳ 3% ನಂತೆ ಲಂಚದ ಹಣಕ್ಕೆ ಬೇಡಿಕೆ ಇಟ್ಟದ್ದು ಅದರಲ್ಲಿ ಈಗಾಗಲೇ 163000/- ರೊ ಗಳನ್ನು ಗುತ್ತಿಗೆದಾರನಿಂದ ಪಡೆದುಕೊಂಡು 70000/- ರೊ ಗಳನ್ನು ಮತ್ತೆ ಕೊಡ ಬೇಕೆಂದು ಬೇಡಿಕೆ ಇಟ್ಟ ಸೆಕ್ಷನ್ ಆಫೀಸರ್ ಪರಶುರಾಮ ರವರ ವಿರುದ್ದ ಸೊಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೊರಿನ ಮೇರೆಗೆ ಕಾರ್ಯ ಪ್ರವೃತ್ತರಾದ ಜಿಲ್ಲಾ ಲೋಕಾಯುಕ್ತ ಪೋಲೀಸರ ತಂಡ ಶಿರಾಳಕೊಪ್ಪದ ಲಕ್ಷ್ಮಿ ಮೆಡಿಕಲ್ ಸ್ಟೋರ್ ಎದುರು ಫಿರ್ಯಾದಿ ಯಿಂದ 30,000/- ರೊ ಲಂಚದ ಹಣವನ್ನು ಪಡೆದು ಕೊಂಡ ಸಮಯದಲ್ಲಿ ಟ್ರ್ಯಾಪ್ ಮಾಡಿ ಕಲಂ 7(a) ಭ್ರಷ್ಟಾಚಾರ ಕಾಯಿದೆ -1988 ರೀತ್ಯ ಶಿವಮೊಗ್ಗ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣಿ ಯಲ್ಲಿ ಪ್ರಕರಣ ದಾಖಲು ಮಾಡಿರುತ್ತಾರೆ.

ಕರ್ನಾಟಕ ಲೋಕಾಯುಕ್ತ ಪೊಲೀಸ್ ಶಿವಮೊಗ್ಗ ಜಿಲ್ಲೆಯ ಅಧೀಕ್ಷಕರಾದ ಮಂಜುನಾಥ ಚೌಧರಿ ರವರ ಮಾರ್ಗದರ್ಶನ, ಪಿ ಬಿ ಚಂದ್ರಶೇಖರ್ ಪೊಲೀಸ್ ಉಪಾಧೀಕ್ಷಕರು ಲೋಕಾಯುಕ್ತ ಶಿವಮೊಗ್ಗ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರುದ್ರೇಶ್ ಕೆ ಪಿ, ಗುರುರಾಜ್ ಎನ್ ಮೈಲಾರ್, ವೀರಬಸಪ್ಪ ಎಲ್ ಸಿಬ್ಬಂದಿಗಳಾದ ಮಂಜುನಾಥ್, ಟೀಕಪ್ಪ, ಚನ್ನೇಶ್, ಯೋಗೇಶ್, ಸುರೇಂದ್ರ, ಚಂದ್ರಿಬಾಯಿ, ಪ್ರದೀಪ್, ಜಯಂತ್,ಪ್ರಕಾಶ್, ಆನಂದ್, ಗಂಗಾಧರ, ದೇವರಾಜ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *