25 ವರ್ಷಗಳ ನಂತರ ಕಾಂಗ್ರೆಸ್ ತೆಕ್ಕೆಗೆ ಸೇರಿದ ಶಿರಾಳಕೊಪ್ಪ ಪುರಸಭೆ

The Siasat News - Images

*ಅಧ್ಯಕ್ಷರಾಗಿ ಮಮತಾ ಉಪಾಧ್ಯಕ್ಷರಾಗಿ ಮುದಸ್ಸಿರ್*

ಶಿರಾಳಕೊಪ್ಪ:

ಕಳೆದ 25ವರ್ಷಗಳ ಅವಧಿಯಲ್ಲಿ  ಮಧ್ಯ ಹತ್ತು ಹನ್ನೆರಡು  ತಿಂಗಳು ಮಾತ್ರ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಪಕ್ಷ ಮತ್ತೆ ಪುರಸಭೆ ಗದ್ದಿಗೆಗೆ ಏರಿದ್ದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿದೆ.

ಪಟ್ಟಣದ ಪುರಸಭೆಗೆ ಗುರುವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮಮತಾ ನಿಂಗಪ್ಪ, ಹಾಗೂ ಉಪಾಧ್ಯಕ್ಷರಾಗಿ ಮುದಸ್ಸಿರ್ ಅಹ್ಮದ್ ಅವಿರೋಧ ವಾಗಿ ಆಯ್ಕೆ ಆಗಿದ್ದಾರೆ.

ಚುನಾವನಾ ಪ್ರಕ್ರಿಯೆಯೂ ಉಪವಿಭಾಗಾಧಿಕಾರಿ ಯತೀಶ್ ಐ ಎ ಎಸ್ ನಡೆಸಿಕೊಟ್ಟಿದ್ದು ಅವರ ಜೊತೆ ಸ್ಥಳೀಯ ತಾಲ್ಲೂಕು ದಂಡಾಧಿಕಾರಿ ಮಲ್ಲೇಶ್ ಬಿ ಪೂಜಾರ್ ಕೊಡ ಹಾಜರಿದ್ದು ಎಲ್ಲಾ ಚುನಾವಣಾ ಪ್ರಕ್ರಿಯೆ ಗಳನ್ನು ಪೊರೈಸಿದರು.

ಒಟ್ಟು 16 ಜನ ಪುರಸಭೆ ಸದಸ್ಯರ ಪೈಕಿ 11 ಜನ ಸದಸ್ಯರ ಬೆಂಬಲದೊಂದಿಗೆ ಹೊಸ ಆಡಳಿತ ಮಂಡಳಿ ರಚನೆಯಾಯಿತು.

ಚುನಾವಣಾ ಪ್ರಕ್ರಿಯೆಯಲ್ಲಿ ಹಿಂದಿನ ಅಧ್ಯಕ್ಷೆ ಪಕ್ಷೇತರ ಅಭ್ಯರ್ಥಿ ಮಂಜುಳಮ್ಮ ಮತ್ತು ಸದಸ್ಯ ಟಿ ರಾಜು ರವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಈ ಸಂಧರ್ಭದಲ್ಲಿಮಾತನಾಡಿದ ಕಾಂಗ್ರೆಸ್ ಮುಖಂಡ ನಾಗರಾಜ ಗೌಡ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ ಇಂತಹ ಸಂದರ್ಭದಲ್ಲಿ ಉತ್ತಮ ಆಡಳಿತ ವನ್ನು ಪಟ್ಟಣದ ನಾಗರಿಕರಿಗೆ ನೀಡಿ ಯಶಸ್ವಿ ಯಾಗುವುದರ ಮೂಲಕ ರಾಜಕೀಯವಾಗಿ ನಾವು ಮತ್ತು ನಮ್ಮ ಪಕ್ಷವನ್ನು ಬೆಳೆಸುವ ಕೆಲಸ ಮಾಡೋಣ. ಅಧಿಕಾರ ಪಡೆಯುವುದಕ್ಕೆ ಸಹಕರಿಸಿದಂತಹ ಎಲ್ಲಾ ಪುರ ಸದಸ್ಯರಿಗೆ, ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.

ತಾಲ್ಲೂಕು ಕೆ ಡಿ ಪಿ ಸದಸ್ಯ ಯುವ ನಾಯಕ ರಾಘವೇಂದ್ರ ನಾಯಕ ಮಾತನಾಡಿ ಪ್ರತಿ ಚನಾವಣೆ ಗಳಲ್ಲೂ ಶಿರಾಳಕೊಪ್ಪ ಭಾಗದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಚ್ಚು ಮತಗಳು ಬರುತ್ತವೆ ಆದರೂ ಕೊಡ ಇಲ್ಲಿ ನಾವು ಆಡಳಿತ ಹಿಡಿಯುವುದರಲ್ಲಿ ವಿಫಲತೆ ಕಾಣುತ್ತಿದ್ದೆವು ಇಂತಹ ಪಟ್ಟಣದಲ್ಲಿ ಬಹಳ ದಿನಗಳ ನಂತರ ಕಾಂಗ್ರೆಸ್ ಪಕ್ಷ ಪುರಸಭೆ ಆಡಳಿತ ಹಿಡಿದಿರುವುದು ಸಂತಸದ ವಿಚಾರ. ಇದರಿಂದಾಗಿ ಮಾನ್ಯ ಮಧು ಬಂಗಾರಪ್ಪ ರವರಿಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದರು.

ಮುಖ್ಯ ಅಧಿಕಾರಿ ಹೇಮಂತ್ ಡೊಳ್ಳೆ, ಕಾಂಗ್ರೆಸ್ ಪಕ್ಷದ ಕೆ ಪಿ ಸಿ ಸಿ ಸದಸ್ಯ ಚಂದ್ರಪ್ಪ ಹಿರೇಜಂಬೂರು, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಮಧು, ಚುನಾವಣಾ ಉಸ್ತುವಾರಿ ಪರ್ವೀಜ್ ಅಲ್ತಾಫ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ, ಟೌನ್ ಕಾಂಗ್ರೆಸ್ ಟೌನ್ ಅಧ್ಯಕ್ಷ ಸಯ್ಯದ್ ಬಿಲಾಲ್, ಮುಖಂಡರಾದ ಪ್ರವೀಜ್ ಮಿರ್ಚಿ, ಗಂಗಾಧರ ಶೆಟ್ರು, ನಯಾಜ್ ಖುರೇಶಿ, ಭೀಮರಾವ್ ಮತ್ತಿತರರು ಇದ್ದರು

Share the news!

2 thoughts on “25 ವರ್ಷಗಳ ನಂತರ ಕಾಂಗ್ರೆಸ್ ತೆಕ್ಕೆಗೆ ಸೇರಿದ ಶಿರಾಳಕೊಪ್ಪ ಪುರಸಭೆ

Leave a Reply

Your email address will not be published. Required fields are marked *