ಹೋರಿ ತಿವಿತ ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾದ ಮಾಜಿ MLA ಮಹಾಲಿಂಗಪ್ಪ. ಪ್ರಾಣಾಪಾಯದಿಂದ ಪಾರು…

The Siasat News - Images

ಶಿರಾಳಕೊಪ್ಪ:26/10/2025

ಹತ್ತಿರದ ಬಳ್ಳಿಗಾವಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಹಬ್ಬದಲ್ಲಿ ಮಾಜಿ ಶಾಸಕ ಬಿ.ಎನ್. ಮಹಾಲಿಂಗಪ್ಪ

ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಜನಸಂದಣಿ ಮಧ್ಯೆ ಹಬ್ಬದ ಉತ್ಸಾಹ ತಾರಕಕ್ಕೇರಿದಾಗ ಅನಿರೀಕ್ಷಿತವಾಗಿ ಓಡಿಬಂದ ಹೋರಿಯೊಂದು ಹಿಂದಿನಿಂದ ಬಂದು ಮಹಾಲಿಂಗಪ್ಪ ಅವರನ್ನು ತಿವಿದಿದೆ. ತಿವಿತದ ಹೊಡೆತಕೆ ಹಿಂದಕ್ಕೆ ನೆಲಕ್ಕುರುಳಿದ ಮಾಜಿ ಶಾಸಕರು ಕೆಲವು ಕ್ಷಣಗಳು ಚಲನೆಯಿಲ್ಲದೆ ಮಲಗಿದ್ದರು. ಆದರೆ ಅದೃಷ್ಟವಶಾತ್ ಹೋರಿ ಮತ್ತೆ ಹಿಂಬಾಲಿಸದೆ ಹಿಂದಕ್ಕೆ ತೆರಳಿದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ರಾಷ್ಟ್ರೀಯ ವಾಹಿನಿಗಳಲ್ಲಿ ಸುದ್ದಿಯಾಗಿದೆ. ಹೋರಿ ತಿವಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕರು ಇದೆಲ್ಲ ಮಾಮೂಲು ಎಂದು ಹೇಳಿ ನಕ್ಕು ಬಿಟ್ಟರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *