. ಶಿರಾಳಕೊಪ್ಪ:01/01/2026.
ಶಿರಾಳಕೊಪ್ಪ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜಾಫರ್ ಸಾದಿಕ್ (ಸದ್ದು ಬೆಳ್ಳಿಗಾವಿ) ಇವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಮಂಜುನಾಥ ಎಚ್ ಎಸ್ ಆದೇಶ ಹೊರಡಿಸಿದ್ದಾರೆ ಎಂದು ಟೌನ್ ಕಾಂಗ್ರೆಸ್ ಅಧ್ಯಕ್ಷ ನಯಾಜ್ ಅಹ್ಮದ್ ಖುರೇಶಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು ಆಗಸ್ಟ್ 2024ರಲ್ಲಿ ಸತತ 32 ದಿನಗಳ ಅವಧಿಯಲ್ಲಿ ನಿರಂತರವಾಗಿ ಆನ್ ಲೈನ್ ಮೂಲಕ ನಡೆದ ಶಿರಾಳಕೊಪ್ಪ ಬ್ಲಾಕ್ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಬೆಳ್ಳಿ ಗಾವಿ ಸದ್ದು ಅವರು 180 ಮತಗಳಿಂದ ಹಿಂದಿದ್ದು ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅಧ್ಯಕ್ಷರಾಗಿ ಅತೀಕ್ ಅಹ್ಮದ್ ಆಯ್ಕೆ ಆಗಿದ್ದು ಅಧ್ಯಕ್ಷ ಆಗಿದ ನಂತರದಲ್ಲಿ ಕಳೆದ ಒಂದು ವರ್ಷದಲ್ಲಿ ಯಾವುದೇ ರೀತಿಯ ಪಕ್ಷ ಸಂಘಟನೆ ಮಾಡದೆ ಮತ್ತು ಪಕ್ಷದ ಸಭೆ ಗಳಿಗೆ ಹಾಜರಾಗದೆ ಇರುವ ಕಾರಣಕ್ಕೆ ಪಕ್ಷದ ವರಿಷ್ಠರು ಅತೀಕ್ ಅಹ್ಮದ್ ಅವರನ್ನು ಅಧ್ಯಕ್ಷಗಿರಿ ಯಿಂದ ತೆಗೆದು ಜಾಫರ್ ಸಾದಿಕ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಜಾಫರ್ ಸಾದಿಕ್(ಸದ್ದು ಬೆಳ್ಳಿ ಗಾವಿ) ಕಳೆದ 10 ವರ್ಷಗಳಿಂದ ಪಕ್ಷದ ಸಕ್ರಿಯ ಮತ್ತು ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಿ ಹಿರಿಯರು ಮತ್ತು ಕಿರಿಯರಿಂದ ಸೈ ಎನಿಸಿಕೊಂಡಿದ್ದಾರೆ ತಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂದು ಭರವಸೆ ಇದೆ ಎಂದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕರಿಬಸಪ್ಪ ಬೆಳ್ಳಿಗಾವಿ ಮಾತನಾಡಿ ಕಾಂಗ್ರೆಸ್ ನಲ್ಲಿ ನಿಷ್ಠಾ ವಂತರಿಗೆ ಯಾವತ್ತೂ ಬೆಲೆ ಇದ್ದೇ ಇದೆ. ಸದಾ ಚಟುವಟಿಕೆಯಿಂದ, ಲವಲವಿಕೆ ಯಿಂದ ಪಕ್ಷದ ಕಟ್ಟಾಳು ಆಗಿ ಕಾರ್ಯ ನಿರ್ವಹಿಸುವ ಯುವಕ ಜಾಫರ್ ಸಾದಿಕ್ ಇವರನ್ನು ಗುರುತಿಸಿ ಯುವಕರಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ನೀಡಿದ್ದು ಸಂತೋಷದ ವಿಚಾರ ನನ್ನ ಆಶೀರ್ವಾದ ಮತ್ತು ಸಹಕಾರ ಸದಾ ಅವರೊಂದಿಗೆ ಇರುತ್ತದೆ ಎಂದು ಹರಸಿದರು..

ಸದ್ದು ಬೆಳ್ಳಿಗಾವಿ
ನೂತನ ಅಧ್ಯಕ್ಷ ಸದ್ದು ಬೆಳ್ಳಿಗಾವಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ತಳ ಹಂತದಿಂದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇವೆ ಮಾಡಿಕೊಂಡು ಬಂದ ನನಗೆ ನಮ್ಮ ಹಿರಿಯರು ಒಂದು ದೊಡ್ಡ ಜವಾಬ್ದಾರಿ ನೀಡಿ ಬಡ್ತಿ ನೀಡಿದ್ದಾರೆ. ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಮುಂದೆಯೂ ಕೊಡ ಇದೇ ತರ ನಿಷ್ಠೆ ಮತ್ತು ಪ್ರಾಮಾಣಿಕತೆ ಯಿಂದ ಪಕ್ಷದ ಕೆಲಸ ಮಾಡುತ್ತೇನೆಂದರು.
ಪುರಸಭೆಯ ನಾಮ ನಿರ್ದೇಶಿತ ಸದಸ್ಯ ಗಣೇಶ್ ಭಂಡಾರಿ, ಕಾರ್ಮಿಕ ಘಟಕದ ಅಧ್ಯಕ್ಷ ರವೀಂದ್ರ ಹಿರೇಜಂಬೂರು ಮಾತನಾಡಿದರು.
ಈ ಸಂಧರ್ಭದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಜೀದ್, ಯುವ ಕಾಂಗ್ರೆಸ್ ಕಾರ್ಯಕರ್ತರಾದ ಸೂಫಿಯಾನ್, ವಸೀಮ್, ತಾಹ, ಇಸ್ರಾರ್, ಇದ್ದರು.

