ಶಿರಾಳಕೊಪ್ಪದ ಶ್ರೀ ಬಸವೇಶ್ವರ ದೇವಸ್ಥಾನ ವತಿಯಿಂದ 62ನೇ ವರ್ಷದ ಮಹಾಗಣಪತಿ ಪ್ರತಿಷ್ಠಾಪನೆ…..

The Siasat News - Images

ಶಿರಾಳಕೊಪ್ಪ:29-8-2025

The Siasat News - Images

ಪಟ್ಟಣದ ಪ್ರಸಿದ್ಧ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ 62ನೇ ವರ್ಷದ ಶ್ರೀ ಗೌರಿ ಹಾಗೂ ಶ್ರೀ ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀ ಮಹಾ ಗಣಪತಿ ಉತ್ಸವ ಸಮಿತಿ ಶಿರಾಳಕೊಪ್ಪ ದ ಅಧ್ಯಕ್ಷರಾದ ಎಂ. ಜೆ ವಿಜಯ ಕುಮಾರ ರವರ ಸಾರತ್ಯ ದಲ್ಲಿ ನಿತ್ಯವೂ ವಿಭಿನ್ನ ಕಾರ್ಯಕ್ರಮ ಗಳು ಜರುಗಲಿದ್ದು ದಿನಾಂಕ 3-9-2025 ರಂದು ಬುಧವಾರ

ಕಡೇನಂದಿಹಳ್ಳಿಯ ದುಗ್ಲಿ ಮಠದ ಶ್ರೀ ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಬೆಳಗ್ಗೆ 7:30 ಕ್ಕೆ ಸರಿಯಾಗಿ ಇಷ್ಟಲಿಂಗ ಮಹಾಪೂಜೆ ಮತ್ತು ಗುರುಗಳಿಂದ ಆಶೀರ್ವಚನ ನೆರವೇರಲಿದ.

ಶ್ರೀ ವೀರಶೈವ ಯುವ ವೇದಿಕೆ, ಶ್ರೀ ಅಕ್ಕಮಹಾದೇವಿ ಪ್ರತಿಷ್ಠಾನ, ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಶಿರಾಳಕೊಪ್ಪ ಇವರ ಸಹಕಾರದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ತನು-ಮನ – ಧನ ಸೇವೆಯನ್ನು ಸಲ್ಲಿಸಿ ಶ್ರೀ ವಿಘ್ನೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ವತಿಯಿಂದ ಕೂರಲಾಗಿದೆ.

ವರದಿ: ನವೀದ್ ಶಿರಾಳಕೊಪ್ಪ 9538633929

Share the news!

Leave a Reply

Your email address will not be published. Required fields are marked *