ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಉತ್ತಮ ವೇದಿಕೆ- ಶ್ರೀಮತಿ ಮಮತಾ ಸಾಲಿ…

The Siasat News - Images

ಶಿರಾಳಕೊಪ್ಪ:17/12/2025.

ಪಟ್ಟಣದ ಮೌಲಾನ ಆಜಾದ್ ಮಾದರಿ ಶಾಲೆಯ ಮಕ್ಕಳ ವತಿ ಯಿಂದ ನಡೆದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಶಿಕ್ಷಕಿ ಶ್ರೀ ಮತಿ ಮಮತಾ ಸಾಲಿ ಮಕ್ಕಳ ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ.

ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ. ವಿಜ್ಞಾನ ಎಂದರೆ ಒಂದು ಸಂಜೀವಿನಿಯಂತೆ ಬದುಕಿನಲ್ಲಿ ನಮಗೆ ಜ್ಞಾನ ಹಾಗೂ ಸರಿಯಾದ ಪ್ರಜ್ಞೆ ಬರಬೇಕೆಂದರೆ ವಿಜ್ಞಾನದ ಅವಶ್ಯಕತೆ ಅವಶ್ಯ. ಖಾಸಗಿ ಶಾಲೆಗಳ ಮಕ್ಕಳನ್ನು ಮೀರಿಸುವಂತೆ ಮೌಲಾನ ಆಜಾದ್ ಶಾಲೆ ಶಿರಾಳಕೊಪ್ಪ ದ ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ತಾವು ಮಾಡಿದ ಬಗೆ ಬಗೆಯ ವಿಜ್ಞಾನ ಮಾದರಿ ಗಳನ್ನು ಪ್ರದರ್ಶನ ಮಾಡಿದ್ದು ಮಕ್ಕಳ ಮೇಲೆ ಶಾಲೆಯ ಶಿಕ್ಷಕರ ಶ್ರಮ ಹೇಗಿದೆ ಎಂಬುದು ಗೊತ್ತಾಗುತ್ತಿದೆ ಎಂದು ಶ್ಲಾಘಿಸಿದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳು ಶಿಕ್ಷಕರ ಮತ್ತು ಪೋಷಕರ ಗಮನ ಸೆಳೆದವು.

The Siasat News - Images

ಕಾರ್ಯಕ್ರಮದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಅಧಿಕ ಅಂಕಗಳನ್ನು ಗಳಿಸಿದಂತಹ 6ರಿಂದ 10ನೇ ತರಗತಿ ವಿದ್ಯಾರ್ಥಿ ಗಳು ಹಾಗೂ ಶಾಲೆಯಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ಮಕ್ಕಳಿಗೆ ಪುರಸ್ಕಾರಗಳು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲೆಯ ಮುಖ್ಯ ಶಿಕ್ಷಕ ರಿಯಾಜ್ ಅಹ್ಮದ್ ವಹಿಸಿದರು..

ಈ ಸಂಧರ್ಭದಲ್ಲಿ ಅಥಿತಿ ಗಳಾದ ಮುರಾರ್ಜಿ ಶಾಲೆಯ ಪ್ರಾಂಶುಪಾಲರಾದ ಕರಿಬಸಪ್ಪ., ವಿಜಯ ಕುಮಾರ್, ಊರಿನ ಪ್ರಮುಖರಾದ ಮೊಹಮ್ಮದ್ ಅಯೂಬ್, ಝುಲ್ಫಿಕ್ಕಾರ್ ಅಲಿ, ಜಿಯಾವುಲ್ಲಾ, ಹಾಗೂ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *