ಶಿರಾಳಕೊಪ್ಪ:15/10/2025
ಶಿರಾಳಕೊಪ್ಪ ಉಪ ವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಜನ ಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ರಾಜಕೀಯ ಮುಖಂಡರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ರೈತರು, ಪಟ್ಟಣದ ಸಾರ್ವಜನಿಕರು ಪಾಲ್ಗೊಂಡಿದ್ದು ಅಧಿಕಾರಿಗಳಿಗೆ ನೀಡಿದ ವಿವಿಧ ಕಾರ್ಯ ಗಳ ಅರ್ಜಿ ಗಳ ಬಗ್ಗೆ ಪ್ರಶ್ನೆ ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ಮನವರಿಕೆ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಹೋರಾಟಗಾರ ಗಂಗಾಧರ ಶೆಟ್ಟರ್ ಕೆಲ ಗುತ್ತಿಗೆದಾರರು ತಮಗೆ ಅನುಕೊಲ ಆಗುವ ರೀತಿಯಲ್ಲಿ ಮಾತ್ರ ಕೆಲಸ ಮಾಡುತ್ತಿದ್ದು ಜನಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಇಂತಹವರ ವಿರುದ್ದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದರು.
ಕಾಂಗ್ರೆಸ್ ಮುಖಂಡ ನಾಗಿಹಳ್ಳಿ ಲೋಕಪ್ಪ ಮಾತನಾಡಿ ಸರ್ಕಾರ ದಿಂದ ಸ್ಥಳೀಯ ವಿದ್ಯುಚ್ಛಕ್ತಿ ಇಲಾಖೆಗೆ ಅಂತಾನೇ 5ಕೋಟಿ ಹಣ ಮಂಜೂರು ಆಗಿದೆ ಆದರೆ ಖರ್ಚು ಆಗಿದ್ದು ಮಾತ್ರ 1ಕೋಟಿ ಮಾತ್ರ ಹಣ ವಾಪಸ್ಸು ಹೋಗುವುದಕ್ಕಿಂತ ಮುಂಚೆ ಬಳಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರಮೇಶ್ ಆಚಾರ್ ಈಗಾಗಲೇ ಮತ್ತೆ 3ಕೋಟಿಯ ಎಸ್ಟಿಮೇಷನ್ ಕೊಡಲಾಗಿದೆ ಹಂತ ಹಂತವಾಗಿ ಎಲ್ಲಾ ಮೊತ್ತವನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯಗಳು ಮಾಡುವುದಾಗಿ ಭರವಸೆ ನೀಡಿದರು.
ಕೆಲ ರೈತರು ವಿದ್ಯುಚ್ಛಕ್ತಿ ವಿಚಾರವಾಗಿ ತಮಗೆ ವೈಯುಕ್ತಿಕ ವಾಗಿ ಆಗುತ್ತಿರುವ ಸಮಸ್ಯೆ ಗಳ ಬಗ್ಗೆ ಅಧಿಕಾರಿಗಳಿಗೆ ದೊರನ್ನು ನೀಡಿದರು.
ಶಿಕಾರಿಪುರ ವಿಭಾಗೀಯ ಕಾರ್ಯ ನಿರ್ವಾಹಕ ಅಭಿಯಂತರ ಶ್ರೀಧರ್, ಶಿವಮೊಗ್ಗ ವೃತ್ತ ಕಚೇರಿ ಕಾರ್ಯ ನಿರ್ವಾಹಕ ಅಭಿಯಂತರ ಕೃಷ್ಣ ಮೂರ್ತಿ ಎಸ್. ಓ ಗಳಾದ ರಾಜಪ್ಪ ಎಂ ಜಿ, ಮಂಜಪ್ಪ, ಆನಂದ್, ಬಾಲರಾಜು ಸೇರಿದಂತೆ ತಡಗಣಿ ಮಂಜಪ್ಪ, ರೈತ ಸಂಘದ ಪ್ಯಾಟಿ ಈರಣ್ಣ, ರಾಜಣ್ಣ ಮುಗಳಿಕೊಪ್ಪ, ಪುಟ್ಟನಗೌಡ್ರು, ಮುಖಂಡರಾದ ಲಲಿತಮ್ಮ ಚನ್ನಪ್ಪ, ರೂಪ ಹಾಲೇಶ್,ಜಬಿ ಚಿಕ್ಕ ಜಂಬೂರು, ಗೋಪಾಲ್ ಭಂಡಾರಿ ಹಾಗೂ ಅಪಾರ ಸಂಖ್ಯೆ ಯಲ್ಲಿ ರೈತರು ಪಾಲ್ಗೊಂಡಿದ್ದರು
ವರದಿ: ನವೀದ್ ಶಿರಾಳಕೊಪ್ಪ

