ಮುಹಮ್ಮದ್ ಪೈಗಂಬರ್ ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ…

The Siasat News - Images
The Siasat News - Images

ಚಿತ್ರದುರ್ಗ : 19/10/2024

ವಿಶ್ವಕ್ಕೆ ಶಾಂತಿಯ ಸಂದೇಶಸಾರಿದ ಪ್ರವಾದಿ ಮುಹಮ್ಮದ್ ಪೈಗಂರ‍್ ರವರ ಬಗ್ಗೆ ಅವಹೇಳನವಾಗಿ ಮಾತನಾಡಿರುವಉತ್ತರಪ್ರದೇಶದ ಯತಿ ನರಸಿಂಗಾನಂದ ಸರಸ್ವತಿಸ್ವಾಮಿ ಯನ್ನು ಬಂಧಿಸಿ ಕಠಿಣ ಶಿಕ್ಷೆವಿಧಿಸುವಂತೆ ತೋಳಿಗೆ ಕಪ್ಪು ಪಟ್ಟಿ ಧರಿಸಿಮುಸ್ಲಿಮ್ ಸಮುದಾಯದದವರು ನಗರದಲ್ಲಿ ಶುಕ್ರವಾರ ಬೃಹತ್ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಮೂಲಕ ರಾಷ್ಟ್ರ ಪತಿ, ದೇಶದ ಪ್ರಧಾನಿ, ಗೃಹಸಚಿವ, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಾಗೂರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಶುಕ್ರವಾರ ಪ್ರಾರ್ಥನೆ ಮುಗಿಸಿಕೊಂಡುನಗರದ ಗಾಂಧಿ ವೃತ್ತ ದಿಂದ ಮೆರವಣಿಗೆ ಮೂಲಕ ಒನಕೆಓಬವ್ವ ವೃತ್ತಕ್ಕೆ ಆಗಮಿಸಿದ ಸಾವಿರಾರು ಮುಸ್ಲಿಮರು ಯತಿ ಸರಸಿಂಗಾನಂದ ಸರಸ್ವತಿ ಸ್ವಾಮಿ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

ಮುಸ್ಲಿಂ ಧರ್ಮಗುರು ಸೈಯದ್ ಅರಫಾಯಿಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸರ್ವಜನಾಂಗದ ಶಾಂತಿಯ ತೋಟ ಭಾರತದಲ್ಲಿಹಿಂದೂ-ಮುಸಲ್ಮಾನರು ಸೌಹಾರ್ಧತೆಯಿಂದಬದುಕುತ್ತಿದ್ದು, ಶಾಂತಿಯನ್ನು ಕದಡುವುದಕ್ಕಾಗಿಪ್ರವಾದಿ ಮುಹಮ್ಮದ್ ಪೈಗಂರ‍್ ರವರನ್ನು ಕೀಳಾಗಿಮಾತನಾಡಿರುವ ಯತಿ ನರಸಿಂಗಾನಂದ ಸರಸ್ವತಿಸ್ವಾಮಿ ಯನ್ನು ಕೂಡಲೆ ಬಂಧಿಸಿ ಕಾನೂನುರೀತಿಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆಮುಂದಿನ ದಿನಗಳಲ್ಲಿ ದೇಶಾದ್ಯಂತ ಹೋರಾಟನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

ಮತ್ತೊಬ್ಬ ಧರ್ಮಗುರು ಮೌಲಾನ ಗುಲಾಂ ಜಿಲಾನಿ

ಮಾತನಾಡುತ್ತ ಸೂಫಿ ಸಂತರ ದೇಶಭಾರತದಲ್ಲಿ ಎಲ್ಲಾ ಧರ್ಮ, ಜಾತಿಯವರುಅನ್ಯೋನ್ಯತೆಯಿಂದ ಬಾಳುತ್ತಿರುವುದನ್ನು ಸಹಿಸದಯತಿ ನರಸಿಂಗಾನಂದ ಸರಸ್ವತಿ ಸ್ವಾಮಿ ಅಖಂಡತೆಯನ್ನು ಹಾಳು ಮಾಡಲು ಹೊರಟಿದ್ದಾರೆ.ಕೋಮು ಸೌಹಾರ್ಧತೆಯನ್ನು ಕದಡಲು ನಾವುಗಳು ಬಿಡುವುದಿಲ್ಲ. ಪ್ರವಾದಿ ಮುಹಮ್ಮದ್ ಪೈಗಂರ‍್ ರವರನ್ನು ಹಗುರವಾಗಿ ಮಾತನಾಡಿರುವ ಸ್ವಾಮಿಯನ್ನು ಬಂಧಿಸಿಉಗ್ರ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹ ಹೇಳಿಕೆಗಳು ನಿಲ್ಲತ್ತವೆ ಎಂದರು.

ಮುಸ್ಲಿಂ ಧರ್ಮಗುರು ಶಾಹಿದ್ರಜಾಫಕ್ರೆ ಆಲಂಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಪ್ರವಾದಿರವರ ಬಗ್ಗೆ ಯತಿ ನರಸಿಂಗಾನಂದ ಸರಸ್ವತಿಸ್ವಾಮಿ ಹೀನಾಯವಾಗಿ ಮಾತನಾಡಿರುವುದುಸಮಸ್ತ ಮಸ್ಲಿಂ ಬಾಂಧವರ ಮನಸ್ಸಿಗೆ ನೋವಾಗಿದೆ. ಹಾಗಾಗಿ ಭಾರತ ಸರ್ಕಾರ ನರಸಿಂಗಾನಂದ ಸರಸ್ವತಿ ಸ್ವಾಮಿಯನ್ನು ಬಂಧಿಸಿ ಕಾನೂನುರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಾಮಿಯಾ ಮಸೀದಿ ಅಧ್ಯಕ್ಷ ಸಾಧಿಕ್ಭಾಷ,ಕಾರ್ಯದರ್ಶಿ ಮುಹಿಬುಲ್ಲಾ, ಸುಲ್ತಾನಿಜಾಮಿಯಾ ಮಸ್ಜಿದ್ ಮರ್ಕಜ್ ಎ ಅಹ್ಲೆ ಅಧ್ಯಕ್ಷನ್ಯಾಯವಾದಿ ಮಹಮದ್ ಸಾಧಿಕ್ವುಲ್ಲಾ, ಜಿಲ್ಲಾವಕ್ಫ್ ಮಂಡಳಿ ಚೇರ್ಮನ್ ಎಂ.ಸಿ.ಓ.ಬಾಬು,ಮುಸ್ಲಿಮ್ ವಕೀಲರ ಸಂಘದ ಅಧ್ಯಕ್ಷ ಮಹಮದ್ಸಮೀವುಲ್ಲಾ, ನ್ಯಾಯವಾದಿ ಜುಲ್ಫಿಕರ್, ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್, ಅಲ್ಪಸಂಖ್ಯಾತವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್,ಸೈಯದ್ ಮೊಹಿದ್ದಿನ್, ಕರ್ನಾಟಕ ರಾಜ್ಯ ಟಿಪುö್ಪಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪು ಖಾಸಿಂ ಆಲಿ, ಸೈಯದ್ ಇಸ್ಮಾಯಿಲ್,ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಹಮದ್ ಅಹಮದ್ಪಾಷ ನೇಮತ್ವುಲ್ಲಾ, ಸೈಯದ್ಅಫಾಖ್ ಅಹಮದ್, ನಗರಸಭೆ ಕೆಲವು ಸದಸ್ಯರು,ವಿವಿಧ ಮಸೀದಿಯ ಮುತುವಲ್ಲಿಗಳು, ಧರ್ಮಗುರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಯತಿ ನರಸಿಂಗಾನಂದ ಸರಸ್ವತಿ ಸ್ವಾಮಿ ಯ ವಿರುದ್ದ ಎಫ್.ಐ.ಆರ್.ದಾಖಲಿಸುವಂತೆ ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಗೆ ಪ್ರತಿಭಟನಾಕಾರರು ದೂರು ನೀಡಿದರು.

Share the news!

Leave a Reply

Your email address will not be published. Required fields are marked *