ಶಿಕಾರಿಪುರ:14-09-2025
ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಸುಸಂಸ್ಕೃತರನ್ನಾಗಿಸುವುದು ನಮ್ಮೇಲ್ಲರ ಕರ್ತವ್ಯ ನಾವು ಶಿಕ್ಷಣ ಪಡೆದು ಸಂಘಟಿತರಾಗೋಣ ಎಂದು ಮಡಿವಾಳ ಮಾಚಿದೇವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್. ನಾಗಪ್ಪ ಹೇಳಿದರು.
ಪಟ್ಟಣದ ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀ ಮಡಿವಾಳ ಮಾಚಿದೇವ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ

ಅವರು ನಮ್ಮ ಸಮುದಾಯದವರು ಹೆಚ್ಚಿನ ಠೇವಣಿಯನ್ನು ಸಂಘದಲ್ಲಿ ಇಡುವುದರ ಮೂಲಕ ಸಹಕಾರ ಸಂಘವನ್ನು ಮುನ್ನಡಿಸಲು ಸದಾ ನಮ್ಮೊಂದಿಗೆ ಕೈ ಜೊಡಿಸಬೇಕು. ಸಮಾಜ ಕಟ್ಟುವ ಕೆಲಸದಲ್ಲಿ ಸಣ್ಣಪುಟ್ಟ ಬಿನ್ನಾಭಿಪ್ರಾಯಗಳು ಸಹಜ ಅವುಗಳನ್ನು ಬದಿಗೊತ್ತಿ ಸಮುದಾಯದ ಹಿತಾಸಕ್ತಿ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ತಾಲ್ಲೂಕು ಮಡಿವಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಶಾಂತವೀರಪ್ಪ ಮಾತನಾಡಿ ನಮ್ಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಬೆಳೆಯಲು ಶಿಕ್ಷಣದ ಅವಶ್ಯಕತೆ ಬಹು ಮುಖ್ಯ ಆದ್ದರಿಂದ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಶಿಕ್ಷಣವೇ ನಮಗೆ ಶಕ್ತಿ. ಸಹಕಾರ ಸಂಘದಲ್ಲಿ ನಾವು ಕೇವಲ ಷೇರು ಹೊಂದಿದ್ದರೆ ಸಾಲದು ಹೆಚ್ಚಿನ ವಹಿವಾಟು ನಡೆಸಬೇಕು ಆಗ ಮಾತ್ರ ಸಹಕಾರ ಸಂಘ ಉತ್ತಮ ರೀತಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ|| ವೀಣಾ ಇಂದೂಶೇಖರ ಮಾತನಾಡಿ ಮಕ್ಕಳು, ಶಿಕ್ಷಣ ಪಡೆದು ಪ್ರತಿಭಾವಂತರಾಗಬೇಕು ನಮ್ಮ ಮನೆಗೆ ಬೆಳಕಾದರೆ ಸಾಲದು ಸಮಾಜಕ್ಕೆ ಬೆಳಕಾಗಬೇಕು ಆಗ ನಾವು ಹುಟ್ಟಿದ್ದು ಸಾರ್ಥಕ, ಪ್ರತಿ ವರ್ಷ ನಮ್ಮ ನರ್ಸಿಂಗ್ ಹೋಂ ವತಿಯಿಂದ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ತೀರ್ಮಾನ ಕೈಗೊಂಡಿದ್ದೇವೆ. ಸಮಾಜದ ಅಭಿವೃದ್ಧಿ ಮತ್ತು ಸೇವೆಗೆ ಸದಾ ಸಿದ್ದರಿದ್ದೇವೆ ಎಂದರು.
೮೦% ಕ್ಕಿಂತ ಹೆಚ್ಚಿನ ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಡಾ|| ಇಂದೂಶೇಖರ ಸನ್ಮಾನಿಸಿದರು.
ಮಂಜುನಾಥ ಹರಗುವಳ್ಳಿ ನಿರೋಪಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮಡಿವಾಳ ಮಾಚಿದೇವ ಸಹಕಾರ ಸಂಘದ ನಿರ್ದೇಶಕರಾದ ರಾಜಶೇಖರ ಈಸೂರು, ವಿರೇಂದ್ರಕುಮಾರ, ಮಾಲತೇಶ ಹೋತನಕಟ್ಟಿ, ರಮೇಶ ಅಡಗಂಟಿ, ಯುವರಾಜ್ ತಡಗಣಿ, ಡಾಕಪ್ಪ ಕಣಸೋಗಿ, ಶಿಲ್ಪಾ ಇಸೂರು, ಸುನೀತ ಬಿಳಿಕಿ, ಪತ್ರಕರ್ತ ಸತೀಶ್ ರಮ್ಯ, ಶಿಲ್ಪಾ ಬನ್ನೂರು ಕಾಳಪ್ಪ ಕಾರ್ಯ ನಿರ್ವಾಣಾಧಿಕಾರಿ ಪ್ರಸನ್ನ ಪಿ.ಎಂ. ಇದ್ದರು.
ವರದಿ:ನವೀದ್ ಶಿರಾಳಕೊಪ್ಪ 9538633929

