ಶಿರಾಳಕೊಪ್ಪ:14/11/2025
ಪಟ್ಟಣದ ಅಸ್-ಸುಫಾ ಪಬ್ಲಿಕ್ ಶಾಲೆಯ ಮಕ್ಕಳು ಇಂದು ಮಕ್ಕಳ ದಿನಾಚರಣೆ ಅಂಗವಾಗಿ ಪ್ರಾಥಮಿಕ ಸಮುದಾಯ ಕೇಂದ್ರದ ರೋಗಿಗಳಿಗೆ ಹಣ್ಣು ಹಂಪಲು ನೀಡಿ “ಮಕ್ಕಳ ದಿನ” ಆಚರಣೆ ಮಾಡಿದರು.

ಶಾಲೆಯ ಮುಖ್ಯ ಶಿಕ್ಷಕ ಇಮ್ರಾನ್ ಮಾತನಾಡಿ ಈ ದಿನ ನಮ್ಮ ಶಾಲೆಯ ಮಕ್ಕಳು ತಮ್ಮ ಇಚ್ಛೆ ಮತ್ತು ಸ್ವಂತ ಖರ್ಚಿನಿಂದ ರೋಗಿ ಗಳಿಗೆ ಹಣ್ಣು ಹಂಪಲು ನೀಡಿದ್ದು ಖುಷಿ ತಂದಿದೆ. ಸಮಾಜದಲ್ಲಿನ ಆಗು ಹೋಗು

ಮತ್ತು ಬಡವರ, ನಿರ್ಗತಿಕರ ಮತ್ತು ರೋಗಿಗಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಕಾಳಜಿ ಮೋಡಿಸುವ ಉದ್ದೇಶ ದಿಂದ ಶಾಲೆಯ ಆಡಳಿ ಮಂಡಳಿಯೊಂದಿಗೆ ಚರ್ಚಿಸಿ ಈ ವಿಭಿನ್ನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.
ಮಕ್ಕಳು ಭಾರೀ ಉತ್ಸಾಹ ಮತ್ತು ಆಸಕ್ತಿಯಿಂದ ಆಸ್ಪತ್ರೆಯ ರೋಗಿಗಳೊಂದಿಗೆ “ಮಕ್ಕಳ ದಿನ” ಆಚರಣೆ ಮಾಡಿದರು ಎಂದರು.
ಶಾಲೆಯ ಆಡಳಿತ ಮಂಡಳಿ ವತಿಯಿಂದ ಪ್ರಾಥಮಿಕ ಸಮುದಾಯ ಕೇಂದ್ರದ ವೈದ್ಯರು ಮತ್ತು ಶುಶ್ರೂಷಕಿಯರಿಗೆ, ಸಿಬ್ಬಂದಿಗಳಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಾಥಮಿಕ ಸಮುದಾಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾಕ್ಟರ್ ಗಿರೀಶ್ ಇಸ್ಲೂರ್, ಮಕ್ಕಳ ತಜ್ಞ ಮಹಾಲಿಂಗಪ್ಪ ಕೊಳ್ಳೆ, ಅಸ್-ಸುಫಾ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಜಾವಿದ್ ಸಲೀಂ, ಏಜಾಜ್ ಅಹಮದ್, ಜಾವೀದ್ ಲೋಹಾರ್ ಹಾಗೂ ಅಪಾರ ಸಂಖ್ಯೆಯಲ್ಲಿ ಮಕ್ಕಳು ಇದ್ದರು.
ವರದಿ:ನವೀದ್ ಶಿರಾಳಕೊಪ್ಪ.

