ಶಿವಮೊಗ್ಗ:20-10-2024
ಇತ್ತೀಚೆಗೆ ನಗರದ
ಬಡಾವಣೆಗಳು ಮಳೆ ಬಂದಾಗಲೆಲ್ಲಾ ಜಲಾವೃತ
ಗೊಳ್ಳಲು ಮುಖ್ಯ ಕಾರಣ ಶಿವಮೊಗ್ಗ ಮಹಾ
ನಗರ ಪಾಲಿಕೆಯ ಅಧಿಕಾರಿಗಳ ಭ್ರಷ್ಟ ನೀತಿ ಹಾಗೂ ಅವರುಗಳು ತಮ್ಮ ಕೆಲಸದ ಪ್ರತಿ ತೋರುತ್ತಿರುವ ನಿರ್ಲಕ್ಷತನ ಕಾರಣ.
ಇಂತಹ ಅಧಿಕಾರಿಗಳ ವಿರುದ್ಧ ಕಾನೂನು
ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮೋಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಇಮ್ರಾನ್ ಆಕ್ರೋಶ ವ್ಯಕ್ತ ಪಡಿಸಿದರು.

ಮಹಾನಗರ ಪಾಲಿಕೆ ಆಯುಕ್ತರಿಗೆ ಹಳೆ ಶಿವಮೊಗ್ಗ
ನಗರದ ಬಡಾವಣೆಗಳು, ರಾಜ
ಕಾಲುವೆಗಳು, ಯುಜಿಡಿಗಳು,
ಚರಂಡಿಗಳನ್ನು ಸರಿಪಡಿಸುವಂತೆ
ಹಲವು ಬಾರಿ ದೂರು ನೀಡಿದರೂ
ಕ್ರಮಕೈಗೊಳ್ಳುವ ಬದಲು ನಿರ್ಲಕ್ಷತನ ತೋರಿಸಿದ್ದಾರೆ ಹಾಗಾಗೇ ಈ ಅವ್ಯವಸ್ಥೆ ಎದುರಾಗಿದೆ ಎಂದ ಅವರು ಪಾಲಿಕೆಯ ಅಧಿಕಾರಿಗಳು ಮತ್ತು ಕಾರ್ಯನಿರ್ವಾಹಕ ಅಭಿಯಂತರರು ನಿಗಾವಹಿಸಿ ಮಾಡಿರುವ 1ಅಡಿ ಉದ್ದ
ಇರುವ ಅವೈಜ್ಞಾನಿಕ ಯೂ ಜಿ ಡಿ ಸರಿಯಾಗಿ ವಾಟಾ
ಇಲ್ಲದೆ ನಿರ್ಮಾಣಗೊಂಡಿದೆ. ವೈಜ್ಞಾನಿಕವಾಗಿ, ಸರಿಯಾದ ರೀತಿಯಲ್ಲಿ ನೀರು ಹಾದು ಹೋಗುವ ಹಾಗೆ ಚರಂಡಿಗಳ ನಿರ್ಮಾಣವಾಗಿಲ್ಲ ಆದ್ದರಿಂದಾಗಿ ಚರಂಡಿಗಳು ಮಣ್ಣು ಮತ್ತು ಕಸ ದಿಂದ ಕೊಡಿ ಹೋಗಿವೆ. ಮಳೆ ಬಂದರೆ ಸಾಕು ನೀರೆಲ್ಲ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿ ಯಾಗುತ್ತಿದ್ದು

ಇದೆಕ್ಕೆಲ್ಲ ಕಾರಣ ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಅಧಿಕಾರಿಗಳು.
ಮಳೆಯಿಂದಾಗಿ ಮನೆಗಳು ಜಾಲಾವೃತಗೊಂಡರೂ ನೀರನ್ನು ಮನೆಗಳಿಂದ ಆಚೆ ಹಾಕಲು ಪಾಲಿಕೆ ವತಿಯಿಂದ ಟಾಸ್ಕ್ ಫೋರ್ಸ್ ತಂಡ ಅಥವಾ ನೀರನ್ನು ಹೊರ ತೆಗೆಯಲು ವ್ಯವಸ್ಥೆ ಮಾಡುವುದಿಲ್ಲ ಇದರಿಂದಾಗಿ ಬಡವರಿಗೆ ಸಮಸ್ಯಯಾಗುತ್ತಿದ್ದು ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.

ವರದಿ: ನವೀದ್ ಶಿರಾಳಕೊಪ್ಪ

