ದಸರಾ ಉತ್ಸವ-ಭಾವೈಕ್ಯೆತೆ ಯೊಂದಿಗೆ ಸಡಗರದ ನಾಡ ಹಬ್ಬ ಆಚರಣೆ

The Siasat News - Images
ಶಿರಾಳಕೊಪ್ಪ: 10/10/2024 ದಸರಾ ಉತ್ಸವ


ಪ್ರತಿವರ್ಷದಂತೆ ಈ ವರ್ಷವೂ ಕೊಡ ಅನೇಕ ಸಾಂಸ್ಕೃತಿಕ ತಂಡಗಳು ಪಟ್ಟಣಕ್ಕೆ ದಸರಾ ಹಬ್ಬದ ಪ್ರಯುಕ್ತ ಬರಲಿವೆ.
ಮಹಿಳಾ ವೀರ್ಗಾಸೆ, ಪೂಜಾ ಕುಣಿತ, ರೋಡ್ ಆರ್ಕೆಸ್ಟ್ರಾ, ಲಂಬಾಣಿ ನೃತ್ಯ, ನಂದಿ ಕೋಲು, ಗೊಂಬೆ ಕುಣಿತ, ಡೊಳ್ಳಿನ ಕುಣಿತ, ಜಾನ್ಜ್ ಬೆಳ್ಳಿ ರಥ ಸೇರಿದಂತ 14ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.ಈ ಬಾರಿ ದೇವಿಯ ಮೆರವಣಿಗೆ ವಿಶೇಷ ಬೆಳ್ಳಿ ರಥದಲ್ಲಿ ನಡೆಯಲಿದೆ ಎಂದರು.

ಮಾಜಿ ಅಧ್ಯಕ್ಷ ಲೋಕೇಶ್ ರಟ್ಟೀಹಳ್ಳಿ ಮಾತನಾಡಿ ಉತ್ಸವವು ಇಲ್ಲಿನ ಸಾಂಸ್ಕೃತಿಕ ಪರಂಪರೆಯ ಮೆರುಗಾಗಿದ್ದು ಅಕ್ಕ ಪಕ್ಕದ, ಬೇರೆ ಬೇರೆ ತಾಲ್ಲೂಕುಗಳ ಜನಗಳನ್ನು ಆಕರ್ಷಿಸುತ್ತದೆ . ಯುವಪೀಳಿಗೆ ಈ ತರಹದ ಹಬ್ಬ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಅರೆಯ ಬೇಕೆಂದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ವಿಜಯ ದಶಮಿ ಪ್ರಯುಕ್ತ ನಡೆದ ಪೂರ್ವ ಭಾವಿ ಸಭೆ ಹಾಗೂ ಪತ್ರಿಕಾಘೋಷ್ಟಿ ಯಲ್ಲಿ ಮಾತನಾಡಿದ ಪಟ್ಟಣದ ನಾಡ ಹಬ್ಬ ದಸರಾ ಸಮಿತಿಯ ಪ್ರಸಕ್ತ ಸಾಲಿನ ಅಧ್ಯಕ್ಷ ರಾಘವೇಂದ್ರ ಗ ಗಂಗೊಳ್ಳಿ ಸುಮಾರು 30 ವರ್ಷಗಳಿಂದ ಊರಿನ ಎಲ್ಲಾ ಸಮುದಾಯಗಳ ಸಹಕಾರ ದಿಂದ ಎಲ್ಲಾ ಸಮಾಜಗಳನ್ನೊಳಗೊಂಡು ದಸರಾ ಸಮಿತಿ ರಚನೆ ಯಾಗುತ್ತಿದ್ದು ಪಟ್ಟಣದಲ್ಲಿ ನಾಡ ಹಬ್ಬ ವಿಜಯ ದಶಮಿಯನ್ನು ಭಾರೀ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬಂದಿರುವ ಸಂಪ್ರದಾಯ ಇದೆ.

ಹಿರಿಯ ಮುಖಂಡ ಐ ಎಂ ಶಿವಾನಂದ ಸ್ವಾಮಿ ಮಾತನಾಡಿ ದಿನಾಂಕ 12/10/ 2024 ನೇ ಶನಿವಾರ ಮಧ್ಯಾಹ್ನ ಸರಿಯಾಗಿ 12 ಘಂಟೆಗೆ ಪಟ್ಟಣದ ಶ್ರೀ ಬಸವೇಶ್ವರ ದೇವಸ್ಥಾನ ದಿಂದ ಪ್ರಾರಂಭ ಗೊಳ್ಳಲಿರುವ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯೂ ಊರಿನ ಎಲ್ಲಾ ದೇವಸ್ಥಾನಗಳ ಪಲ್ಲಕ್ಕಿಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೊರಬ ರಸ್ತೆಯ ಬನ್ನಿಮಂಟಪದಲ್ಲಿ ಶಮಿ ಪೂಜೆ ಸಲ್ಲಿಸಿ ಬನ್ನಿ ಮುಡಿಯವುದರೊಂದಿಗೆ ಮುಕ್ತಾಯ ಗೊಳ್ಳಲಿದೆ ಎಂದರು.

The Siasat News - Images

ಈ ಸಂಧರ್ಭದಲ್ಲಿ ಉತ್ಸವ ಸಮಿತಿಯ ಕಾರ್ಯದರ್ಶಿ ಸಂತೋಷ್ ಎಸ್, ಖಜಾಂಚಿ ವಿಷ್ಣು ರಾಯ್ಕರ್ , ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲ ಸೇರಿದಂತೆ ಉತ್ಸವ ಸಮಿತಿಯ ಸದಸ್ಯರಾದ ಈರಣ್ಣ( ಕೆಂಪ್ಯ) ಯುವರಾಜ ಬಳ್ಳಾರಿ, ಟಿ ರಾಮು, ಟಿಡಿ ಮಂಜು, ಮಂಜುನಾಥ ಜಿಲೇಬಿ, ಆಟೋ ಮೈಲಾರಿ, ಹಾಗೂ ಇನ್ನಿತರರು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *