ಶಿರಾಳಕೊಪ್ಪ:14/2/2026
ಹತ್ತಿರದ ಬಿಳಿಕಿ ಗ್ರಾಮದ ಒಂದನೇ ಅಂಗವಾಡಿ ಕೇಂದ್ರದಲ್ಲಿ ಹೆಲ್ಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೇಮ (52)ಎಂಬುವರು ಅವರು ವಾಸವಿದ್ದ ಮನೆಯಲ್ಲಿ ಅನುಮಾನಸ್ಪದ ವಾಗಿ ಸಾವು ಕಂಡಿದ್ದಾರೆ..
ನಿನ್ನೆ ರಾತ್ರಿ ತನಕನೂ ಆರೋಗ್ಯ ವಾಗಿದ್ದ ಅಂಗನವಾಡಿ ಹೆಲ್ಪರ್ ಬೆಳಗ್ಗೆ ಹೊತ್ತಾದರೂ ಮನೆ ಬಾಗಿಲು ತೆರೆಯದೆ ಇದ್ದಾಗ ಅಕ್ಕ ಪಕ್ಕದವರು ಹೋಗಿ ನೋಡಿದಾಗ ಪ್ರೇಮ ಅವರು ಹೆಣವಾಗಿ ಮೈ ಮೇಲೆ ಬಟ್ಟೆ ಇಲ್ಲದೆ ಪತ್ತೆ ಯಾಗಿದ್ದಾರೆ.
ಶಿರಾಳಕೊಪ್ಪ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಗೊಂಡಿದ್ದಾರೆಂದು ತಿಳಿದು ಬಂದಿದೆ.
ವರದಿ: ನವೀದ್ ಶಿರಾಳಕೊಪ್ಪ

