ಶಿರಾಳಕೊಪ್ಪ:8/9/2025
ಹತ್ತಿರದ ಶಿರಾಳಕೊಪ್ಪ-ಹಿರೇಕೆರೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಹುಲುಗಿನಕೊಪ್ಪ ಗ್ರಾಮದಲ್ಲಿ ಖಾಸಗಿ ವ್ಯಕ್ತಿ ಗಳಿಂದ ಗ್ರಾಮದ ಬಸ್ಟ್ಯಾಂಡ್ ಕಬಳಿಕೆ ಆಗಿದೆ ಎಂದು ಗ್ರಾಮದ ಮಹಿಳೆಯರಿಂದ ಇಂದು ಪ್ರತಿಭಟನೆ
ನಡೆಯಿತು.
ಶಿಕಾರಿಪುರ ತಾಲ್ಲೂಕು ಕೊರಟಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹುಲುಗಿನ ಕೊಪ್ಪ ಗ್ರಾಮ ಸೇರಿದಂತೆ ಸಮೀಪದ ಹಲವಾರು ಹಳ್ಳಿ ಗಳಿಗೆ ಅನುಕೊಲ ವಾಗುವ ರೀತಿಯಲ್ಲಿ ಕಳೆದ ಸುಮಾರು 50 ವರ್ಷ ಗಳಿಂದ ಇದ್ದ ಗ್ರಾಮದ ಬಸ್ಟ್ಯಾಂಡನ್ನು ಸ್ಥಳೀಯ ವ್ಯಕ್ತಿ ಕಬಳಿಕೆ ಮಾಡಿಕೊಂಡು ಹಳೆಯ ಬಸ್ಟ್ಯಾಂಡ್ ಕಟ್ಟಡವನ್ನು ಹಂತ ಹಂತ ವಾಗಿ ಧ್ವಂಸಗೊಳಿಸಿ ತನ್ನದಾಗಿಸಿ ಕೊಂಡಿದ್ದಾರೆಂದು ದೊರಿದ ಸ್ಥಳೀಯರು, ವಿದ್ಯಾರ್ಥಿ ಗಳು, ಮತ್ತು ಮಹಿಳೆಯರು ಬಸ್ಟ್ಯಾಂಡ್ ಜಾಗವನ್ನು ಸಾರ್ವಜನಿಕರಿಗೆ ಮೀಸಲಿ ಡಿಸಬೇಕೆಂದು ಆಗ್ರಹ ವ್ಯಕ್ತ ಪಡಿಸಿದರು.
ಪ್ರತಿಭಟನಾನಿರತರ ಮೇಲೆ ಹಲ್ಲೆ: ಹುಲುಗಿನಕೊಪ್ಪ ಬಸ್ಟ್ಯಾಂಡ್ ನ ಒತ್ತುವರಿ ಖಂಡಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಸ್ಥಳೀಯರಾದ ವೀರೇಶಪ್ಪ ಎಂಬುವರು ಪ್ರತಿಭಟನಾಕಾರರ ಮೇಲೆ ಏಕಾಎಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆಂದು ದೊರಿದ ಗ್ರಾಮದ ಮಹಿಳೆಯರು ದಾಳಿ ಮಾಡಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸ ಬೇಕು ಮತ್ತು ಮಹಿಳೆಯರಿಗೆ, ಮಕ್ಕಳಿಗೆ, ವಿದ್ಯಾರ್ಥಿ ವಿದ್ಯಾರ್ಥಿ ನಿಯರಿಗೆ ಅನುಕೊಲ ಆಗುವ ಹಾಗೆ ಹಿಂದಿಂನಂತೆ ಬಸ್ಟ್ಯಾಂಡ್ ನ್ನು ಮಾಡಿ ಪ್ರಯಾಣಿ ಕರಿಗೆ ಅನುಕೊಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಸದರಿ ಜಾಗಕ್ಕೆ ಸಂಭಂದಪಟ್ಟರು ಸೋಮಶೇಖರ್ ಎಂಬುವರು ಮಾತನಾಡಿ 2005 ರಲ್ಲಿ ಈ ಜಾಗವು ನಮ್ಮ ಕುಟುಂಬದವರು ಪ್ರಹ್ಲಾದ ರಾವ್ ಕುಲಕರ್ಣಿ ಎಂಬುವರಿಂದ ಕ್ರಯಕ್ಕೆ ಪಡೆದಿದ್ದು ನಮ್ಮಲ್ಲಿ ಜಮೀನಿಗೆ ಸಂಭಂದ ಪಟ್ಟಂತೆ ಎಲ್ಲಾ ದಾಖಲೆಗಳು ಇವೆ. ದಾಖಲೆಗಳ ಪ್ರಕಾರ ಜಮೀನು ನಮ್ಮ ಕುಟುಂಬಕ್ಕೆ ಸೇರಿರುತ್ತದೆ. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ಅವರು ನಮ್ಮ ಮೇಲಿನ ದ್ವೇಷಕ್ಕೆ ಈ ರೀತಿ ಮಾಡುತ್ತಿದ್ದಾರೆ. ಗ್ರಾಮದ ಕೆಲ ಹೆಂಗಸರಿಗೆ, ಮಹಿಳಾ ಸಂಘಟನೆಗಳ ಸದಸ್ಯರಿಗೆ ಸುಳ್ಳು ಮಾಹಿತಿ ನೀಡಿ ಪ್ರಭಟನೆ ಮಾಡಿಸುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಹುಲುಗಿನ ಕೊಪ್ಪ ಗ್ರಾಮದ ವಿಶ್ವ ವಿನೋತ, ಬಸವರಾಜಪ್ಪಕರಿಬಸಪ್ಪ ಕಾಲ್ವಿಹಳ್ಳಿ ಉಜ್ಜಪ್ಪ ರುದ್ರಣ್ಣ. ಸುಮಾ, ಬಸಮ್ಮ, ಗೌರಮ್ಮ, ಜ್ಯೋತಿ, ಶಶಿಕಲಾ ಮುಂತಾದವರು ಪಾಲ್ಗೊಂಡಿದ್ದರು.
ವರದಿ:ನವೀದ್ ಶಿರಾಳಕೊಪ್ಪ

