ಬಜ್ಮೆ ಉಮ್ಮೀದ್ ಅದೀಬಿ ಶಿರಾಳಕೊಪ್ಪ ವತಿಯಿಂದ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ…

The Siasat News - Images

ಶಿರಾಳಕೊಪ್ಪ:11-12-2024

ಪಟ್ಟಣದ ಬಜ್ಮೆ ಉಮ್ಮೀದ್ ಅದೀಬಿ ಸಾಂಸ್ಕೃತಿಕ ಸಮಿತಿ ವತಿಯಿಂದ ಡಿಸೆಂಬರ್ 13 ಶುಕ್ರವಾರ ದಂದು ರಾತ್ರಿ 8:30 ಘಂಟೆ ಯಿಂದ ಇಲ್ಲಿನ ಟಿಪ್ಪು ಕಲ್ಯಾಣ ಮಂಟಪ ದಲ್ಲಿ ರಾಷ್ಟ್ರೀಯ ಮಟ್ಟದ ಉರ್ದು ಕವಿ ಸಮ್ಮೇಳನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮೊಹಮ್ಮದ್ ಅಯೂಬ್ ಕೆ. ಜಿ. ಎನ್ ತಿಳಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವೂ ಉರ್ದು ಕವಿ ಸಮ್ಮೇಳನ ನಡೆಯಲಿದ್ದು ಈ ಬಾರಿ ರಾಷ್ಟ್ರೀಯ ಮಟ್ಟದ ಉರ್ದು ಕವಿಗಳನ್ನು ಆಮಂತ್ರಿಸಲಾಗಿದೆ ಎಂದರು. ಸಮಿತಿಯ ಸಾಮಾಜಿಕ ಮಾಧ್ಯಮ ಸಂಚಾಲಕ ಇರ್ಫಾನ್ ಮುಹೀಬ್ ಸಾಬ್ ಮಾತನಾಡಿ ಜಗತ್ತಿನಾದ್ಯಂತ ಸುಮಾರು 70 ಮಿಲಿಯನ್ ಜನರು ಮೊದಲ ಭಾಷೆಯಾಗಿ ಮತ್ತು 100 ಮಿಲಿಯನ್‌ಗಿಂತಲೂ ಹೆಚ್ಚು ಜನರು ಎರಡನೇ ಭಾಷೆಯಾಗಿ ಉರ್ದು ಭಾಷೆಯನ್ನು ಬಳಕೆ ಮಾಡುತ್ತಿದ್ದು ಭಾರತದ ಸಂವಿಧಾನದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟಿರುವ ಭಾಷೆ ಉರ್ದು ಭಾಷೆಯಾಗಿದೆ. ಕನ್ನಡದ ನಂತರ ಕರ್ನಾಟಕದಲ್ಲಿ ಅತೀ ಹೆಚ್ಚು ಜನ ಮಾತನಾಡುವ ಭಾಷೆ ಉರ್ದು, ಇದು ರಾಜ್ಯದ ಬಹು ಸಂಖ್ಯಾತ ಮುಸಲ್ಮಾನರ ಮಾತ್ರ ಭಾಷೆಯೂ ಹೌದು. ದೇಶದಲ್ಲಿ ಉರ್ದು ಭಾಷೆ ತನ್ನದೇ ಆದ ಸಾಂಸ್ಕೃತಿಕ ಪರಂಪರೆ ಮತ್ತು ಕಲೆ ಯನ್ನು ಹೊಂದಿದೆ. ಉರ್ದು ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಭಾಗವಾಗಿತ್ತು, ಉರ್ದು ಕವಿತೆ, ಪತ್ರಿಕೋದ್ಯಮ ಮತ್ತು ಘೋಷಣೆಗಳು ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದವು ಇತ್ತೀಚಿಗೆ ಉರ್ದು ಭಾಷೆ ಮತ್ತು ಸಂಸ್ಕೃತಿ, ವೇಗವಾಗಿ ನಶಿಸುತ್ತಿದೆ..

ಭಾಷೆಯ ಅಭಿವೃದ್ಧಿ ಮತ್ತು ಭಾಷಿಗರಿಗೆ ಒಳ್ಳೆಯ ಸಂದೇಶಗಳನ್ನು ನೀಡುವ ಸದುದ್ದೇಶ ಬಜ್ಮ್(ಸಮಿತಿ) ಹೊಂದಿದೆ ಎಂದರು.

The Siasat News - Images

ಸಾಹಿತಿ, ಕವಿ ರಹ್ಮತುಲ್ಲಾ ರಹ್ಮತ್ ಶಿರಾಳಕೊಪ್ಪ ಮಾತನಾಡಿ ಸಮ್ಮೇಳನಕ್ಕೆ ಮುಖ್ಯ ಅತಿಥಿ ಯಾಗಿ ಕರ್ನಾಟಕ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರಾಧ್ಯಾಪಕ ಖಧೀರ್ ನಾಜಿಮ್ , ಹಾಗೂ ಕವಿಗಳಾದ ಇಮ್ರಾನ್ ರಾಶಿದ್, ರೋಷನ್ ಶಾಹ್ನೂರ್, ಹಸನ ಅಲಿ, ಆಫ್ಜಲ್ ದಾನಿಶ್, ಆಫ್ಜಲ್ ಪ್ರಯಾಗ್ ರಾಜ್, ಷರೀಫ್ ಅಹ್ಮದ್ ಷರೀಫ್ ಮುಂತಾದವರು ಆಗಮಿಸಲಿದ್ದು ಸಮ್ಮೇಳನದ ಅಧ್ಯಕ್ಷತೆಯನ್ನು ಜಿಲ್ಲೆಯ ಹಿರಿಯ ಉರ್ದು ಪ್ರಾಧ್ಯಾಪಕ ಸಯ್ಯದ್ ಅಖೀಲ್ ಮದಾರ್ ಸಾಹೇಬರು ವಹಿಸಲಿದ್ದಾರೆ. ಸಾರ್ವಜನಿಕರು, ಉರ್ದು ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿ , ನಿಗದಿತ ಸಮಯದಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು.

ಈ ಸಂಧರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಜುಲ್ಫಿಕ್ಕಾರ್ ಆಲಿ, ಖಜಾಂಚಿ ನವೀದ್ ಶಿರಾಳಕೊಪ್ಪ, ಕಾರ್ಯಕ್ರಮದ ಸಂಚಾಲಕ ಶಫಿ ಅಹ್ಮದ್, ಸದಸ್ಯರಾದ ಫಾರೂಕ್, ಮುದಸ್ಸಿರ್, ಸಯ್ಯದ್ ಆಬಿದ್, ಸುಹೈಲ್ ಶುಂಠಿ,ನೂರುಲ್ಲ ತವಕ್ಕಲ್, ಇಮ್ರಾನ್, ಸಾಜೀದ್ ಸುಂಠಿ, ಜಫರ್ ಯಾಬ್, ಎಜಾಜ್, ಮತ್ತಿತರರು ಇದ್ದರು.

Share the news!

Leave a Reply

Your email address will not be published. Required fields are marked *