ಪುಸ್ತಕ ಮತ್ತು ಶಿಕ್ಷಣಕ್ಕೆ ಮಾತ್ರ ಬಡತನ ನಿರ್ಮೂಲನೆ ಮಾಡುವ ಶಕ್ತಿ ಇದೆ-ಪತ್ರಕರ್ತ ನವೀನ್ ಕುಮಾರ್ ಅಭಿಮತ…

The Siasat News - Images

ಶಿರಾಳಕೊಪ್ಪ:13/2/2026

ಪುಸ್ತಕ ಮತ್ತು ಶಿಕ್ಷಣಕ್ಕೆ ಮಾತ್ರ ಬಡತನ ನಿರ್ಮೂಲನೆ ಮಾಡುವಂತಹ ಶಕ್ತಿ ಇದೆ ಪ್ರತಿಯೊಬ್ಬರೂ ಶಿಕ್ಷಣವನ್ನು ಕಡ್ಡಾಯ ವಾಗಿ ಪಡೆಯುವುದರ ಮೂಲಕ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ನೈತಿಕ ವಾಗಿ ಸದೃಢರಾಗಬೇಕೆಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ ನವೀನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಮಠದ ಗದ್ದೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಡು ಬಡತನದಲ್ಲಿ ಹುಟ್ಟಿದರೂ ಶಿಕ್ಷಣ ಮತ್ತು ಪುಸ್ತಕಗಳ ಮೇಲಿನ ಅಚಲ ಪ್ರೀತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಅವರು ದೇಶದ ಸಂವಿಧಾನ ಶಿಲ್ಪಿಯಾಗಿ ಬೆಳೆದು ಬಂದ ಹಾದಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಪುಸ್ತಕ ಮತ್ತು ಶಿಕ್ಷಣವೇ ಮನುಷ್ಯನಿಗೆ ನಿಜವಾದ ಆಸ್ತಿ ಮತ್ತು ಶಕ್ತಿ, ಶಿಕ್ಷಣ ಪಡೆದು ಜ್ಞಾನವಂತರಾದರೆ ಮಾತ್ರ ಬಡತನ ನಿರ್ಮೂಲನೆ ಮಾಡಬಹುದೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

The Siasat News - Images

ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ನಿರ್ದೇಶಕರಾದ ಮಂಜುನಾಥ್ ಮಾತನಾಡಿ ಯಾರೂ ಕೊಡ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಮಹೋನ್ನತ ಧ್ಯೇಯೋದ್ದೇಶದಿಂದ ಶಿಕ್ಷಣ ಇಲಾಖೆಯು ಹಲವು ಕ್ರಾಂತಿಕಾರಿ ಕ್ರಮಗಳನ್ನು ಕೈಗೊಂಡಿದೆ. ಬಡತನ ಅಥವಾ ಸಾಮಾಜಿಕ ಕಾರಣಗಳಿಂದ ಯಾವೊಬ್ಬ ಮಗುವೂ ಶಾಲೆಯಿಂದ ಹೊರಗುಳಿಯಬಾರದು ಎಂಬುದು ಇದರ ಆಶಯವಾಗಿದ್ದು ಇದರ ಸದುಪಯೋಗ ಜನ ಸಾಮಾನ್ಯರು ಪಡೆಯಬೇಕು. ಪೋಷಕರು ಶಾಲೆಯಿಂದ ಆಚೆ ಮನೆಗಳಲ್ಲಿಯೂ ಕೊಡ ಮಕ್ಕಳ ಹೋಮ್ ವರ್ಕ್ ಮತ್ತು ಇತರೇ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ನಿಗಾ ಇಡಬೇಕೆಂದು ಕರೆ ನೀಡಿದರು.

The Siasat News - Images

ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ವೈದ್ಯಕೀಯ ಶಿಕ್ಷಣ(ಎಂ ಬಿ ಬಿ ಎಸ್) ಪೂರೈಸಿ ಸಮಾಜಕ್ಕೆ ಮಾದರಿಯಾದ ಸ್ಥಳೀಯ ವೈದ್ಯ ಡಾ// ಶಿವಕುಮಾರ್ ಮಾತನಾಡಿ ವಿದ್ಯಾರ್ಥಿ ಗಳಿಗೆ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು.

ಸಭಾ ಕಾರ್ಯಕ್ರಮದ ನಂತರ ಶಾಲೆಯ ವಿದ್ಯಾರ್ಥಿ ಗಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆದವು.

The Siasat News - Images

ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಗಿರೀಶ್ ಜಿ ಇವರು ಶಾಲೆಗೆ ನೀರು ಶುದ್ದಿಕರಣ ಘಟಕ ಕೊಡುಗೆ ಯಾಗಿ ನೀಡಿದರು

ಶಾಲೆಯ ಮುಖ್ಯ ಶಿಕ್ಷಕ ಶಂಶೀರ್ ಖಾನ್ ಅಥಿತಿಗಳಿಗೆ ಸ್ವಾಗತಿಸಿದರು. ಶಿಕ್ಷಕ ಶಫಿ ಉಲ್ಲಾ ಖಾನ್ ನಿರೋಪಣೆ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಬಷೀರ್ ಅಹ್ಮದ್ ಸವಣೂರು,ನೀಲಮ್ ಜಿ, ರಾಗೇರ ಮೇಷ್ಟ್ರು, ಸಿ ಆರ್ ಪಿ ನಾಸಿರ್ ಅಹ್ಮದ್, ಮುಖಂಡರಾದ ಮಕ್ಬೂಲ್ ಸಾಬ್, ಪತ್ತಿ ಜಾಫರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಖಾನ್, ಸದಸ್ಯರಾದ ನಯಾಜ್ ಅಹ್ಮದ್, ಅಸದುಲ್ಲ, ಜಬಿ, ಇಮ್ರಾನ್ ಹಾಗೂ ಶಾಲೆಯ ಶಿಕ್ಷಕರು ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *