ಪಡಿತರಕ್ಕಾಗಿ ಪರದಾಡುತ್ತಿರುವ ಪ್ರಜೆಗಳು….ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂವೊ ಕ್ಯೂ.

The Siasat News - Images

ಬೆಂಗಳೂರು:21-10-2024

ರಾಜ್ಯದಲ್ಲಿ ಪಡಿತರ ವಿತರಣೆಗಾಗಿ ಹಿಂದಿದ್ದ ಕೇಂದ್ರ ಸರ್ಕಾರದ ಎನ್ಐಸಿ ಸರ್ವರ್ ಗಳನ್ನು ಬದಲಾಯಿಸಿ ರಾಜ್ಯಸರಕಾರದ ವತಿಯಿಂದ ಹೊಸ ಸರ್ವರಗಳನ್ನು ಅಳವಡಿಸುವ ಕಾರ್ಯ ಅಕ್ಟೊಬರ್ ತಿಂಗಳ ಪ್ರಾರಂಭದಿಂದ ನಡೆದ ಕಾರಣ ಅಕ್ಟೊಬರ್ ತಿಂಗಳ 18ತಾರೀಕಿನವರೆಗೂ ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ವಿಳಂಬ ಆಯಿತು.

The Siasat News - Images
ಹೊಸ ಸರ್ವರ್ ಗಳನ್ನು ಅಳವಡಿಸಿ ಆದ ನಂತರ ಅಕ್ಟೊಬರ್ ತಿಂಗಳ 18 ರಿಂದ ರಾಜ್ಯ ದಲ್ಲಿ ಪಡಿತರ ವಿತರಣೆಗೆ ಅನುಮತಿ ನೀಡಲಾಗಿದ್ದು ಪಡಿತರ ಹಂಚಿಕೆಯಲ್ಲಿ ಭಾರೀ ಸಮಸ್ಯಗಳು ಎದುರಾಗುತ್ತಿದೆ.

ಹೊಸ ಸರ್ವರ್ ಗಳು ಸರಿಯಾಗಿ ಕೆಲಸ ಮಾಡದ ಕಾರಣ ರಾಜ್ಯದಾದ್ಯಂತ  ಪಡಿತರ ಹಂಚಿಕೆಯಲ್ಲಿ ತೊಂದರೆ ಉಂಟಾಗಿದ್ದು ನ್ಯಾಯ ಬೆಲೆ ಅಂಗಡಿಗಳ ಮುಂದೆ ಕಾರ್ಡ್ ದಾರರು ಘಂಟೆ ಗಟ್ಟಲೆ/ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.


ಸರ್ವರ್ ಸಮಸ್ಯಯಿಂದಾಗಿ ಪಡಿತರ ಚೀಟಿದಾರರು ಅಕ್ಕಿ ಪಡೆಯಲು  ತಮ್ಮ ಕೆಲಸ ಕಾರ್ಯ ಗಳನ್ನು ಬಿಟ್ಟು ದಿನಗಂಟಲೆ ನ್ಯಾಯ ಬೆಲೆ ಅಂಗಡಿಗಳ ಮುಂದೆ ನಿಂತು ಕಾಯುವ ಪರಿಸ್ಥಿತಿ ಎದುರಾಗಿದ್ದು ಅತ್ತ ನ್ಯಾಯ ಬೆಲೆ ಅಂಗಡಿಕಾರರು ಕೊಡ ದಿನವಿಡೀ ಸರ್ವರ್ ಬರುವುದನ್ನು ಕಾಯುತ್ತ,  ಆಕ್ರೋಶಭರಿತ  ಕಾರ್ಡ್ ದಾರರನ್ನು ಶಾಂತಿಯಿಂದ ಸಮಾಧಾನ ಪಡಿಸುತ್ತ ಮಾನಸಿಕವಾಗಿ ಕುಗ್ಗಿ ಹೋಗಿರುವುದಂತೂ ಸುಳ್ಳಲ್ಲ.

ಬಡವರ, ಹಸಿದ ಜನರ ಹೊಟ್ಟೆಗೆ ಅನ್ನ ವನ್ನು ನೀಡುವ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯಕ್ಕೆ ಸರ್ವರ್ ಕಾಟ ಕೊಡುತ್ತಿರುವುದು ಜನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರು ರಾಜಕಾರಣಿ ಗಳು ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

The Siasat News - Images

ಆದಷ್ಟು ಬೇಗ ಸರಕಾರ ಈ ಸರ್ವರ್ ಸಮಸ್ಯೆಯನ್ನು ಸರಿ ಪಡಿಸಿ ಜನಸಾಮಾನ್ಯರಿಗೆ ಮತ್ತು ಬಡ ಅಂಗಡಿಕಾರರಿಗೆ ನೆಮ್ಮದಿ ನೀಡಬೇಕು ಎಂಬುದೇ ಈ ಹೊತ್ತಿನ ಕಾಲದ ಕರೆಯಾಗಿದೆ..

ಸಿಯಾಸತ್ ನ್ಯೂಸ್

Share the news!

Leave a Reply

Your email address will not be published. Required fields are marked *