ಶಿಕಾರಿಪುರ:26/1/2026
ಇತ್ತೀಚಿನ ದಿನಗಳಲ್ಲಿ ಮನೋರಂಜನೆ ಎಂಬುವುದುದು ಪ್ರತಿ ಮನೆ ಮನೆಗೆ ಲಗ್ಗೆ ಇಟ್ಟಿದೆ. ಮನೆಯಲ್ಲೇ ಎಲ್ಲಾ ಮನೋರಂಜನೆ ಪಡೆಯುವಂತಹ ಈ ದಿನಗಳಲ್ಲಿ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ಅವಕಾಶ ಗಳು ಕ್ಷೀಣಿಸುತ್ತಿದ್ದು ಜನಗಳಲ್ಲಿ ಸಂಕುಚಿತ ಮನೋಭಾವನೆ ಹೆಚ್ಚಾಗುತ್ತಿದೆ ಎಂದು ರಂಗಾಯಣ ಶಿವಮೊಗ್ಗದ ನಿರ್ದೇಶಕ ಪ್ರಸನ್ನ ಡಿ ಸಾಗರ್ ತಿಳಿಸಿದರು.

ರಂಗಾಯಣ ಶಿವಮೊಗ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗುಡಿ ಸಾಂಸ್ಕೃತಿಕ ಕೇಂದ್ರ ಶಿಕಾರಿಪುರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ “ನಮ್ಮೊಳಗೊಬ್ಬ ಗಾಂಧಿ” ಎಂಬ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಂಗ ಭೂಮಿಯಿಂದಾಗಿ ಜನರಲ್ಲಿ ಸಾಮಾಜಿಕ ಸಂಪರ್ಕ,ಸಾಮೋಹಿಕ ಅನುಭವ, ಸಂವಹನ ಕಲೆ, ಸಾಂಪ್ರದಾಯಿಕ ಮೌಲ್ಯ ಗಳು ಹಾಗೂ ಜಾಗೃತಿ ಮೋಡುತ್ತದೆ.
ನಾಟಕದ ಪ್ರದರ್ಶನ ವೀಕ್ಷಿಸಲು ನೂರಾರು ಜನರು ಒಂದೆಡೆ ಸೇರುತ್ತಾರೆ, ಇದು ಜನರ ನಡುವೆ ನೇರ ಸಂಪರ್ಕವನ್ನು ಏರ್ಪಡಿಸುತ್ತದೆ.ಒಂದೇ ಸಮಯದಲ್ಲಿ ಪ್ರೇಕ್ಷಕರೆಲ್ಲರೂ ನಗುವುದು, ಅಳುವುದು ಅಥವಾ ಆಲೋಚಿಸುವುದು ಅವರಲ್ಲಿ ‘ನಾವೆಲ್ಲರೂ ಒಂದು’ ಎಂಬ ಭಾವನೆಯನ್ನು ಮೂಡಿಸುತ್ತದೆ ಇದು ಸುಖಿ ಸಮಾಜದ ಸಂಕೇತ.
ಹೊಸ ಹೊಸದಾದ ಪ್ರಾಯೋಗಾತ್ಮಕ ರಂಗ ಭೂಮಿ ನಾಟಕಗಳನ್ನು ಮಾಡುವ ಆಸೆ ರಂಗಾಯಣ ಹೊಂದಿದ್ದು ಈ ನಿಟ್ಟಿನಲ್ಲಿ ಕೆಲಸ ನಡೆದಿದೆ ಎಂದರು.

ತಾಲ್ಲೂಕಿನ ಹಿರಿಯ ರಾಜಕಾರಣಿ, ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ ತಮ್ಮ ಯೌವನದಲ್ಲಿ ಮಾಡಿದಂತಹ ನಾಟಕಗಳು ಮತ್ತು ರಂಗು ತರಬೇತಿಗಳ ನೆನಪುಗಳನ್ನು ಮೆಲಕು ಹಾಕಿದರು.
ಪಟ್ಟಣದ ಕೆ. ಎಚ್. ಬಿ ಲೇಔಟ್ ನಲ್ಲಿರುವ ಗುಡಿ ಸಾಂಸ್ಕೃತಿಕ ಕೇಂದ್ರ ದಲ್ಲಿ ರಂಗಾಯಣ ಶಿವಮೊಗ್ಗದ ಕಲಾವಿದರು ಪ್ರದರ್ಶಿಸಿದ ನಾಟಕವನ್ನು ನೂರಾರು ಪ್ರೇಕ್ಷಕರು ವೀಕ್ಷಿಸಿದರು.

ತಾಲ್ಲೂಕು ಪತ್ರಕರ್ತರ ಸಂಘದ ನಿಕಟ ಪೂರ್ವಅಧ್ಯಕ್ಷ ಬಿ ಎಲ್ ರಾಜು ನಿರೋಪಿಸಿದರು ಮತ್ತು ಪತ್ರಕರ್ತ ನವೀದ್ ಶಿರಾಳಕೊಪ್ಪ ವಂದನಾರ್ಪಣೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಇಕ್ಬಾಲ್ ಅಹ್ಮದ್ ಗುಡಿ ಸಾಂಸ್ಕೃತಿಕ ಕಂದ್ರ ಶಿಕಾರಿಪುರ,ಡಾll ಶೈಲಜಾ ಆಡಳಿತಧಿಕಾರಿಗಳು ರಂಗಾಯಣ ಶಿವಮೊಗ್ಗ, ಸ್ನೇಹ ರಂಗದ ಸಂಸ್ಥಾಪಕ ಕೊಪ್ಪಲು ಮಂಜಣ್ಣ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ ಎಸ್ ಹುಚ್ಚರಾಯಪ್ಪ ,ತಾಲ್ಲೂಕು ಕಾರ್ಯ ನಿರತಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್ ಶಿರಾಳಕೊಪ್ಪ, ಡಾll ಕಾಂತರಾಜ್ ಇದ್ದರು.
ವರದಿ:ನವೀದ್ ಶಿರಾಳಕೊಪ್ಪ 9538633929

