ಶಿರಾಳಕೊಪ್ಪ /ತೊಗರ್ಸಿ:21/01/2026
ಹತ್ತಿರದ ತೋಗರ್ಸಿ ಗ್ರಾಮದಲ್ಲಿ ದಿನಾಂಕ 20.01.2026 ಮಂಗಳವಾರ ರಂದು ಡಿಸಿಸಿ ಬ್ಯಾಂಕಿನಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಸೆಂಟರ್ ಶಿಕಾರಿಪುರದ ಶ್ರೀ ಗುಡದಯ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಸ್ವಸಹಾಯ ಗುಂಪಿನ ಮಹಿಳೆಯರಿಗೆ ಆರ್ಥಿಕತೆಯಿಂದ ಮುಕ್ತರಾಗಿ ಸಹಜ ಜೀವನ ನಡೆಸಲು ಹಣವನ್ನು ಹೇಗೆ ಗಳಿಸಬೇಕು ಗಳಿಸಿದ ಹಣವನ್ನು ಹೇಗೆ ಉಳಿಸಬೇಕು ಉಳಿಸಿದ ಹಣವನ್ನು ಹೇಗೆ ಬಳಸಬೇಕು ಎಂಬ ಮಾಹಿತಿಯ ಜೊತೆಗೆ ಜೀವವಿಮೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿಸುವುದಾಗಿ ಮಾಹಿತಿ ನೀಡಿದರು

ಹಾಗೂ ಎಲ್ಲಾ ಮಹಿಳೆಯರು ಸಾಧ್ಯವಾದಷ್ಟು ಸ್ವಉದ್ಯೋಗ ಅಂದರೆ ಕರಕುಶಲ ಉದ್ಯೋಗ, ಹೈನುಗಾರಿಕೆ ಮತ್ತು ಹೊಲಿಗೆ ಇನ್ನಿತರ ಸ್ವಉದ್ಯೋಗಕ್ಕೆ ಸರ್ಕಾರ ಸಬ್ಸಿಡಿ ಸಾಲ, ಬಡ್ಡಿ ರಹಿತ ಸಾಲ ನೀಡುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಲು ಹಾಗೂ ಪ್ರತಿಯೊಬ್ಬ ಮಹಿಳೆಯು ಉದ್ಯೋಗದ ಜೊತೆಗೆ ಉಳಿತಾಯ ಮಾಡಿ ಉಳಿಸಿದ ಹಣ ನಿಮ್ಮ ಕಷ್ಟ ಕಾಲಕ್ಕೆ ಕೈ ಹಿಡಿಯುತ್ತದೆ ಎಂಬ ಸೂಕ್ತ ಮಾಹಿತಿ ನೀಡಿದರು.
ಡಿಸಿಸಿ ಬ್ಯಾಂಕಿನ ಪ್ರಧಾನ ಸಹಾಯಕ ವ್ಯವಸ್ಥಾಪಕರಾದ ಶ್ರೀ ಗಣಪತಿ ಯಶಸ್ವಿನಿ ಯೋಜನೆ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ನಲ್ಲಿ ಯಶಸ್ವಿನಿ ಜೀವ ವಿಮೆ ಮಾಡಿಸಲಾಗುತ್ತದೆ ಎಂಬ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 35ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮಹಿಳೆಯರು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಸಿ.ಸುರೇಶ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ವರದಿ: ವಿನಯ್ ವಾಲಿ ತೊಗರ್ಸಿ

