ಶಿರಾಳಕೊಪ್ಪ:14-8-2025
ತಡಸ- ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಸರಕಾರದ ವತಿಯಿಂದ ಕುಟ್ರಹಳ್ಳಿ ಮತ್ತು ಕಲ್ಲಾಪುರ ಬಳಿ ಅಳವಡಿಸಿರುವ ಟೂಲ್ ಗಳ ವಿಚಾರವಾಗಿ ನಡಿಯುತ್ತಿರುವ ಕರ್ನಾಟಕ ವಿಧಾನಸಭೆ ಆಧಿವೇಶನದಲ್ಲಿ ಸಂಬಂಧ ಪಟ್ಟ ಸ್ಥಳೀಯ ರಾಜಕೀಯ ಪ್ರತಿನಿಧಿ ಗಳು ಧ್ವನಿ ಎತ್ತ ಬೇಕು, ಚರ್ಚೆ ನಡೆಸಿ ಸ್ಥಳೀಯ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯ ನಿವಾರಣೆ ಮಾಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧಕ್ಷ ಈರಣ್ಣ ಪ್ಯಾಟಿ ಆಗ್ರಹಿಸಿದರು.

ಪತ್ರಿಕಾಘೋಷ್ಟಿ ಯಲ್ಲಿ ಮಾತನಾಡಿದ ಅವರು ಶಿಕಾರಿಪುರ ತಾಲ್ಲೂಕು ಟೂಲ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಕಳೆದ ವರ್ಷದಿಂದ ಸದರಿ ಟೂಲ್ ಗಳ ವಿರುದ್ಧ ಹೋರಾಟ ನಡೆಯುತ್ತಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ ಆದರೆ ಈವರೆಗೂ ಉತ್ತರ ಬಂದಿಲ್ಲ. ಸ್ಥಳೀಯ ಎಲ್ಲಾ ರಾಜಕೀಯ ಪ್ರತಿನಿಧಿಗಳಿಗೂ ಮನವಿ ಸಲ್ಲಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಿಕಾರಿಪುರ ತಾಲ್ಲೂಕು ಶಾಸಕರಾದ ಬಿ ವೈ ವಿಜಯೇಂದ್ರ ರವರ ನೇತೃತ್ವ ದಲ್ಲಿ ಲೋಕೋಪಯೋಗಿ ಸಚಿವರಿಗೆ ಸಮಿತಿಯವರು ಭೇಟಿ ಮಾಡಿ ಸಮಸ್ಯಯನ್ನು ಮನವರಿಕೆ ಮಾಡಲಾಗಿದೆ ಆದರೆ ಅಧಿವೇಶನದಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿತ್ತು ಆದರೆ ಕಳೆದ ಎರಡೂ ಅಧಿವೇಶನಗಳಲ್ಲಿ ಈ ಟೂಲ್ಗಳ ವಿಚಾರವಾಗಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಮತ್ತು ನಮ್ಮ ಸಮಸ್ಯ ಯನ್ನು ಬಗೆ ಹರಿಸುವ ಕುರಿತು ಕೆಲಸ ಆಗಲಿಲ್ಲ.
35 ಕಿಲೋ ಮೀಟರ್ ಅಂತರದಲ್ಲಿ ಎರಡೆರಡು ಟೂಲ್ ಗಳು ಅಳವಡಿಸಿರುವ ಕಾರಣ ಸೊರಬ, ಶಿಕಾರಿಪುರ ತಾಲ್ಲೂಕಿನ ಜನಸಾಮಾನ್ಯರಿಗೆ ದಿನ ನಿತ್ಯ ತಮ್ಮ ಕೆಲಸಕಾರ್ಯ ಗಳ ನಿಮಿತ್ತ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಗಳಿಗೆ ಓಡಾಡಲು ಅನಗತ್ಯ ಆರ್ಥಿಕ ಹೊರೆ ಆಗಿದೆ. ಟೂಲ್ ಗಳಿಂದಾಗಿ ಬಸ್ ಚಾರ್ಜ್ ಗಳು ಕೊಡ ಜಾಸ್ತಿ ಆಗಿದ್ದು ಜನ ಸಾಮಾನ್ಯರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆ ಉಂಟಾಗಿದೆ ಈ ಬಾರೀನಾದರೂ ನಡೆಯುತ್ತಿರುವ ಮಳೆಗಾಲದ ಆಧಿವೇಶನ ದಲ್ಲಿ ವಾಗ್ದಾನ ಮಾಡಿದಂತೆ ಲೋಕೋಪಯೋಗಿ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಸ್ಥಳೀಯ ಶಾಸಕರು ಚರ್ಚೆ ನಡೆಸಿ ಟೂಲ್ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಆಗ್ರಹಿಸಿದರು.
ಜನರಲ್ಲಿ ಆಕ್ರೋಶ: ಲೋಕಲ್ ನಲ್ಲಿ ಓಡಾಡಲು ಹಣ ನೀಡೇ ಓಡಾಡಬೇಕಾಗಿರುವ ಈಗಿನ ಸ್ಥಿತಿ ಜನರಲ್ಲಿ ಭಾರೀ ಆಕ್ರೋಶಕ್ಕೆ ಕಾರಣ ವಾಗಿದೆ. ಅಧಿವೇಶನ ದಲ್ಲಿ ಚರ್ಚೆ ನಡೆದು ಈ ಟೂಲ್ ಸಮಸ್ಯಗೆ ಇತಿಶ್ರೀ ಹಾಡಲಾಗಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ, ಹೋರಾಟಗಳು ನಡೆಯುತ್ತವೆ. ಎಲ್ಲಾ ಸಂಘ ಸಂಸ್ಥೆ ಗಳು, ಲಾರಿ, ಬಸ್, ಕ್ಯಾಂಟರ್,ಟ್ಯಾಕ್ಸಿ ಸಂಘಟನೆ ಸೇರಿದಂತೆ ಎಲ್ಲರೂ ಹೋರಾಟಕ್ಕೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಆದರೆ ಇದೆಕ್ಕೆಲ್ಲ ನಮ್ಮ ರಾಜಕೀಯ ಪ್ರನಿಧಿಗಳು, ಅಧಿಕಾರಿಗಳು ಆಸ್ಪದ ಕೊಡುವುದಿಲ್ಲ ಬಡವರ ಪಾಲಿನ ಸಮಸ್ಯ ಬಗೆ ಹರಿಸಿ ಕೊಡುತ್ತಾರೆ ಎಂದು ನಂಬಿಕೆ ಇದೆ ಎಂದು ಈರಣ್ಣ ಆಶಾ ಭಾವನೆ ವ್ಯಕ್ತ ಪಡಿಸಿದರು.
ವರದಿ: ನವೀದ್ ಶಿರಾಳಕೊಪ್ಪ

