ಜಾನಪದ ಸಾಹಿತ್ಯ ವಿಶ್ವಕ್ಕೆ ಜ್ಞಾನವನ್ನು ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಿ ಮಂಜುನಾಥ್ ಹೇಳಿದರು.
ಪಟ್ಟಣದ ಗುರು ಭವನದಲ್ಲಿ ಗುರುವಾರ ನಡೆದ ವಿಶ್ವ ಜಾನಪದ ದಿನಾಚರಣೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆ ನಮ್ಮ ಮುಂದಿದೆ ಇದರಿಂದ ನಮ್ಮ ಕ್ರಿಯಾಶೀಲತೆ ಮರೆಯಾಗಿದ್ದು ಮತ್ತೆ ಅದನ್ನು ಮರು ಸ್ಥಾಪಿಸುವ ಅವಶ್ಯಕತೆ ಇದೆ. ನಮ್ಮ ಆಹಾಋ ಪದ್ದತಿ , ದೈನಂದಿನ ಚಟುವಟಿಕೆಗಳು , ಕ್ರೀಡಾ ಮನೋಭಾವ, ಸಾಹಿತ್ಯ ಸಂಸ್ಕೃತಿ ನಮ್ಮಿಂದ ಮರೆಯಾಗಿದ್ದು ಜಾನಪದ ಜೀವನ ಒಪ್ಪಿಕೊಳ್ಳುವದ ಮೂಲಕ ನಮ್ಮ ಬದುಕನ್ನು ಕ್ರೀಯಾಶೀಲಗೊಳಿಸಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶಪ್ಪ ಮಾತನಾಡಿ ಮೊಬೈಲ್ ಲೋಕ ನಮ್ಮನ್ನು ದಾರಿ ತಪ್ಪಿಸುವ, ಸೋಮಾರಿಯನ್ನಾಗಿಸಿವ ಭ್ರಮಾಲೋಕವನ್ನು ಸೃಷ್ಟಿಸಿದೆ. ಇದರಿಂದ ನಿಜವಾದ ಬದುಕುಕಿನ ಕ್ಷಣಗಳು ಕಲೆದು ಹೋಗುತ್ತಿವೆ. ಯುವ ಮನಸ್ಸುಗಳು ಇದನ್ನು ಅರ್ಥಮಾಡಿಕೊಂಡು ಬದುಕಿಗೆ ಪೂರಕವಾಗುವ ಜಾನಪದ ಲೋಕದೆಡೆಗೆ ನಮ್ಮನ್ನು ನಾವು ತೆರೆದುಕೊಳ್ಳುವ ಸಂದAರ್ಬ ಇಂದು ಅಗತ್ಯವಾಗಿದೆ. ಜಾನಪದರ ಪ್ರಾಮಾಣಿಕತೆ, ಬುದ್ದಿವಂತಿಕೆ, ಸರಳತೆ ಅಳವಡಿಕೊಳ್ಳಲು ಕರೆ ನೀಡಿದರು.
ಜಾನಪದ ಕುರಿತು ಕರ್ನಾಟಕ ನಾಪದ ಪರಿಷತ್ ಅಧ್ಯಕ್ಷೆ ಗೌರಮ್ಮ ಮಂಚಾಲಿ ವಿಷೇಶ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ವಿವಿಧ ಜಾನಪದ ನೃತ್ಯ, ಹಾಡುಗಳನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಶಿವು ನಾಯಕ್ ಟಿ, ಶಿರಾಳಕೊಪ್ಪ ಘಟಕ ಕ.ಸಾ.ಪ ಅಧ್ಯಕ್ಷ ಟಿ.ಎಂ ಮಂಜಣ್ಣ, ಸಹ ಪ್ರಾಧ್ಯಾಪಕ ಡಾ. ರಾಜೇಂದ್ರ ಟಿ. ದೈಹಿಕ ಶಿಕ್ಷಣ ಶಿಕ್ಷಕ ರವಿ ಬಂಗೇರ್ ಉಪಸ್ಥಿತರಿದ್ದರು.
22ಎಸ್.ಎಲ್.ಕೆ.ಪಿ 01 ಫೋಟೋ01: ಶಿರಾಳಕೊಪ್ಪದ ಗುರು ಭವನದಲ್ಲಿ ನಡೆದ ವಿಶ್ವ ಜಾನಪದ ದಿನಾಚರಣೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.

