ಶಿರಾಳಕೊಪ್ಪ: ಜಾತಿ, ಧರ್ಮವನ್ನು ಬದಿಗಿಟ್ಟು ಬಡವರ ಕಲ್ಯಾಣಕ್ಕಾಗಿ ಶ್ರಮಿಸಲು ಪಟ್ಟಣದ ಯುವಕರು ಸಂಘಟಿತರಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಯುವ ಮುಖಂಡ ಹಾರೂನ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿ.ಜೆಡ್.ಜಮೀರ ಅಹ್ಮದ್ ಖಾನ್ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜಮೀರ್ ಅಹ್ಮದ್ ಖಾನ್ ರವರ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿರುವ ಈ ಸಂಘಟನೆಯ ಮೂಲಕ ಸಾಮಾಜಿಕ, ಸಾಂಸ್ಕೃತಿ , ಮನರಂಜನೆ ಹಾಗೂ ಕ್ರೀಡಾ ಕೂಟಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ, ಇರ್ಷಾದ್ ಮದನಿ, ಸಾಬೀರ್ ಜಿಂಜರ್, ಅಜಮ್, ಶಫೀ,ಲುಕ್ಮಾನ್ , ಫಸೀ, ಅಮೀನ್ ಸೇರಿದಂತೆ ಹಲವಾರು ಯುವಕರು ಭಾಗವಹಿಸಿದ್ದರು.

