ಶಿರಾಳಕೊಪ್ಪ:22-10-2024
ಇಂದಿನ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದಾರೆ. ಗಾಂಜಾದಂತಹ ಅಮಲು ಪದಾರ್ಥಗಳ ಸೇವನೆಯಿಂದ ಸಮಾಜದ ಸ್ವಾಥ್ಯ ಹಾಳಾಗುತ್ತಿದೆ. ಅಪರಾಧ ಪ್ರಕರಣಗಳು ಇಂಥಹ ಸಮಯದಲ್ಲೆ ಹೆಚ್ಚಾಗಿವೆ. ನಿಮ್ಮನ್ನು ವಿದ್ಯಾಬ್ಯಾಸಕ್ಕಾಗಿ ಕಳಿಸುವವರಿಗೆ ಮತ್ತು ಕಲಿಸಿದವರಿಗೆ ಗೌರವ ನೀಡುವ ಕೆಲಸ ಮಾಡಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಅನೀಲ್ ಕುಮಾರ್ ಭೂಮರೆಡ್ಡಿ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಕಾನೂನಿನ ಅಡಿಯಲ್ಲಿ ಮಹಿಳೆಯರು ಮಕ್ಕಳನ್ನು ರಕ್ಷಣೆ ಮಾಡಲು ವಿಷೇಶ ಆಧ್ಯತೆ ನೀಡಲಾಗಿದೆ. ಆದರೂ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ರಾಜ್ಯದಲ್ಲೆ ಮೊದಲ ಸ್ಥಾನದಲ್ಲಿವೆ ಎಂಬುದು ಆತಂಕಕಾರಿ ವಿಷಯವಾಗಿದೆ.

ದೇಶವನ್ನು ಯುವ ಜನತೆ ಸದೃಡವಾಗಿಸಲು ತಮ್ಮ ಶಕ್ತಿಯನ್ನು ವಿನಿಯೋಗಿಸುವ ಸಮಯದಲ್ಲೇ ದೇಶದ ದುರಂತ ಎಂದರೆ ೧೮ ವಯಸ್ಸಿನ ಒಳಗಿನ ಮಕ್ಕಳು ಮದುವೆಗೆ ಮುನ್ನವೇ ತಾಯಿಯಾಗುತಿದ್ದಾರೆ. ಮೊಬೈಲ್ ನಮ್ಮ ಬಳಕೆಗೆ ಇರುವುದು, ಎಷ್ಟು ಬೇಕೊ ಅಷ್ಟೇ ಬಳಸಿ. ತಂತ್ರಜ್ಞಾನ ಕೇವಲ ನಮ್ಮ ಸಹಾಯಕ, ಮೊಬೈಲ್ ದಾಸರಾಗಬೇಡಿ, ತಿಳುವಳಿಕೆ ಇದ್ದವರೂ ಸಹ ಬಲಿಪಶು ಆಗುತಿದ್ದಾರೆ. ಕಣ್ಣು ಮುಚ್ಚಿ ಎಲ್ಲವನ್ನೂ ಒಪ್ಪಿಕೊಳ್ಳಬೇಡಿ ಪ್ರಶ್ನಿಸುವ ಸಾಮರ್ಥ ಬೆಳೆಸಿಕೊಳ್ಳಿ ಎಂದು ತಿಳಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ನಿಮ್ಮ ಖಾಸಗಿ ವಿಚಾರಗಳನ್ನು ಸ್ಟೇಟಸ್ಗೆ ಹಾಕಿ ಕಳ್ಳ ಕಾಕರಿಗೆ ಕಳ್ಳತನಕ್ಕೆ ಆಹ್ವಾನ ನೀಡುತ್ತಿದ್ದೀರಿ. ಇದಕ್ಕೆ ಬಹಳಷ್ಟು ಉದಾರಣೆಗಳು ನಮ್ಮಲ್ಲಿವೆ. ಎಂದು ಹೇಳಿ ಸೈಬರ್ ಕ್ರೈಂ ಕುರಿತು ವಿದ್ಯಾರ್ಥಿ ಗಳಿಗೆ ಸಮಗ್ರ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ಪ್ರಭಾಕರ್ ಮಂಟೋರೆ ಮಾತನಾಡಿದರು.
ಪಟ್ಟಣದ ಪಿ.ಎಸ್.ಐ ಪ್ರಶಾಂತ್ ಕುಮಾರ್ ಟಿ. ಬಿ ಮಾತನಾಡಿ ವ್ಯಸನ ಮುಕ್ತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಹೊಣೆಗಾರಿಕೆ ಹೆಚ್ಚಿದೆ ಎಂದರು. ಉಪನ್ಯಾಸಕ ಮಲ್ಲಿಕಾರ್ಜುನ ನಿರೂಪಿಸಿದರು.
ವರದಿ:ನವೀದ್ ಶಿರಾಳಕೊಪ್ಪ

